ಅಂಕಪಟ್ಟಿಯಲ್ಲಿ ರಾಜಸ್ತಾನ್ ರಾಯಲ್ಸ್ಗೆ ಅಗ್ರಸ್ಥಾನ – 8ಕ್ಕೇರಿದ ಮುಂಬೈ ಇಂಡಿಯನ್ಸ್, ಆರ್ಸಿಬಿಗೆ 9ನೇ ಸ್ಥಾನ
ಐಪಿಎಲ್ ಈ ಸೀಸನ್ನಲ್ಲಿ ಕೆಲವು ತಂಡಗಳು ಅಚ್ಚರಿಯ ಫಲಿತಾಂಶ ದಾಖಲಿಸಿವೆ. ಮುಂಬೈ ಇಂಡಿಯನ್ಸ್ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿರುವಾಗಲೇ ಒಂದು ಗೆಲುವು ತಂಡಕ್ಕೆ ಈಗ ಹೊಸ ಹುಮ್ಮಸ್ಸು ಕೊಟ್ಟಿದೆ. ಇದರ ಜೊತೆಗೆ ಅಂಕಪಟ್ಟಿಯಲ್ಲೂ ಎರಡು ಸ್ಥಾನ ಮೇಲಕ್ಕೇರಿದೆ.
ಇದನ್ನೂ ಓದಿ: ಗುಜರಾತ್ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್.. – 33 ರನ್ಗಳ ಭರ್ಜರಿ ಜಯ
ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಗೆಲುವಿನ ಓಟ ಮುಂದುವರೆಸಿವೆ. ಆಡಿರುವ ಎಲ್ಲಾ ಮ್ಯಾಚ್ಗಳಲ್ಲೂ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಗೆಲುವು ದಾಖಲಿಸಿವೆ. ಈ ಮೂಲಕ IPL 2024 ರ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ. ಪಾಯಿಂಟ್ಸ್ ಟೇಬಲ್ನ ಅಗ್ರಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಕಾಣಿಸಿಕೊಂಡಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಇದುವರೆಗೆ 4 ಪಂದ್ಯಗಳನ್ನಾಡಿದ್ದು, 4 ಮ್ಯಾಚ್ನಲ್ಲೂ ಜಯ ಸಾಧಿಸಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +1.120.
ಈ ಬಾರಿಯ ಐಪಿಎಲ್ನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಒಟ್ಟು 6 ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ +2.518 ನೆಟ್ ರನ್ ಹೊಂದುವ ಮೂಲಕ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಎಲ್ಎಸ್ಜಿ ಒಟ್ಟು 6 ಅಂಕಗಳೊಂದಿಗೆ +0.775 ನೆಟ್ ರನ್ ರೇಟ್ ಹೊಂದಿದೆ. ಇನ್ನು ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು 4 ಅಂಕ ಹೊಂದಿರುವ ಸಿಎಸ್ಕೆ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.517 . ಸನ್ರೈಸರ್ಸ್ ಹೈದರಾಬಾದ್ ತಂಡವು 4 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, ಇದೀಗ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಎಸ್ಆಆರ್ಹೆಚ್ ತಂಡದ ನೆಟ್ ರನ್ ರೇಟ್ +0.409 .
ಇನ್ನು ಮೊದಲ ಮೂರು ಪಂದ್ಯಗಳಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳಲ್ಲಿ 2 ಅಂಕ ಸಂಪಾದಿಸಿರುವ ಮುಂಬೈ ಇಂಡಿಯನ್ಸ್ ಇದೀಗ -0.704 ನೆಟ್ ರನ್ ರೇಟ್ನೊಂದಿಗೆ 8ನೇ ಸ್ಥಾನಕ್ಕೇರಿದೆ.
ಆರ್ಸಿಬಿ ತಂಡವು ಇದುವರೆಗೆ 5 ಪಂದ್ಯಗಳನ್ನಾಡಿದ್ದು, ಇದರಲ್ಲಿ 4 ಮ್ಯಾಚ್ನಲ್ಲಿ ಸೋತಿದೆ. ಈ ಮೂಲಕ ಕೇವಲ 2 ಅಂಕ ಸಂಪಾದಿಸಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ -0.843.