ಸ್ವರೂಪ್ ನನ್ನ ಮಗನಿದ್ದಂತೆ, ಚುನಾವಣೆಯಲ್ಲಿ ಆತನನ್ನೇ ಗೆಲ್ಲಿಸಿ – ಭವಾನಿ ರೇವಣ್ಣ
ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಎಲ್ಲಾ ಮುನಿಸನ್ನು ಮರೆತು ರೇವಣ್ಣ ಫ್ಯಾಮಿಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನನ್ನು ಗೆಲ್ಲಿಸಲು ಪಣತೊಟ್ಟಿದೆ. ಎಲ್ಲರಿಗೂ ಒಬ್ಬರು ತಾಯಿ ಇರುತ್ತಾರೆ. ಆದ್ರೆ ಸ್ವರೂಪ್ ಗೆ ಇಬ್ಬರು ತಾಯಂದಿರು. ಒಬ್ಬರು ಹೆತ್ತವರು, ನಾನು ಪೋಷಣೆ ಹಾಗೂ ಆರೈಕೆ ಮಾಡೋ ತಾಯಿ. ಸ್ವರೂಪ್ ನನ್ನ ಮಗ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: 12ನೇ ತರಗತಿ ಪಾಸ್ ಆದ ಇಬ್ಬರು ಮಾಜಿ ಶಾಸಕರು..! – ಕಾನೂನು ಪದವಿ ಪಡೆಯಲು ಸಿದ್ಧತೆ..!
ಹಾಸನ ಅಭ್ಯರ್ಥಿ ಯಾರು ಅಂತ ಗೊಂದಲ ಇತ್ತು. ನಾನು ಕೂಡ ಆಕಾಂಕ್ಷಿ ಆಗಿದ್ದೆ. ನನ್ನ ಜೊತೆ ನೀವು ನಿಂತಿದ್ದು ನಿಜ. ಆದರೆ ದಿನ ಕಳೆದಂತೆ ದೇವೇಗೌಡರ ಆದೇಶ ಧಿಕ್ಕರಿಸಲು ಆಗಲಿಲ್ಲ. ಹಾಗಾಗಿ ನಾನೇ ತೀರ್ಮಾನ ಮಾಡಿ ಕುಮಾರಣ್ಣ ಅವರಿಗೆ ಸ್ವರೂಪ್‌ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದೆ. ಈಗ ಸ್ವರೂಪ್‌ಗೆ ಇಬ್ಬರು ತಾಯಂದಿರಿದ್ದಾರೆ. ಲಲಿತಕ್ಕ ಹೆತ್ತವಳು. ಈ ಭಾರ ಹೊತ್ತುಕೊಂಡವಳು ನಾನು. ಈ ವಿಚಾರದಲ್ಲಿ ಸ್ವರೂಪ್ ಅದೃಷ್ಟವಂತ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ರೋಡ್ ಮಾಡಿಸಿದ್ರೆ, ಅದು ಅಭಿವೃದ್ಧಿ ಆಗಲ್ಲ. ಈ ಹಿಂದೆ ಶಾಸಕರಾಗಿದ್ದವರು ಏನು ಅಭಿವೃದ್ಧಿ ಮಾಡಿಲ್ಲ ಎನ್ನುವ ಮೂಲಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.