ದೇಶದಲ್ಲಿ ಮತ್ತೆ ಕೊರೊನಾ ತಾಂಡವ – ಒಂದೇ ದಿನ 6,050 ಹೊಸ ಪಾಸಿಟಿವ್ ಕೇಸ್, 14 ಮಂದಿ ಸಾವು

ದೇಶದಲ್ಲಿ ಮತ್ತೆ ಕೊರೊನಾ ತಾಂಡವ – ಒಂದೇ ದಿನ 6,050 ಹೊಸ ಪಾಸಿಟಿವ್ ಕೇಸ್, 14 ಮಂದಿ ಸಾವು

 ನವದೆಹಲಿ: ಭಾರತದಲ್ಲಿಕೊರೊನಾ ಪಾಸಿಟಿವ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  6,050 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದು ನಿನ್ನೆಗಿಂತ ಶೇಕಡಾ 13 ರಷ್ಟು ಹೆಚ್ಚಾಗಿದೆ  ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಗುರುವಾರ 5,335 ಪಾಸಿಟಿವ್ ಕೇಸ್ ವರದಿಯಾಗಿತ್ತು. ಶುಕ್ರವಾರ ಒಂದೇ ದಿನ ಶೇಕಡಾ 13 ರಷ್ಟು ಕೊರೊನಾ ಕೇಸ್ ಪತ್ತೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 28,303 ಆಗಿದೆ.

ಇದನ್ನೂ ಓದಿ: ಮಳೆ ಅವಾಂತರ ತಡೆಗೆ ಸಜ್ಜಾದ ಅಧಿಕಾರಿಗಳು – 200 ಪ್ರವಾಹ ಪ್ರದೇಶಗಳನ್ನು ಗರುತಿಸಿದ ಬಿಬಿಎಂಪಿ

ದೇಶದಲ್ಲಿ ಕೊವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,47,45,104ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೊವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 53,0943ಕ್ಕೆ ಏರಿಕೆಯಾಗಿದೆ. ಈ ನಡುವೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,41,85,858ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 1,78,533 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ  92,25,04,138 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಮತ್ತೊಮ್ಮೆ ಬೂಸ್ಟರ್ಡೋಸ್ನೀಡಲು ತಜ್ಞರ ಸಲಹೆ

ಪೂರ್ವರೋಗಗಳಿಂದ ಬಳಲುತ್ತಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್‌ ಡೋಸ್‌ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ‘ಲಸಿಕಾಕರಣ ತಜ್ಞರ ಸಮಿತಿ’ ಸಲಹೆ ನೀಡಿದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಹೆಚ್ಚುತ್ತಿರುವ ನಡುವೆಯೇ ಈ ಸಲಹೆ ಬಂದಿದೆ. ನಿರ್ದಿಷ್ಟಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರು, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್‌ ಡೋಸ್‌ ನೀಡಬೇಕು. ಒಂದು ವೇಳೆ ಇವರು ಕೊವಿಡ್‌ಗೆ ತುತ್ತಾದರೆ ಹೆಚ್ಚಿನ ತೊಂದರೆಗೆ ತುತ್ತಾಗಲಿದ್ದಾರೆ ಎಂದು ಸಮಿತಿ ಹೇಳಿದೆ.

ಅಲ್ಲದೇ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್‌ ಡೋಸ್‌ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ 6 ತಿಂಗಳಿನಿಂದ 17 ವರ್ಷದೊಳಗಿನವರನ್ನು ಲಸಿಕೆ ನೀಡಲು ಕೊನೆಯಲ್ಲಿ ಪರಿಗಣಿಸಹುದು ಎಂದು ಸಮಿತಿ ಹೇಳಿದೆ.

suddiyaana