ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಳೆರಾಯನ ಅಡ್ಡಿ..!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಳೆರಾಯನ ಅಡ್ಡಿ..!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ನಡುವೆ ವರುಣರಾಯ ಎಂಟ್ರಿಕೊಟ್ಟಿದ್ದಾನೆ. ಪಂದ್ಯ ಆರಂಭಕ್ಕೂ ಮುನ್ನ ಮಳೆರಾಯನ ಕಾಟ ಶುರುವಾಗಿತ್ತು. ಇದೀಗ ಮೊದಲ ಇನ್ನಿಂಗ್ಸ್ ಮುಗಿಯುವ ಮುನ್ನವೇ ಮತ್ತೊಮ್ಮೆ ಮಳೆಯ ಕಾಟ ಶುರುವಾಗಿದೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಬದೋನಿ 19ನೇ ಓವರ್‌ನ 2ನೇ ಎಸೆತದಲ್ಲಿ ಬೌಂಡರಿ ಹಾಗೂ 3ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿ, ಹುಮ್ಮಸ್ಸಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗಲೇ ಮಳೆಯಿಂದ ಪಂದ್ಯ ಸ್ಥಗಿತವಾಗಿದೆ.

ಇದನ್ನೂ ಓದಿ:  ಐಪಿಎಲ್ ನೀತಿ ಸಂಹಿತೆಯನ್ನು ಮೂರು ಬಾರಿ ಉಲ್ಲಂಘಿಸಿದ ವಿರಾಟ್ ಕೊಹ್ಲಿ – ಆರ್‌ಸಿಬಿ ಕೆಲ ಆಟಗಾರರ ಸಂಭಾವನೆಗಿಂತಲೂ ಹೆಚ್ಚು ದಂಡ ಕಟ್ಟಿದ ಕ್ರಿಕೆಟಿಗ..!

ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಕೃನಾಲ್ ಪಾಂಡ್ಯ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದ್ಯ 10 ಅಂಕಗಳೊಂದಿಗೆ ಲಕ್ನೋ ಮೂರನೇ ಸ್ಥಾನದಲ್ಲಿದ್ದು, ಅಷ್ಟೇ ಅಂಕಗಳೊಂದಿಗೆ ಚೆನ್ನೈ ನಾಲ್ಕನೇ ಸ್ಥಾನದಲ್ಲಿದೆ.

ಸಿಎಸ್‌ಕೆ ತಂಡದಲ್ಲಿ ಬೌಲರ್‌ಗಳು ಮಿಂಚಿದ್ದಾರೆ. ಅದರಲ್ಲೂ ಲಕ್ನೋದ ಐದು ವಿಕೆಟ್‌ಗಳನ್ನು ಸ್ಪಿನ್ ಬೌಲರ್‌ಗಳು ಕಬಳಿಸಿದ್ದಾರೆ. ತೀಕ್ಷಣ ಮತ್ತು ಮೊಯಿನ್ ಅಲಿ ತಲಾ ಎರಡು ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದರು.

suddiyaana