ಡೈರಿ ಫಾರ್ಮ್ನಲ್ಲಿ ಭೀಕರ ಸ್ಫೋಟ – 18 ಸಾವಿರಕ್ಕೂ ಹೆಚ್ಚು ಹಸುಗಳು ಸಾವು
ಟೆಕ್ಸಾಸ್: ಅಮೆರಿಕದ ಪಶ್ಚಿಮ ಟೆಕ್ಸಾಸ್ ನಲ್ಲಿನ ಡೇರಿ ಫಾರ್ಮ್ ಒಂದರಲ್ಲಿ ಭಾರಿ ಸ್ಪೋಟ ಸಂಭವಿಸಿ 18 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಪಶ್ಚಿಮ ಟೆಕ್ಸಾಸ್ನ ಸೌತ್ ಪೋರ್ಕ್ ಡೇರಿ ಎಂಬಲ್ಲಿ ಈ ಸ್ಪೋಟ ಸಂಭವಿಸಿದೆ. ಸ್ಫೋಟದ ಪರಿಣಾಮ 18 ಸಾವಿರಕ್ಕೂ ಅಧಿಕ ಹಸುಗಳು ಸಾವನ್ನಪ್ಪಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ನಿಖರ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ಡೇರಿಯಲ್ಲಿದ್ದ ಯಂತ್ರೋಪಕರಣಗಳಿಂದಾಗಿ ಈ ಸ್ಪೋಟ ಸಂಭವಿಸಿರಬಹುದು ಅಂತಾ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಭಾರತದಿಂದಲೇ ಪರೀಕ್ಷೆ ಬರೆಯಲು ಅವಕಾಶ
ಡೇರಿಯಲ್ಲಿ ಮೃತಪಟ್ಟ ಒಂದು ಹಸುವಿನ ಬೆಲೆ 1.63 ಲಕ್ಷ ಇತ್ತು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಫಾರ್ಮ್ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.
ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿಯಂತಹ ಘಟನೆಗಳು ನಡೆದಿರುವುದು ಮೊದಲೇನಲ್ಲ. 2013 ರಿಂದ ಇಂತಹ ಅನೇಕ ಘಟನೆಗಳು ಅಮೆರಿಕದಲ್ಲಿ ಸಂಭವಿಸಿವೆ. ಅವುಗಳಲ್ಲಿ ಮುಖ್ಯವಾಗಿ ಕೋಳಿ ಫಾರ್ಮ್ಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗಿದೆ. ಆದರೆ ಟೆಕ್ಸಾಸ್ನಲ್ಲಿ ನಡೆದ ಸ್ಫೋಟ ಅಮೆರಿಕದ ಡೈರಿ ಫಾರ್ಮ್ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ ಎಂದು ವರದಿಯಾಗಿದೆ.
Explosion at South Fork Dairy Farm in Dimmitt Texas last night. The fire spread into the dairy cow holding pens, and an unknown amount of dairy cattle were killed by the fire and smoke. The cause of the fire is unknown.
Yet another incident affecting food supply. pic.twitter.com/4syPJicbng
— Janebond (@Janebon34813396) April 11, 2023