ಮರದಿಂದ ಮರಕ್ಕೆ ಜಿಗಿದು ಕೋತಿಯನ್ನು ಬೇಟೆಯಾಡಿದ ಚಿರತೆ !
ಸಾಮಾನ್ಯವಾಗಿ ಮಂಗಗಳು, ಸಿಂಗಳೀಕಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತವೆ. ಇನ್ನು ಚಿರತೆಗಳು ಬೇಟೆಯಾಡಲು, ವೇಗವಾಗಿ ಓಡುವ ವಿಶೇಷ ಸಾಮರ್ಥ್ಯ ಹೊಂದಿರುತ್ತವೆ. ಕೆಲವೊಂದು ಬಾರಿ ಅವುಗಳು ದೈತ್ಯಾಕಾರದ ಮರ ಏರಿ ಬೇಟೆಯಾಡುವುದನ್ನು ನಾವು ನೋಡಿರುತ್ತೇವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಎಂದಾದರು ಚಿರತೆ ಮರದಿಂದ, ಮರಕ್ಕೆ ಜಿಗಿಯುವುದನ್ನು ನೋಡಿದ್ದೀರಾ? ಇಲ್ಲೊಂದು ಚಿರತೆ ಮರದಿಂದ ಮರಕ್ಕೆ ಚಂಗನೆ ನೆಗೆದು ಕೋತಿಯನ್ನು ಬೇಟೆಯಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಚಳಿ ಅಲ್ವಾ… ನಂಗೂ ಶೀತ ಆಗಿದೆ… – ಘರ್ಜಿಸೋ “ಹುಲಿ”ರಾಯನ ನಾನ್ ಸ್ಟಾಪ್ ಸೀನು!
ಐಎಫ್ ಎಸ್ ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಕೋತಿಗಳು ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಾ ಹೋಗುತ್ತಿವೆ. ಚಿರತೆಯೂ ಕೂಡ ಕೋತಿಗಳನ್ನು ಅಟ್ಟಿಸಿಕೊಂಡು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತಿದೆ. ದುರದೃಷ್ಟ ಎಂಬಂತೆ ಚಿರತೆ ಕೋತಿಯನ್ನು ಬೇಟೆಯಾಡಿದೆ.
ಚಿರತೆಗಳು ಕೇವಲ ಅವಕಾಶವಾದಿ ಮಾತ್ರವಲ್ಲ, ಅವುಗಳು ಬಹುಮುಖ ಬೇಟೆಗಾರರಾಗಿವೆ ಅಂತಾ ಅರಣ್ಯಾಧಿಕಾರಿ ಸುಸಂತ ನಂದಾ ಬರೆದುಕೊಂಡಿದ್ದಾರೆ. ವೈರಲ್ ಆದ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
Leopards are not only opportunistic but versatile hunters. pic.twitter.com/bYGxGLFJqr
— Susanta Nanda (@susantananda3) April 6, 2023