ಸುಡಾನ್ ನಿಂದ ಬಂದವರಲ್ಲಿ ಹಳದಿ ಜ್ವರ? – ಲಸಿಕೆ ಪಡೆಯದೇ ನಗರಕ್ಕೆ ಬಂದ 45 ಮಂದಿ ಕ್ವಾರಂಟೈನ್

ಸುಡಾನ್ ನಿಂದ ಬಂದವರಲ್ಲಿ ಹಳದಿ ಜ್ವರ? – ಲಸಿಕೆ ಪಡೆಯದೇ ನಗರಕ್ಕೆ ಬಂದ 45 ಮಂದಿ ಕ್ವಾರಂಟೈನ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಳದಿ ಜ್ವರದ ಭೀತಿ ಎದುರಾಗಿದೆ. ಯುದ್ಧ ಪೀಡಿತ ಸುಡಾನ್ ನಿಂದ ಆಪರೇಷನ್ ಕಾವೇರಿ ಅಡಿಯಲ್ಲಿ ರಕ್ಷಿಸಿ ಕರೆತಂದ ಹಲವರಲ್ಲಿ ಹಳದಿ ಜ್ವರಕ್ಕೆ ಲಸಿಕೆ ಪ್ರಮಾಣಪತ್ರ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಸುಮಾರು 40 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿದ್ದು, ಲಸಿಕೆ ಪಡೆಯದೇ ಭಾರತಕ್ಕೆ ಬಂದವರು 45 ಮಂದಿ ಇದ್ದಾರೆ. ಅವರೆಲ್ಲರನ್ನೂ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನಲ್ಲಿ ಆರು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ? : ದೇವೇಗೌಡ್ರು, ಮೋದಿ ಸಾಹೇಬ್ರು ಮಾತಾಡ್ಕೊಂಡವ್ರೆ – ಪ್ರೀತಂ ಗೌಡ

ಕೆಲವರು ಭಾರತಕ್ಕೆ ಬರುವ ವೇಳೆ ಲಸಿಕೆ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದು, ಇನ್ನು ಕೆಲವರು ಸುಡಾನ್ ನಲ್ಲಿಯೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಲಸಿಕೆ ಪ್ರಮಾಣಪತ್ರ ಕಳೆದುಕೊಂಡವರ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳನ್ನು ಬಳಸಿಕೊಂಡು ಇದೀಗ ಪ್ರಮಾಣಪತ್ರಗಳನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಮಾಣಪತ್ರಗಳು ಸಿಕ್ಕಿದ ಕೂಡಲೇ ಅವರ ಕ್ವಾರಂಟೈನ್’ನ್ನು ರದ್ದುಪಡಿಸಲಾಗುತ್ತದೆ. ಸಿಕ್ಕದವರು ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾ, ದಕ್ಷಿಣಾ ಅಮೆರಿಕಾ, ಉಗಾಂಡ, ನೈಜಿರಿಯಾ, ಕೀನ್ಯಾ ಸೇರಿ ಕೆಲ ಭಾಗಗಳಲ್ಲಿ ಹಳದಿ ಜ್ವರ ಹರಡಿದ್ದು ಇದೊಂದು ಭೀಕರ ಕಾಯಿಲೆಯಾಗಿದೆ. ಆಪರೇಷನ್ ಕಾವೇರಿ ಕಾರ್ಯಚರಣೆ ಅಡಿ ನಿನ್ನೆ ರಾಜಧಾನಿಗೆ 362 ಮಂದಿ ಆಗಮಿಸಿದ್ದಾರೆ. ಈ ಪೈಕಿ 45 ಮಂದಿ ಬಳಿ ಹಳದಿ ಜ್ವರದ ಲಸಿಕೆ ಪ್ರಮಾಣ ಪತ್ರ ಇಲ್ಲ. ಸದ್ಯ ಅಷ್ಟೂ ಮಂದಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

suddiyaana