ಅಯೋಧ್ಯೆ ರಾಮನಿಗೆ 155 ದೇಶಗಳ ನದಿ ನೀರಿನಿಂದ ಅಭಿಷೇಕ!

ಅಯೋಧ್ಯೆ ರಾಮನಿಗೆ 155 ದೇಶಗಳ ನದಿ ನೀರಿನಿಂದ ಅಭಿಷೇಕ!

ಹಿಂದೂಗಳ ಪವಿತ್ರ ಕ್ಷೇತ್ರ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೀಗ ಏಪ್ರಿಲ್ 23 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 155 ದೇಶಗಳ ನದಿಯ ನೀರಿನಿಂದ ಶ್ರೀರಾಮನಿಗೆ ಅಭಿಷೇಕ ಮಾಡಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಸೇರಿದವು ಅಮೂಲ್ಯ ಸಾಲಿಗ್ರಾಮ ಶಿಲೆಗಳು – ರಾಮ ಸೀತೆಯರ ವಿಗ್ರಹ ಕಾರ್ಯ ಶುಭಾರಂಭ

155 ದೇಶಗಳ ನದಿಯ ನೀರಿನಿಂದ ಶ್ರೀರಾಮನಿಗೆ ಅಭಿಷೇಕ ನೆರವೇರಲಿದೆ. ದೆಹಲಿ ಮೂಲದ ರಾಮ ಭಕ್ತ ವಿಜಯ್ ಸಾಲಿ ನೇತೃತ್ವದ ತಂಡ 155 ದೇಶಗಳ ನೀರನ್ನು ತಂದು ಸಿಎಂ ಯೋಗಿ ಆದಿತ್ಯನಾಥ್ ಗೆ ಹಸ್ತಾಂತರಿಸಲಿದ್ದಾರೆ. ಅಂತಾ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024 ರ ಜನವರಿಯಲ್ಲಿ ಮಂದಿರದ ಗರ್ಭಗುಡಿ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗುತ್ತಿದೆ. ಇದೇ ಏಪ್ರಿಲ್ 23 ರಂದು ಮಣಿರಾಮ್ ದಾಸ್ ಚಾನ್ನಿ ಸಭಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಜಲ ಕಲಶದ ಪೂಜೆ ನೆರವೇರಿಸಲಿದ್ದಾರೆ.

suddiyaana