ಎಲಾನ್ ಮಸ್ಕ್ನ ಆ ಒಂದು ನಿರ್ಧಾರವೇ ಮುಳ್ಳಾಯ್ತಾ ? – ಕ್ರಿಪ್ಟೋ ಕರೆನ್ಸಿಯ ಷೇರುಮೌಲ್ಯ ಕುಸಿತ..!
ಟ್ವಿಟ್ಟರ್ ದೊರೆ ಎಲಾನ್ ಮಸ್ಕ್ ಪಾಲಿಗೆ ಉದ್ಯಮ ಅನ್ನೋದು ಅಕ್ಷರಶ: ಆಟಿಕೆಯಂತಾಗಿದೆ. ಯಾವಾಗ ಬೇಕಾದರೂ, ಯಾವುದೇ ಕಂಪನಿಯನ್ನಾದರೂ ಮಸ್ಕ್ ಖರೀದಿ ಮಾಡಬಹುದು. ಬಳಿಕ ತಮ್ಮ ಒಡೆತನದ ಕಂಪನಿಯ ಸಿಬ್ಬಂದಿಯನ್ನೇ ಮನೆಗೆ ಕಳುಹಿಸಬಹುದು. ಷೇರು ಮಾರುಕಟ್ಟೆಯನ್ನ ಆಕಾಶಕ್ಕೂ ಕೊಂಡೊಯ್ಯಬಹುದು. ಪಾತಾಳಕ್ಕೆ ಬೇಕಿದ್ದರೂ ಇಳಿಸಬಹುದು. ಇದು ಎಲಾನ್ ಮಸ್ಕ್ರ ತಾಕತ್ತು.
ಇದನ್ನೂ ಓದಿ: ನೀಲಿ ಪಕ್ಷಿ ಹಾರಿಸಿ ಟ್ವಿಟರ್ ಗೆ ನಾಯಿಯನ್ನು ಕರೆತಂದ ಎಲಾನ್ ಮಸ್ಕ್ – ಕಾರಣವೇನು ಗೊತ್ತಾ?
ಇದೀಗ ಮಸ್ಕ್ರ ಒಂದು ನಿರ್ಧಾರ ಕ್ರಿಪ್ಟೋ ಕರೆನ್ಸಿಯನ್ನೇ ಅಲುಗಾಡಿಸಿ ಬಿಟ್ಟಿದೆ. ಕ್ರಿಪ್ಟೋ ವ್ಯವಹಾರದಲ್ಲೂ ತೊಡಗಿಸಿಕೊಂಡಿರುವ ಎಲಾನ್ ಮಸ್ಕ್, ಕೆಲ ದಿನಗಳ ಹಿಂದೆ ಟ್ವಿಟ್ಟರ್ ಲೋಗೋದಲ್ಲಿ ಹಕ್ಕಿಯ ಫೋಟೋ ತೆಗೆದು ಶ್ವಾನದ ಚಿತ್ರವನ್ನ ರಿಪ್ಲೇಸ್ ಮಾಡಿದ್ದರು. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಡಾಗ್ಕಾಯಿನ್ ಅನ್ನೋ ಕ್ರಿಪ್ಟೋ ಕರೆನ್ಸಿಗೂ ಲಾಭವಾಗಿತ್ತು. ಆದ್ರೆ ಎಲಾನ್ ಮಸ್ಕ್ಗೆ ಅದೇನನ್ನಿಸ್ತೋ ಏನೊ, ಟ್ವಿಟ್ಟರ್ ಲೋಗೋದಲ್ಲಿ ಶ್ವಾನದ ಫೋಟೋ ತೆಗೆದು ಮತ್ತೆ ಹಕ್ಕಿವೋ ಚಿತ್ರವನ್ನ ರಿಸ್ಟೋರ್ ಮಾಡಿದ್ದಾರೆ.
ಮಸ್ಕ್ರ ಈ ಒಂದು ನಿರ್ಧಾರದಿಂದಾಗಿ 2013ರಲ್ಲಿ ಚಾಲ್ತಿಗೆ ಬಂದ ಡಾಗ್ಕಾಯಿನ್ ಹೆಸರಿನ ಕ್ರಿಪ್ಟೋ ಕರೆನ್ಸಿಯ ಷೇರುಮೌಲ್ಯ ಶೇಕಡಾ 9ರಷ್ಟು ಕುಸಿದಿದೆ. ಯಾಕಂದ್ರೆ, ಈ ಡಾಗ್ಕಾಯಿನ್ ಕರೆನ್ಸಿ ಲೋಗೋದಲ್ಲೂ ಕೂಡ ಮಸ್ಕ್ ಟ್ವಿಟ್ಟರ್ಗೆ ನಮೂದಿಸಿದ ಶ್ವಾನದ ಫೋಟೋವೇ ಇದೆ. ಅದ್ಯಾವ ಉದ್ದೇಶದಿಂದ ಎಲಾನ್ ಮಸ್ಕ್ ಟ್ವಿಟ್ಟರ್ ಲೋಗೋಗೆ ಶ್ವಾನದ ಫೋಟೋ ಹಾಕಿದ್ರೋ ಅವರಿಗೇ ಗೊತ್ತು.