ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಮೋದಿ ಎಂಟ್ರಿ – ಜನರ ಸಮಸ್ಯೆ ಆಲಿಸಲು ಮೋದಿ ಕರೆ
ಬೆಂಗಳೂರು: ಕರ್ನಾಟಕ ವಿಧಾನ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಪ್ರಧಾನಿ ಮೋದಿ ರಾಜ್ಯದ ಸುಮಾರು 50 ಲಕ್ಷ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಚುನಾವಣೆಗೆ ಕಮಲ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿದ್ದಾರೆ.
ಇದನ್ನೂ ಓದಿ: ಈ ಸ್ಥಳದಲ್ಲಿ ಸೆಲ್ಫಿ ತೆಗೆದ್ರೆ 24 ಸಾವಿರ ರೂ. ದಂಡ! – ಯಾಕಪ್ಪಾ ಇಂತಹ ಟಫ್ ರೂಲ್ಸ್?
ಪಕ್ಷದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದು ಬಹು ಮುಖ್ಯ. ಕಾರ್ಯಕರ್ತರ ಉತ್ಸಾಹ ನಾಯಕರಿಗೆ ಉತ್ಸಾಹ ತುಂಬಿದೆ. ಬೂತ್ ನಲ್ಲಿ ಬಿಜೆಪಿ ಗೆಲ್ಲಿಸುವ ಉತ್ಸಾಹ ತೋರಿಸುತ್ತಿದ್ದೀರಿ. ಮನೆ ಮನೆಗೆ ಹೋಗಿ ಕೇವಲ ಕರಪತ್ರ ಹಂಚಬಾರದು. ಕುಟುಂಬದೊಂದಿಗೆ ಬಾಂಧವ್ಯ ಬೆಳಿಸಿಕೊಂಡು ಜನರ ಸಮಸ್ಯೆ ಆಲಿಸಬೇಕು ಅಂತಾ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿ ಹಾಗೂ ಜೆ.ಪಿ ನಗರದ ಖಾಸಗಿ ಕಾಲೇಜು, ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ ಸೇರಿದಂತೆ ವಿವಿಧೆಡೆ ಸಂವಾದಕ್ಕಾಗಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಹಾಗೂ ಆಸನಗಳನ್ನ ಸಿದ್ಧಪಡಿಸಲಾಗಿತ್ತು. ಸಂವಾದ ಕಾರ್ಯಕ್ರಮ ವೀಕ್ಷಣೆ ಮಾಡಲು ಸಿಎಂ ಬೊಮ್ಮಾಯಿ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.