ಬಪ್ಪನಾಡು ದುರ್ಗೆಗೆ ಒಂದೂವರೆ ಲಕ್ಷ ಮಲ್ಲಿಗೆ ಚೆಂಡು ಅರ್ಪಣೆ

ಬಪ್ಪನಾಡು ದುರ್ಗೆಗೆ ಒಂದೂವರೆ ಲಕ್ಷ ಮಲ್ಲಿಗೆ ಚೆಂಡು ಅರ್ಪಣೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವ ಫೂರ್ವಭಾವಿಯಾಗಿ ನಡೆಯುವ ಶ್ರೀ ದೇವಿಯ ಶಯನೋತ್ಸವಕ್ಕೆ  ಈ ಬಾರಿ ಒಂದೂವರೆ ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಸಮರ್ಪಣೆಯಾಗಿದೆ.

ಮಂಗಳವಾರ ಸಂಜೆ 3 ಗಂಟೆಯ ಬಳಿಕ ಮಲ್ಲಿಗೆ ಸಮರ್ಪಣೆ ಸೇವೆ ಆರಂಭ ಗೊಂಡಿತ್ತು. ಮಲ್ಲಿಗೆಯನ್ನು ತಡ ರಾತ್ರಿ ಗರ್ಭಗುಡಿಯೊಳಗೆ ಜೋಡಿಸಿ ದೇವಿಗೆ ಶಯನೋತ್ಸವ ನಡೆಸಲಾಯಿತು.

ಇದನ್ನೂ ಓದಿ: ಹೊಸ ಹೆಲಿಕಾಪ್ಟರ್‌ ಗೆ ಪೂಜೆ ಮಾಡಿಸಲು ದೇವಾಲಯಕ್ಕೆ ತಂದ ಉದ್ಯಮಿ

ಜಾತ್ರೆಯ ಮುನ್ನಾ ದಿನದಂದು ಬಲಿ ಉತ್ಸವ ಪೂಜೆ ಮುಗಿದ ಬಳಿಕ ದೇವಿಯ ಶಯನೋತ್ಸವ ಆಚರಿಸಲಾಗುತ್ತದೆ. ಈ ವೇಳೆ ಭಕ್ತರು ಹರಕೆ ರೂಪದಲ್ಲಿ ಸಮರ್ಪಿಸಿದ ಮಲ್ಲಿಗೆ ಚೆಂಡುಗಳನ್ನು ಕ್ಷೇತ್ರದ ಗರ್ಭಗುಡಿಯಲ್ಲಿರಿಸಿ ಬಳಿಕ ಕವಾಟ ಬಂಧನ ನಡೆಸಲಾಗುತ್ತದೆ. ಇದರಿಂದಾಗಿ ದುರ್ಗೆಯು ತೃಪ್ತಿಯಾಗಿ ಭಕ್ತರು ಯಾವ ಉದ್ದೇಶದಿಂದ ಮಲ್ಲಿಗೆ ಸಲ್ಲಿಸುತ್ತಾರೋ ಆ ಉದ್ದೇಶವನ್ನು ಈಡೇರಿಸುತ್ತಾಳೆ ಅನ್ನೋದು ಜನರ ನಂಬಿಕೆ. ಹೀಗಾಗಿ ನೂರಾರು ಮಂದಿ ಭಕ್ತರು ಶಯನೋತ್ಸವ ದಿನದಂದು ಆಗಮಿಸಿ ದುರ್ಗೆಗೆ ಮಲ್ಲಿಗೆ ಚೆಂಡು ಸಮರ್ಪಿಸುತ್ತಾರೆ. ಶಯನೋತ್ಸವದ ಮರುದಿನ ಮುಂಜಾನೆ 7. 30ಕ್ಕೆ ದೇಗುಲದ ಬಾಗಿಲು ತೆರೆದು ದುರ್ಗೆಗೆ ಮಹಾಪೂಜೆ ನಡೆಸಿ ಗರ್ಭಗುಡಿಯಲ್ಲಿದ್ದ ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಮಲ್ಲಿಗೆ ಹಂಚುವ ಕ್ರಮ ಇದೆ.

 

suddiyaana