ಈಶ್ವರಪ್ಪ ಪುತ್ರನಿಗೆ ತಪ್ಪಿದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ – ಬಿಜೆಪಿ ಲೆಕ್ಕಾಚಾರಗಳೇನು?
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೂ ಘೋಷಣೆಯಾಗಿದೆ. ಟಿಕೆಟ್ ಘೋಷಣೆಯಿಂದ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರಿಗೆ (KS Eshwarappa) ಎರಡನೇ ಬಾರಿ ನಿರಾಸೆಯಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ದಿಢೀರ್ ಬೆಳವಣಿಗೆ – ಸಿಎಂ ಬೊಮ್ಮಾಯಿ ವಿರುದ್ಧ ಅಭ್ಯರ್ಥಿ ಬದಲಾವಣೆ!
ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ವರಿಷ್ಠರು ತಮಗೆ ಟಿಕೆಟ್ ನಿರಾಕರಿಸಿದ ಬಳಿಕ ಅವರು ತಮ್ಮ ಪುತ್ರ ಕೆಈ ಕಾಂತೇಶ್ ಗೆ (KE Kantesh) ಕೊಡಿ ಅಂತ ಬೇಡಿಕೆಯಿಟ್ಟಿದ್ದರು. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಿದ ಹೈಕಮಾಂಡ್ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪಗೆ (Channabasappa) ಟಿಕೆಟ್ ನೀಡಿದೆ. ಈ ನಿರಾಶೆಯಲ್ಲೂ ಚನ್ನಬಸಪ್ಪ ಒಬ್ಬ ಉತ್ತಮ ಸಂಘಟಕ ಮತ್ತು ನಿಷ್ಠಾವಂತ ನಾಯಕನಾಗಿದ್ದಾರೆ, ಅವರ ಆಯ್ಕೆ ಒಂದು ಒಳ್ಳೆಯ ನಿರ್ಧಾರ ಎಂದು ಈಶ್ವರಪ್ಪ ಹೇಳಿದ್ದಾರೆ.
ಇನ್ನು ಟಿಕೆಟ್ ಸಿಕ್ಕ ಬಳಿಕ ಚನ್ನಬಸಪ್ಪ ಈಶ್ವರಪ್ಪರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಹಾಗೇ ಈಶ್ವರಪ್ಪ ಪತ್ನಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.