ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಪೋಟಗೊಂಡ ಸ್ಪೇಸ್ ಎಕ್ಸ್ ರಾಕೆಟ್
ಟೆಕ್ಸಾಸ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲಾದ ಬೃಹತ್ ಸ್ಟಾರ್ ಶಿಪ್ ರಾಕೆಟ್ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ.
ಗುರುವಾರ ಟೆಕ್ಸಾಸ್ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ಎಕ್ಸ್ ಕಂಪೆನಿಯ ಸ್ಟಾರ್ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಮೂರು ನಿಮಿಷಗಳ ನಂತರ ಸ್ಫೋಟಗೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಜಿಮ್.. ರೂಮ್.. ಕೆಂಪು ಮರಳು – ಮಂಗಳ ಗ್ರಹದಲ್ಲಿ ವಾಸಿಸುವವರಿಗೆ ಮನೆಗಳು ರೆಡಿ..!
ರಾಕೆಟ್ ಉಡಾವಣೆಯಾದ ಮೂರು ನಿಮಿಷದಲ್ಲಿ ಮೊದಲ ಹಂತದಿಂದ ಸ್ಟಾರ್ಶಿಪ್ ಕ್ಯಾಪ್ಸುಲ್ ಬೇರ್ಪಡಬೇಕಿತ್ತು. ಆದರೆ ಸ್ಟಾರ್ ಶಿಪ್ ಕ್ಯಾಪ್ಸುಲ್ ಬೇರ್ಪಡಲು ವಿಫಲವಾದ್ದರಿಂದ ರಾಕೆಟ್ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ. ರಾಕೆಟ್ ನ ಅವಶೇಷಗಳು ಗಲ್ಫ್ ಆಫ್ ಮೆಕ್ಸಿಕೋಗೆ ಅಪ್ಪಳಿಸಿದೆ ಅಂತಾ ಸ್ಪೇಸ್ ಎಕ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್ಶಿಪ್ ರಾಕೆಟ್ಅನ್ನು ಅಭಿವೃದ್ಧಿಪಡಿಸಲಾಗಿತ್ತು.