ಬಿಸಿಲಿನ ಝಳಕ್ಕೆ ಚರ್ಮ ಕಪ್ಪಾಗಿದ್ಯಾ? – ಈ ಮನೆ ಮದ್ದು ಬಳಸಿ ತ್ವಚೆಯನ್ನು ಕಾಪಾಡಿ..
ಭಾರತದಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಅನೇಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸುಡು ಬಿಸಿಲಿಗೆ ಹೊರಗೆ ಹೋಗಿ ಬಂದರೆ ಸಾಕು ಚರ್ಮವೆಲ್ಲ ಬೆಂದು ಹೋಗುತ್ತದೆ. ತ್ವಚೆ ಒಣಗಿದಂತೆ ಕಾಣುತ್ತದೆ. ಬಿಸಿಲಿಗೆ ಚರ್ಮವೆಲ್ಲ ಕಪ್ಪಾಗಿ ಹೋಗುತ್ತಿದೆ. ಇನ್ನು ಸೌಂದರ್ಯ ಪ್ರಿಯರಿಗಂತೂ ತಮ್ಮ ಸುಂದರವಾದ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುವುದು? ಹೇಗೆ ಕಾಳಜಿ ವಹಿಸುವುದು ಅಂತಾ ತಲೆನೋವಾಗಿ ಬಿಟ್ಟಿದೆ. ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ ಅಂತಾ ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಮನೆಯಲ್ಲಿರುವ ಈ ವಸ್ತುಗಳನ್ನು ಹಚ್ಚಿದರೆ ಕುತ್ತಿಗೆಯಲ್ಲಿನ ಕಪ್ಪು ಕಲೆ ಮಾಯ!
ಬೇಸಿಗೆ ಕಾಲದಲ್ಲಿ ಕೆಲಹೊತ್ತು ಮನೆಯಿಂದ ಹೊರಗೆ ಹೋದರೆ ಸಾಕು ಚರ್ಮ ಕಪ್ಪಾಗುತ್ತದೆ. ಇದಕ್ಕೆ ಕಾರಣ ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಯುವಿ ಕಿರಣಗಳು. ಇವುಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ ಕಪ್ಪಾಗುತ್ತದೆ.
ಚರ್ಮದ ರಕ್ಷಣೆ ಮಾಡುವುದು ಹೇಗೆ?
ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಹಾಗೂ ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರಬೇಕು.
ಎಲೆಕೋಸು ಎಲೆಗಳನ್ನು ಕಪ್ಪಾದ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಬೇಕು. ಇದರಿಂದಾಗಿ ಚರ್ಮ ಕಪ್ಪಾಗುವುದನ್ನು ತಡೆಗಟ್ಟಬಹುದು.
ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿದ್ರೆ ಉತ್ತಮ ಫಲಿತಾಂಶ ಸಿಗುತ್ತದೆ. ಟೊಮೆಟೊ ರಸವನ್ನು ಸೂರ್ಯನ ಬಿಸಿಲಿಗೆ ಕಪ್ಪಾದ ಜಾಗಕ್ಕೆ ಹಚ್ಚಿ ಕಾಲು ಗಂಟೆ ಬಿಡಬೇಕು. 2 ದಿನಕ್ಕೊಮ್ಮೆ ಟೊಮೆಟೊ ರಸವನ್ನು ಈ ರೀತಿ ಹಚ್ಚಿದ್ರೆ ಚರ್ಮ ಕಪ್ಪಾಗುವುದನ್ನು ತಡೆಗಟ್ಟಬಹುದು.
ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಹಳದಿ ಬೆರೆಸಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು.
ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಬೆರೆಸಿದರೆ ತಂಪಾಗುತ್ತದೆ
ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳು ಸ್ವಚ್ಛತೆ ಅಗತ್ಯವಾಗಿದೆ. ಹದ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿ.