ಮೇ 6 ರಂದು ಅಪ್ಪಳಿಸಲಿದೆ ವರ್ಷದ ಮೊದಲ ಚಂಡಮಾರುತ – ಎಲ್ಲೆಲ್ಲಿ ಸೈಕ್ಲೋನ್ ಎಫೆಕ್ಟ್?

ಮೇ 6 ರಂದು ಅಪ್ಪಳಿಸಲಿದೆ ವರ್ಷದ ಮೊದಲ ಚಂಡಮಾರುತ – ಎಲ್ಲೆಲ್ಲಿ ಸೈಕ್ಲೋನ್ ಎಫೆಕ್ಟ್?

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣ ದೇಶದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ ಹೊಸ ಮಾಹಿತಿಯೊಂದನ್ನು ನೀಡಿದೆ. ಮೇ 6 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ 2023 ರ ಮೊದಲ ಸೈಕ್ಲೋನಿಕ್ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಚಂಡಮಾರುತಕ್ಕೆ ‘ಮೋಚಾ ಚಂಡಮಾರುತ’ ಎಂದು ಹೆಸರು ನೀಡಲಾಗಿದೆ.  ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸುವುದರಿಂದಾಗಿ ಮುಂದಿನ 48 ಗಂಟೆಗಳ ಕಾಲ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ – ಯಾತ್ರಿಕರ ನೋಂದಣಿ ಸ್ಥಗಿತ

ಮೇ 6 ರಂದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಕೆಲವು ವ್ಯವಸ್ಥೆಗಳು ಚಂಡಮಾರುತ ಎಂದು ಭವಿಷ್ಯ ನುಡಿದಿವೆ. ನಾವು ಇದನ್ನು ಗಮನಿಸುತ್ತಿದ್ದೇವೆ. ಈ ಬಗ್ಗೆ ಹೊಸ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು’ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ.

ಈ ವಾರದ ಅಂತ್ಯದ ವೇಳೆಗೆ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಆದರೆ ಕಡಿಮೆ ಒತ್ತಡವು ಸೈಕ್ಲೋನಿಕ್ ಚಂಡಮಾರುತದ ರೂಪವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಚಂಡಮಾರುತದ ಪ್ರಭಾವವು ಪೂರ್ವ ಭಾರತದಿಂದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ವಿಸ್ತರಿಸುವ ಸಾಧ್ಯತೆಯಿದೆ.

ಈ ಚಂಡಮಾರುತಕ್ಕೆ ವಿಶ್ವ ಹವಾಮಾನ ಸಂಸ್ಥೆ ಮತ್ತು ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡ ನಾಮಕರಣ ವ್ಯವಸ್ಥೆಯ ಅಡಿಯಲ್ಲಿ ಚಂಡಮಾರುತವನ್ನು ‘ಮೋಚಾ’ ಎಂದು ಹೆಸರಿಸಲಾಗಿದೆ. ಯೆಮೆನ್ ಈ ಚಂಡಮಾರುತಕ್ಕೆ ಕೆಂಪು ಸಮುದ್ರದ ಕರಾವಳಿಯ ಬಂದರು ನಗರವಾದ ‘ಮೋಚಾ’ ಹೆಸರನ್ನು ಸೂಚಿಸಿದೆ.

suddiyaana