9 ರಿಂದ 12 ನೇ ತರಗತಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ!
ಪರೀಕ್ಷೆ ನಡೆಯುತ್ತಿದ್ರೆ, ಪರೀಕ್ಷಾ ಹಾಲ್ಗೆ ಯಾವುದೇ ಪುಸ್ತಕ ಚೀಟಿ ತೆಗೆದುಕೊಂಡು ಹೋಗುವಂತಿಲ್ಲ. ಯಾರಾದ್ರೂ ಚೀಟಿ, ಪುಸ್ತಕ ತಂದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆದ್ರೆ ಇನ್ನುಮುಂದೆ ವಿದ್ಯಾರ್ಥಿಗಳು, ಪಠ್ಯ ಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ಮೃತ ರೈತ ಶುಭಕರನ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಪಂಜಾಬ್ ಸಿಎಂ – ಸಹೋದರನಿಗೆ ಸರ್ಕಾರಿ ಉದ್ಯೋಗ
ಹೌದು, ಅಚ್ಚರಿಯಾದ್ರೂ ಸತ್ಯ. ಇನ್ನು ಮುಂದೆ ವಿದ್ಯಾರ್ಥಿಗಳು, ಪಠ್ಯ ಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಒಪನ್ ಬುಕ್ ಎಕ್ಸಾಂ (ತೆರೆದ ಪುಸ್ತಕ ಪರೀಕ್ಷೆ) ಅನ್ನು ಈ ವರ್ಷ ಸಿಬಿಎಸ್ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲು ನಿರ್ಧರಿಸಲಾಗಿದೆ. ದೇಶವ್ಯಾಪಿ, ಆಯ್ದ ಶಾಲೆಗಳಲ್ಲಿ ಮಾತ್ರವೇ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನ ಅನ್ವಯ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ಆದರೆ ಇದನ್ನು ಬೋರ್ಡ್ ಎಕ್ಸಾಂ ಅಂದರೆ ಅಂತಿಮ ಪರೀಕ್ಷೆ ವೇಳೆ ಬಳಕೆ ಮಾಡುವುದಿಲ್ಲ. ಎಂದು ಸಿಬಿಎಸ್ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಓಪನ್ ಎಕ್ಸಾಂ ಉದ್ದೇಶ ಏನು?
ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಮಯ, ವಿದ್ಯಾರ್ಥಿಗಳ ಯೋಚನಾ ಶಕ್ತಿ, ವಿಶ್ಲೇಷಣಾ ಶಕ್ತಿ, ಗಂಭೀರ ಮತ್ತು ರಚನಾತ್ಮಕ ಆಲೋಚನೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಈ ಮಾದರಿಯ ಲಾಭಗಳೇನು, ನಷ್ಟಗಳೇನು? ಅನ್ನೋದನ್ನು ಅಧ್ಯಯನ ಮಾಡಲು ಓಪನ್ ಎಕ್ಸಾಂ ಅನ್ನು ನಡೆಸಲು ಚಿಂತನೆ ನಡೆಸಲಾಗಿದೆ.
ಯಾವ ವಿಷಯಗಳಿಗೆ ಪ್ರಯೋಗ?
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಮತ್ತು 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ಆಯೋಜಿಸಲಾಗುವುದು.