ಅರಿಶಿನ ಮಿಶ್ರಿತ ಹಾಲು ಕುಡಿಯುತ್ತಿದ್ದೀರಾ? – ಅಪಾಯ ಖಂಡಿತ!
ಹಿರಿಯರು ಅರಿಶಿನ ಮಿಶ್ರಿತ ಹಾಲು ಸೇವಿಸಲು ನೀಡುವುದನ್ನು ನೀವು ನೋಡಿರಬಹುದು. ಏಕೆಂದರೆ ಅರಿಶಿನ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಯಂತಹ ಜೀವಸತ್ವಗಳು ಹಾಲಿನಲ್ಲಿ ಕಂಡುಬರುತ್ತವೆ. ಆದರೆ ಅರಿಶಿನದ ಹಾಲು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗಯವ ಸಾಧ್ಯತೆ ಇದೆ ಎಂಬ ಸಂಗತಿ ನಿಮಗೆ ತಿಳಿದಿದ್ಯಾ? ಅರಿಶಿನ ಮಿಶ್ರಿತ ಹಾಲನ್ನು ಯಾರು ಯಾರು ಸೇವಿಸಬಾರದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮದುವೆಗೆ ರೆಡಿಯಾಗುತ್ತಿದ್ದೀರಾ? ಕೂದಲಿನ ಆರೈಕೆ ಹೀಗಿದ್ದರೆ ಉತ್ತಮ
ಕಿಡ್ನಿ ಸಮಸ್ಯೆ ಇರುವವರು ಅರಿಶಿನ ಮಿಶ್ರಿತ ಹಾಲನ್ನು ಸೇವಿಸಬಾರದು
ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳುತ್ತಿರುವವರು ಅರಿಶಿನ ಹಾಲನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಅರಿಶಿನವು ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟ ಹೊಂದಿದವರು ಸೇವಿಸಬಾರದು
ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟವನ್ನು ಹೊಂದಿರುವ ರೋಗಿಗಳು ಅರಿಶಿನ ಹಾಲನ್ನು ಸೇವಿಸಬಾರದು. ಏಕೆಂದರೆ ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಲೋ ಶುಗರ್ ಲೆವಲ್ ಹೊಂದಿರುವ ರೋಗಿಗಳ ಸಮಸ್ಯೆಯು ಮತ್ತಷ್ಟು ಉಲ್ಭಣಿಸಬಹುದು.
ಕಳಪೆ ಜೀರ್ಣಕ್ರಿಯೆ ಹೊಂದಿರುವ ಜನರು ಸೇವಿಸಬಾರದು
ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರ, ಎದೆಯುರಿ ಇಂತಹ ಸಮಸ್ಯೆಗಳಿದ್ದರೆ ನೀವು ಅರಿಶಿನ ಮಿಶ್ರಿತ ಹಾಲು ಸೇವಿಸುವುದನ್ನು ತಪ್ಪಿಸಬೇಕು. ಇದರಿಂದಾಗಿ ಆರೋಗ್ಯ ಮತ್ತಷ್ಟು ಹದಗೆಡುತ್ತದೆ.
ರಕ್ತಹೀನತೆ ಹೊಂದಿರುವ ಜನರು ಸೇವಿಸಬಾರದು
ಅರಿಶಿನ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವಿಕೆಗೆ ಅಡ್ಡಿಯುಂಟಾಗುತ್ತದೆ. ಕಬ್ಬಿಣ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಅರಿಶಿನ ಹಾಲು ಸೇವಿಸುವುದನ್ನು ಕಡಿಮೆ ಮಾಡಬೇಕು.