ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ – ಯಾತ್ರಿಕರ ನೋಂದಣಿ ಸ್ಥಗಿತ

ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ – ಯಾತ್ರಿಕರ ನೋಂದಣಿ ಸ್ಥಗಿತ

ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಿಂದ  ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದೆ. ಈ ಹಿನ್ನೆಲೆ ಮೇ 3 ರಂದು ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇದಾರನಾಥದಲ್ಲಿ ಕಳೆದ 2 ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ಅಷ್ಟೇ ಅಲ್ಲದೇ ಹಿಮಪಾತ ಕೂಡ ಆಗುತ್ತಿದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.  ಹಿಮಪಾತದಿಂದ ಕೇದಾರನಾಥದಲ್ಲಿ ಚಳಿ ಹೆಚ್ಚಾಗಿದೆ. ಇದರಿಂದಾಗಿ ಅಲ್ಲಿಗೆ ಯಾತ್ರೆಗೆ ಹೋಗುವವರಿಗೂ ತೊಂದರೆಯುಂಟಾಗುತ್ತಿದೆ. ಇದೀಗ ಸುರಕ್ಷಿತ ಸ್ಥಳಗಳಲ್ಲಿ ಉಳಿದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಕೇದಾರನಾಥ ಯಾತ್ರಿಕರ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜಲಾಶಯಗಳಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ – ರಾಜ್ಯಕ್ಕೆ ಎದುರಾಗಲಿದ್ಯಾ ನೀರಿನ ಅಭಾವ?

ಕೇದಾರನಾಥ ಯಾತ್ರಿಕರ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದ್ದು, ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಂದಣಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ತೆರಳುತ್ತಿರುವ ಯಾತ್ರಿಕರ ನೋಂದಣಿಯನ್ನು ರಿಷಿಕೇಶದಲ್ಲಿರುವ  ನೋಂದಣಿ ಕೇಂದ್ರದಲ್ಲಿ ಮಾಡಲಾಗುತ್ತಿದೆ ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆಯು ಮುಂದಿನ 2-3 ದಿನಗಳ ಕಾಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆಯನ್ನು ನೀಡಿದೆ. ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.

ನಿರಂತರ ಹಿಮಪಾತದ ನಡುವೆ 11,000 ಅಡಿಗಳಷ್ಟು ಎತ್ತರದಲ್ಲಿ ಆಮ್ಲಜನಕದ ಒತ್ತಡವು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಯಾತ್ರಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹೃದ್ರೋಗ ಇರುವವರು ಯಾವುದೇ ಸಮಸ್ಯೆ ಎದುರಿಸದಂತೆ ತಮ್ಮೊಂದಿಗೆ ಔಷಧಿಗಳನ್ನು ಕೊಂಡೊಯ್ಯಬೇಕು ಎಂದು ಹೇಳಿದ್ದಾರೆ.

suddiyaana