‘ಅಶ್ವಿನ್‌ಗೆ ನನ್ನ ಮೇಲೆ ಕ್ರಶ್ ಇರುವುದು ಇಡೀ ಶಾಲೆಗೆ ತಿಳಿದಿತ್ತು’ – ಆರ್.ಅಶ್ವಿನ್ ಜೊತೆಗಿನ– ಲವ್ ಸ್ಟೋರಿ ಬಿಚ್ಚಿಟ್ಟ ಪತ್ನಿ ಪ್ರೀತಿ

‘ಅಶ್ವಿನ್‌ಗೆ ನನ್ನ ಮೇಲೆ ಕ್ರಶ್ ಇರುವುದು ಇಡೀ ಶಾಲೆಗೆ ತಿಳಿದಿತ್ತು’ – ಆರ್.ಅಶ್ವಿನ್ ಜೊತೆಗಿನ– ಲವ್ ಸ್ಟೋರಿ ಬಿಚ್ಚಿಟ್ಟ ಪತ್ನಿ ಪ್ರೀತಿ

ಐಪಿಎಲ್ ಟೂರ್ನಿಯಲ್ಲಿ ಮಿಂಚುತ್ತಿರುವ ಸ್ಪಿನ್ನರ್ ಆರ್.ಅಶ್ವಿನ್ ಯಶಸ್ಸಿನ ಹಿಂದಿರುವ ಶಕ್ತಿಯೇ ಪತ್ನಿ ಪ್ರೀತಿ. ಕ್ರಿಕೆಟ್ ಬದುಕಿನಲ್ಲಿ ಅಶ್ವಿನ್ ಎದುರಿಸಿದ ಏಳು ಬೀಳಿನ ಜೊತೆ ನಿರಂತರವಾಗಿ ಜೊತೆಗಿದ್ದ ಪತ್ನಿ ಪ್ರೀತಿ ಇದೇ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಜಿಯೋ ಸಿನಿಮಾದ ಹ್ಯಾಂಗೌಟ್ ಕಾರ್ಯಕ್ರಮದಲ್ಲಿ ಪ್ರೀತಿ ಅಶ್ವಿನ್,  ಪತಿಯ ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ, ವೇದಾ ಕೃಷ್ಣಮೂರ್ತಿ ಹಾಗೂ ಡ್ಯಾನಿಶ್ ಶೇಠ್ ಕೂಡಾ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಕ್ರಿಕೆಟ್ ಜಗತ್ತಿನ ಹೀರೋ – ಜೈಸ್ವಾಲ್ ಯಶಸ್ಸಿನ ಹಿಂದಿದೆ ರೋಚಕ ಕಥೆ..!

ಟೀಮ್ ಇಂಡಿಯಾದ ಸ್ಪಿನ್ನರ್ ಅಶ್ವಿನ್ ಕ್ರಿಕೆಟ್ ಆಟದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದೀಗ ಅವರ ಪತ್ನಿ ಪ್ರೀತಿ, ಅಶ್ವಿನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಾವು ಚಿಕ್ಕಂದಿನಿಂದಲೂ ಜೊತೆಗೇ ಇದ್ದೆವು. ಒಂದೇ ಸ್ಕೂಲ್‌ನಲ್ಲಿ ಓದಿದ್ದು. ಶಾಲಾ ದಿನಗಳಿಂದ ಹಿಡಿದು ವಯಸ್ಕರಾಗುವವರೆಗೂ ನಾವು ಜೊತೆಯಾಗಿಯೇ ಬೆಳೆದೆವು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ. ಅಶ್ವಿನ್ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕ್ರಶ್ ಇತ್ತು. ಈ ವಿಚಾರ ಇಡೀ ಶಾಲೆಗೆ ತಿಳಿದಿತ್ತು. ಆಮೇಲೆ ಅವರು ಕ್ರಿಕೆಟ್ ಕಡೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಬೇರೆಡೆ ತೆರಳಿದರು. ಹೀಗಿದ್ದರೂ ನಾವಿಬ್ಬರು ಹುಟ್ಟುಹಬ್ಬ, ಫ್ಯಾಮಿಲಿ ಕಾರ್ಯಕ್ರಮದಲ್ಲಿ ಆಗಾಗ ಭೇಟಿ ಆಗುತ್ತಿದ್ದೆವು. ತುಂಬಾ ಸಮಯದ ಬಳಿಕ ಅಶ್ವಿನ್ ನನ್ನನ್ನು ಒಂದು ದಿನ ಭೇಟಿ ಆದರು. ಆಗ ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಹೀಗೆ ಅಲ್ಲಿಂದ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿ ಆಯಿತು ಎಂದು ಹೇಳಿದ್ದಾರೆ. ಇನ್ನು ಅಶ್ವಿನ್ ಪ್ರಪೋಸ್ ಮಾಡಿದ ಬಗ್ಗೆಯೂ ಪ್ರೀತಿ ಅವರು ತಿಳಿಸಿದ್ದು, ನನ್ನನ್ನು ಅಶ್ವಿನ್ ಒಂದು ದಿನ ನೇರವಾಗಿ ಕ್ರಿಕೆಟ್ ಗ್ರೌಂಡ್‌ಗೆ ಕರೆದುಕೊಂಡು ಹೋದರು. ನಾನು ನಿನ್ನನ್ನು ಈ ಜೀವ ಇರುವವರೆಗೆ ಇಷ್ಟಪಡಲು ಬಯಸುತ್ತೇನೆ. ನಮ್ಮಿಬ್ಬರ ಪರಿಚಯವಾಗಿ 10 ವರ್ಷಗಳಾದರೂ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿ ಪ್ರಪೋಸ್ ಮಾಡಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಅಶ್ವಿನ್ ಅವರ ಪ್ರಪೋಸಲ್‌ಗೆ ಯೆಸ್ ಎಂದ ಪ್ರೀತಿ ನವೆಂಬರ್ 13, 2011ರಂದು ಮದುವೆ ಆದರು. ಇವರಿಬ್ಬರಿಗೆ ಅಖಿರಾ ಹಾಗೂ ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.

suddiyaana