ವಿಶ್ವ ನಕ್ಷೆಯಿಂದ ಕಣ್ಮರೆಯಾಗುತ್ತವಾ ಈ ರಾಷ್ಟ್ರಗಳು? – 2100 ರಲ್ಲಿ ಭಾರತದ ಕತೆಯೇನು?
ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಅಕಾಲಿಕ ಮಳೆ, ಮೈಸುಡುವಷ್ಟು ಬಿಸಿಲು, ವಿಪರೀತ ಚಳಿ ಜನರನ್ನು ಕಾಡುತ್ತಿದೆ. ಇದೇ ರೀತಿ ಹವಾಮಾನದಲ್ಲಿ ವೈಪರಿತ್ಯ ಉಂಟಾದರೆ 2100 ರ ವೇಳೆಗೆ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಅಂತಾ ಅಮೆರಿಕದ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆ ನೀಡಿದೆ.
ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರ್ ಅಡ್ಮಿನಿಸ್ಟ್ರೇಷನ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮಾಲೆ, ಮಾಲ್ಡೀವ್ಸ್ ಮುಳುಗುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಸಮುದ್ರ ಮಟ್ಟವು 2000 ದಲ್ಲಿ 1.4 ಮಿಲಿಮೀಟರ್ ಇದ್ದದ್ದು, ಇದೀಗ ವೇಗವಾಗಿ ಏರಿದ್ದು, ಇದು 2015 ರ ವೇಳೆಗೆ 3.6 ಮಿಲಿಮೀಟರ್ ಗೆ ಏರಿದೆ. ಈ ದೇಶದ ಎಪ್ಪತ್ತೇಳು ಪ್ರತಿಶತದಷ್ಟು ಭಾಗ ಕಣ್ಮರೆಯಾಗುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಬಿಸಿಲ ಝಳ – ಹೊರಾಂಗಣ ಕಾರ್ಯಕ್ರಮಗಳಿಗೆ ಬ್ರೇಕ್!
ಇನ್ನು ಓಷಿಯಾನಿಯಾ ಕಿರಿಬಾಟಿ, ಈ ದೇಶದ ಜನಸಂಖ್ಯೆ 1 ಲಕ್ಷ 20 ಸಾವಿರ, ಈ ದೇಶವು ತನ್ನ ಮೂರನೇ ಎರಡರಷ್ಟು ಪಾಲನ್ನು ಕಳೆದುಕೊಳ್ಳುತ್ತದೆ. ಅಂದರೆ 2100ರ ವೇಳೆಗೆ ಈ ದೇಶದ ಮುಕ್ಕಾಲು ಭಾಗವೇ ಇರೋದಿಲ್ಲ ಎಂದು ಅಧ್ಯಯನದಿಂದ ಗೊತ್ತಾಗಿದೆ.
ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ, ಚೀನಾ ಕೂಡ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಅನುಭವಿಸಲಿದೆ. ಚೀನಾದಲ್ಲಿ ಸುಮಾರು 43 ಮಿಲಿಯನ್ ಜನರು ಸಮುದ್ರ ತೀರದಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ತೊಂದರೆ ಅನುಭವಿಸಬಹುದು. ಅಷ್ಟೇ ಅಲ್ಲದೇ ಢಾಕಾ, ಬಾಂಗ್ಲಾದೇಶವೂ ಸಹ ಮುಳುಗಡೆಯ ಭೀತಿಯಲ್ಲಿವೆ. ಇದರಿಂದಾಗಿ 32 ಮಿಲಿಯನ್ ಜನರ ಮನೆಗಳು ನಾಶವಾಗುತ್ತವೆ ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ.
ಮುಳುಗಡೆಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಯುರೋಪಿಯನ್ ಯೂನಿಯನ್ ಫಂಡೆಡ್ ಲೈಫ್ ಅಡಾಪ್ಶನ್ ಪ್ರಾಜೆಕ್ಟ್ ಪ್ರಕಾರ, ಮುಂಬರುವ ಸಮಯದಲ್ಲಿ, ದೇಶದ 27 ಮಿಲಿಯನ್ ಜನರ ಭೂಮಿ ಸಮುದ್ರದಲ್ಲಿ ಮುಳುಗಬಹುದು ಅನ್ನೋ ವಿಚಾರ ಬಹಿರಂಗವಾಗಿದೆ.
ಬ್ಯಾಂಕಾಕ್, ಥೈಲ್ಯಾಂಡ್ ಕೂಡ ಹೆಚ್ಚಿನ ಕಡೆ ನೀರಿನಿಂದಲೇ ಆಅವೃತವಾಗಿರುವ ಸುಂದರ ತಾಣ. ಆದರೆ ವಿಶ್ವ ಆರ್ಥಿಕ ವೇದಿಕೆಯ ವರದಿಯ ಪ್ರಕಾರ, ಮುಂಬರುವ ಸಮಯದಲ್ಲಿ ಥೈಲ್ಯಾಂಡ್ ಕೂಡ ನೀರಿನಲ್ಲಿ ಮುಳುಗಬಹುದು ಎಂದು ಎಚ್ಚರಿಸಿದೆ.