ಬಾಳೆ ಹಣ್ಣಿನ ಸಿಪ್ಪೆ ಸುಲಿದುಕೊಂಡೇ ತಿಂತಾನೆ! –  ಎಲ್ಲರಂತಲ್ಲ ಈ ಆನೆ!

ಬಾಳೆ ಹಣ್ಣಿನ ಸಿಪ್ಪೆ ಸುಲಿದುಕೊಂಡೇ ತಿಂತಾನೆ! –  ಎಲ್ಲರಂತಲ್ಲ ಈ ಆನೆ!

ಕೆಲ ಪ್ರಾಣಿಗಳ ಹಾವಭಾವ, ವರ್ತನೆಗಳು ಮನುಷ್ಯರನ್ನೇ ಹೋಲುತ್ತವೆ. ಅವುಗಳು ತಮ್ಮ ಮುಂದೆ ಇರುವವರು ಏನು ಮಾಡುತ್ತಿದ್ದಾರೆ ಅನ್ನೋದನ್ನು ಗಮನಿಸಿ ಅದನ್ನೇ ಅನುಕರಣೆ ಮಾಡುತ್ತವೆ. ಇನ್ನು ಪ್ರಾಣಿಗಳಿಗೆ ಹಣ್ಣಗಳನ್ನು ಕೊಟ್ಟರೆ ಅವುಗಳು ಅದನ್ನು ಹಾಗೇ ತಿನ್ನುತ್ತವೆ. ಮನುಷ್ಯರಂತೆ ಹಣ್ಣನ್ನು ಶುಚಿಗೊಳಿಸಿ, ಅದರ ಸಿಪ್ಪೆ ಸುಲಿದು ತಿನ್ನೋದಿಲ್ಲ. ಆದ್ರೆ ಇಲ್ಲೊಂದು ಆನೆ ಮನುಷ್ಯರಂತೆ ಬಾಳೆಹಣ್ಣಿನ ಸಿಪ್ಪೆ ಸುಲಿದು ತಿಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಸಿಂಹದ ಮರಿಗಳನ್ನು ಕಂಡ ಚಿಂಪಾಂಜಿ ಮಾಡಿದ್ದೇನು ಗೊತ್ತಾ?

ಬರ್ಲಿನ್ ಮೃಗಾಲಯದಲ್ಲಿರುವ ಪ್ಯಾಂಗ್ ಫಾ ಎಂಬ ಹೆಸರಿನ ಆನೆ ಬಾಳೆಹಣ್ಣು ತಿನ್ನುವ ಮೊದಲು ಸಿಪ್ಪೆ ತೆಗೆದು ತಿನ್ನುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯೊಬ್ಬಳು ಬಾಳೆಹಣ್ಣು ನೀಡಿದಾಗ, ಆನೆ ತಕ್ಷಣ ಬಾಳೆಹಣ್ಣನ್ನು ತೆಗೆದುಕೊಂಡು ಒಂದೊಂದಾಗಿ ಸಿಪ್ಪೆ ಬಿಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಆನೆಯ ಮತ್ತೊಂದು ವಿಶೇಷತೆ ಎಂದರೆ ಕಂದು ಬಣ್ಣದ ಚುಕ್ಕೆಗಳಿರುವ ಬಾಳೆಹಣ್ಣುಗಳನ್ನು ನೀಡಿದಾಗ ಮಾತ್ರ ಅದು ಸಿಪ್ಪೆ ತೆಗೆದು ತಿನ್ನುತ್ತದೆ ಅಂತಾ ಆ ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಆನೆಯ ಜಾಣ್ಣೆಯನ್ನು ಕಂಡು ಕೊಂಡಾಡಿದ್ದಾರೆ. ಆನೆಯೂ ಕೂಡ ಸಿಪ್ಪೆ ತೆಗೆದು ಬಾಳೆಹಣ್ಣು ತಿನ್ನುವುದನ್ನು ಕಲಿತಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

suddiyaana