‘ಸ್ಪರ್ಧಿಸುವಂತೆ ಹೇಳಿದ್ದಾರೆ.. ಆದ್ರೆ ಯಾವ ಕ್ಷೇತ್ರ ಗೊತ್ತಿಲ್ಲ’ – ಅಚ್ಚರಿ ಮೂಡಿಸಿದ ಡಿ.ಕೆ ಸುರೇಶ್ ಮಾತು!

‘ಸ್ಪರ್ಧಿಸುವಂತೆ ಹೇಳಿದ್ದಾರೆ.. ಆದ್ರೆ ಯಾವ ಕ್ಷೇತ್ರ ಗೊತ್ತಿಲ್ಲ’ – ಅಚ್ಚರಿ ಮೂಡಿಸಿದ ಡಿ.ಕೆ ಸುರೇಶ್ ಮಾತು!

ಕನಕಪುರದಲ್ಲಿ ಡಿಕೆ ಶಿವಕುಮಾರ್​ಗೆ ಟಕ್ಕರ್ ಕೊಡ್ಬೇಕು ಅಂತಾ ಬಿಜೆಪಿ ಆರ್.ಅಶೋಕ್​ರನ್ನ ಕನಕಪುರ ಕ್ಷೇತ್ರದಿಂದ ಅಖಾಡಕ್ಕಿಳಿಸಿದೆ. ಈಗಾಗಲೇ ಆರ್.ಅಶೋಕ್ ಕನಕಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಿನೇಷನ್ ಸಲ್ಲಿಕೆ ಮಾಡಿದ್ದಾರೆ. ಆದ್ರೆ ಬಿಜೆಪಿ ಸಾಮ್ರಾಟನನ್ನ ಅವರ ಭದ್ರಕೋಟೆ ಪದ್ಮನಾಭನಗರದಲ್ಲೇ ಕಟ್ಟಿ ಹಾಕ್ಬೇಕು ಅಂತಾ ಡಿಕೆ ಬ್ರದರ್ಸ್ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪನ ಅಂಬಾಸಿಡರ್ ಕಾರಿನಲ್ಲಿ ತೆರಳಿ ವಿಜಯೇಂದ್ರ ನಾಮಿನೇಷನ್ – ಬಿಎಸ್‌ವೈಗೆ ಈ ಕಾರು ಎಷ್ಟು ಲಕ್ಕಿ ಗೊತ್ತಾ?

ಪದ್ಮನಾಭನಗರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ರಘುಮೂರ್ತಿ ರೆಡ್ಡಿಗೆ ಟಿಕೆಟ್ ನೀಡಿದ್ದು ಇವತ್ತು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಇಷ್ಟದ್ರೂ ಸಂಸದ ಡಿ.ಕೆ ಸುರೇಶ್​ ರಿಂದಲೂ ನಾಮಪತ್ರ ಸಲ್ಲಿಕೆ ಮಾಡಿಸುತ್ತೇವೆ ಅಂತಾ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಬ್ಬರೂ ಕೂಡ ನಾಮಪತ್ರ ಸಲ್ಲಿಕೆ ಮಾಡಲಿ. ಆದರೆ ಕೊನೆಗೆ ಹೈಕಮಾಂಡ್ ಹೇಳಿದ ಅಭ್ಯರ್ಥಿಯನ್ನ ಉಳಿಸುತ್ತೇವೆ. ಮತ್ತೊಬ್ಬರಿಂದ ನಾಮಿನೇಷನ್ ಹಿಂಪಡೆಯುತ್ತೇವೆ ಎಂದಿದ್ದಾರೆ.

ಸ್ಪರ್ಧೆ ಬಗ್ಗೆ ಡಿಕೆ ಸುರೇಶ್ ಟ್ವಿಸ್ಟ್ ಕೊಟ್ಟಿದ್ದಾರೆ. ನನಗೆ ನಾಮಪತ್ರ ಸಲ್ಲಿಕೆ ಮಾಡಲು ಹೇಳಿದ್ದಾರೆ. ಆದರೆ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ತಿಳಿದಿಲ್ಲ. ಪಕ್ಷದ ವರಿಷ್ಠರ ಮಟ್ಟದಲ್ಲಿ ಸ್ಪರ್ಧೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೂಚನೆಗಾಗಿ ಕಾಯುತ್ತಿದ್ದೇನೆ. ಪದ್ಮನಾಭನಗರ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಕೂಡ ನನ್ನನ್ನು ಆಹ್ವಾನ ಮಾಡಿದ್ದಾರೆ. ನಾನು ಇವತ್ತು ಪಕ್ಷಕ್ಕಿಂತ ಹೆಚ್ಚಾಗಿ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗೆ ಸ್ಪರ್ಧೆ ಬಗ್ಗೆ ತಿಳಿಸಬೇಕಿದೆ ಎಂದಿದ್ದಾರೆ. ಹೀಗಾಗಿ ಸುರೇಶ್ ಸ್ಪರ್ಧೆ ಗೊಂದಲಕ್ಕೆ ನಾಳೆ ತೆರೆ ಬೀಳುವ ಸಾಧ್ಯತೆಗಳಿವೆ..

 

suddiyaana