ಚೌಕಾಕಾರದಲ್ಲಿದೆ ಈ ಸೈಕಲ್ ನ ಚಕ್ರ! – ರಸ್ತೆ ಮೇಲೆ ಸರಾಗವಾಗಿ ಸಾಗುತ್ತೆ ಬೈಸಿಕಲ್..
ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಪ್ರಪಂಚದಲ್ಲಿ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸುವಲ್ಲಿ ವಿಜ್ಞಾನ ತಂತ್ರಜ್ಞಾನ ಯಶಸ್ವಿಯಾಗಿದೆ. ಸಾಮಾನ್ಯವಾಗಿ ವಾಹನಗಳ ಚಕ್ರ ರೌಂಡ್ ಆಗಿ ಇರುವುದನ್ನು ನೋಡಿರುತ್ತೇವೆ. ಚಕ್ರ ಸ್ವಲ್ಪ ಬೆಂಡ್ ಆದ್ರೂ ಕೂಡ ವಾಹನ ಮುಂದೆ ಚಲಿಸೋದಿಲ್ಲ. ಆದ್ರೆ ಇಲ್ಲೊಂದು ಸೈಕಲ್ ನ ಚಕ್ರ ದುಂಡಾಗಿರುವ ಬದಲು ಚೌಕಾಕಾರದಲ್ಲಿದೆ. ಆದ್ರೂ ಕೂಡ ಸರಾಗವಾಗಿ ರಸ್ತೆ ಮೇಲೆ ಚಲಿಸುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಈ ಮೆಟ್ರೋ ನಿಲ್ದಾಣದಲ್ಲಿ ಬೆಕ್ಕೇ ಸ್ಟೇಷನ್ ಮಾಸ್ಟರ್! – ಮಿಯಾಂವ್ ಮಿಕಾನ್ ಬಗ್ಗೆ ಗೊತ್ತಾ?
ಮಿಸ್ಟರ್ ಕ್ಯೂ ಹೆಸರಿನ ಯೂಟ್ಯೂಬರ್ ಶೇರ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಸೈಕಲ್ ಓಡಿಸುತ್ತಿರುತ್ತಾನೆ. ಇದು ಸಾಮಾನ್ಯ ಸೈಕಲ್ ನಂತೆ ಇದ್ದರೂ ಕೂಡಾ, ಒಂದು ಬದಲಾವಣೆಯೊಂದಿಗೆ ವಿಶಿಷ್ಟ ಕಲ್ಪನೆಯೊಂದಿಗೆ ತಯಾರಿಸಲಾಗಿದೆ. ಅದೇನೆಂದರೆ ಈ ಸೈಕಲ್ ನ ಚಕ್ರವನ್ನು ರೌಂಡ್ ಆಗಿರುವ ಬದಲು ಚೌಕಾಕಾರದಲ್ಲಿದೆ. ಆ ಸೈಕಲ್ ನ ಚಕ್ರ ಚೌಕಾಕಾರವಾಗಿದ್ದರೂ ಸುಲಭವಾಗಿ ಸವಾರಿ ಮಾಡಬಹುದಾಗಿದೆ. ಇದೊಂದು ಕುತೂಹಲಕಾರಿ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಚೌಕಾಕಾರ ಚಕ್ರದ ಸೈಕಲ್ ಓಡಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವಾರು ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಯೂಟ್ಯೂಬ್, ಟ್ವಿಟರ್, ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ವಿಶಿಷ್ಟ ಕಲ್ಪನೆಯ ಸೈಕಲ್ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಸುಲಭವಾಗಿ ಸವಾರಿ ಮಾಡಲು ಇಷ್ಟೊಂದು ಕಷ್ಟಪಡಬೇಕಾಗಿದೆಯೇ ಅಂತಾ ಪ್ರಶ್ನಿಸಿದ್ದಾರೆ.
How The Q created a bike with fully working square wheels (capable of making turns)
[full video: https://t.co/wWdmmzRQY3]pic.twitter.com/bTIWpYvbG1
— Massimo (@Rainmaker1973) April 11, 2023