ಮೈಸೂರಿನಲ್ಲಿಂದು ಪ್ರಿಯಾಂಕಾ ಗಾಂಧಿ ಮತಶಿಕಾರಿ – ‘ಕೈ’ ನಾಯಕಿಯ ಮಿಂಚಿನ ಸಂಚಾರ ಹೇಗಿದೆ ಗೊತ್ತಾ?

ಮೈಸೂರಿನಲ್ಲಿಂದು ಪ್ರಿಯಾಂಕಾ ಗಾಂಧಿ ಮತಶಿಕಾರಿ – ‘ಕೈ’ ನಾಯಕಿಯ ಮಿಂಚಿನ ಸಂಚಾರ ಹೇಗಿದೆ ಗೊತ್ತಾ?

ಕರ್ನಾಟಕ ವಿಧಾನಸಭಾ ಚುನಾವಣೆಗೆ 2 ವಾರಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಪ್ರಚಾರದ ಅಬ್ಬರವೂ ಜೋರಾಗಿದೆ. ರಾಜ್ಯವನ್ನ ಕೈವಶ ಮಾಡಿಕೊಳ್ಳಲು ಕೇಂದ್ರ ನಾಯಕರೇ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಇಂದು ಮತಬೇಟೆಗೆ ಇಳಿಯಲಿದ್ದಾರೆ.

ಇದನ್ನೂ ಓದಿ : ಚುನಾವಣಾ ಹೊಸ್ತಿಲಲ್ಲೇ ಐಟಿ, ಲೋಕಾಯುಕ್ತ ರೇಡ್ – ಕಂತೆ ಕಂತೆ ಹಣ, ಚಿನ್ನ, ಬೆಳ್ಳಿ ಪತ್ತೆ!

ಏಪ್ರಿಲ್‌ 25ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಿಯಾಂಕ ಗಾಂಧಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿ.ನರಸೀಪುರ ಕ್ಷೇತ್ರದ ಹೆಳವರಹುಂಡಿಯಲ್ಲಿ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ನಡೆಯುವ ಸಾರ್ವಜನಿಕ‌ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಿಯಾಂಕಾ ಗಾಂಧಿ, ಮಧ್ಯಾಹ್ನ 2.30ಕ್ಕೆ ಹನೂರು ಕ್ಷೇತ್ರಕ್ಕೆ ತೆರಳಲಿದ್ದಾರೆ. ಅಲ್ಲಿ ಗೌರಿಶಂಕರ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ರಿಂದ ಸಂಜೆ 4 ಗಂಟೆವರೆಗೆ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ಸಂವಾದ ಕಾರ್ಯಕ್ರಮದ ಬಳಿಕ ಪ್ರಿಯಾಂಕಾ ಗಾಂಧಿ ಅವರು 4.15ಕ್ಕೆ ಕೆ.ಆರ್.ನಗರಕ್ಕೆ ತೆರಳಲಿದ್ದಾರೆ. ಸಂಜೆ 5.30ರಿಂದ 6.30ರವರೆಗೆ ಅಲ್ಲಿ ನಡೆಯುವ ರೋಡ್‌ಶೋನಲ್ಲಿ ಭಾಗಿಯಾಗಲಿದ್ದಾರೆ. ತೋಪಮ್ಮನ ದೇವಸ್ಥಾನದಿಂದ ಸುಮಾರು‌ 2 ಕಿ.ಮೀ. ವರೆಗೆ ಈ ರೋಡ್‌ ಶೋ ನಡೆಯಲಿದೆ.

 

suddiyaana