ಜಾಗತಿಕ ಮಟ್ಟದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು – ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಇಂಡಿಯಾ..!

ಜಾಗತಿಕ ಮಟ್ಟದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು – ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಇಂಡಿಯಾ..!

ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜನಸಂಖ್ಯೆಯಲ್ಲಿ ಚೀನಾವನ್ನ ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿದೆ ಅಂತಾ ವಿಶ್ವಸಂಸ್ಥೆ ವರದಿ ಮಾಡಿದೆ. ಭಾರತದ ಜನಸಂಖ್ಯೆ ಈಗ 142.86 ಕೋಟಿ ಆಗಿದ್ದು, ಚೀನಾದ ಜನಸಂಖ್ಯೆ 142.57 ಕೋಟಿ. 1960ರ ಬಳಿಕ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತವಾಗಿತ್ತು. ಹೀಗಾಗಿ ಜನಸಂಖ್ಯೆಯಲ್ಲಿ ಚೀನಾ ನಂಬರ್ 2 ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ:  ಭಾರತದಲ್ಲಿ ಕೊರೋನಾ ಆರ್ಭಟ – ಒಂದೇ ದಿನ 10,542 ಹೊಸ ಪಾಸಿಟಿವ್ ಕೇಸ್, 38 ಮಂದಿ ಸಾವು

ಹಾಗಿದ್ರೆ ಭಾರತದ ಜನಸಂಖ್ಯೆಯಲ್ಲಿ ಯಾವ ವಯಸ್ಸಿನವರ ಸಂಖ್ಯೆ ಎಷ್ಟಿದೆ ಅನ್ನೋ ಬಗ್ಗೆ ಒಂದಷ್ಟು ಅಂಕಿಅಂಶಗಳನ್ನ ನೋಡುವುದಾದರೆ, 18 ವರ್ಷದೊಳಗಿನವರ ಸಂಖ್ಯೆ ಶೇ.25ರಷ್ಟಿದೆ. 10-19 ವರ್ಷದೊಳಗಿನವರ ಸಂಖ್ಯೆ ಶೇ.18ರಷ್ಟಿದೆ. 10-24 ವರ್ಷದೊಳಗಿನವರ ಸಂಖ್ಯೆ ಶೇ.26ರಷ್ಟಿದೆ. 15-64 ವರ್ಷದೊಳಗಿನವರ ಸಂಖ್ಯೆ ಶೇ.68ರಷ್ಟಿದೆ. 65 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇ.7ರಷ್ಟಿದೆ.

ಭಾರತದ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆಯೇ ಹೆಚ್ಚಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಇದು ಪ್ಲಸ್ ಪಾಯಿಂಟ್ ಅಂತಾ ವಿಶ್ಲೇಷಿಸಲಾಗ್ತಿದೆ. ಆದ್ರೆ, ಯುವಕರ ಸಂಖ್ಯೆ ಹೆಚ್ಚಾಗುತ್ತಲೇ ಉದ್ಯೋಗದ ಸವಾಲು ಕೂಡ ದೊಡ್ಡದಾಗುತ್ತಲೇ ಇದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ದೇಶದ ಯುವ ಜನಾಂಗದ ಮೇಲೆ ಪರಿಣಾಮ ಬೀರ್ತಿದೆ. ಹೀಗಾಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

 

 

suddiyaana