9 ವರ್ಷವಾದ್ರೆ ಸಾಕು ಈ ಮನೆಯ ಮಕ್ಕಳು ಏಕಾಏಕಿ ನಾಪತ್ತೆ! – ಏನಿದು ವಿಚಿತ್ರ ಘಟನೆ?

9 ವರ್ಷವಾದ್ರೆ ಸಾಕು ಈ ಮನೆಯ ಮಕ್ಕಳು ಏಕಾಏಕಿ ನಾಪತ್ತೆ! – ಏನಿದು ವಿಚಿತ್ರ ಘಟನೆ?

ಈ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ 9 ರ ಕಂಟಕ. ಮಕ್ಕಳಿಗೆ 9 ವರ್ಷವಾದ್ರೆ ಸಾಕು ಕುಟುಂಬಸ್ಥರು ಹೆದರುತ್ತಾರೆ. ಯಾಕಂದ್ರೆ ಮಕ್ಕಳಿಗೆ 9 ವರ್ಷವಾದ್ರೆ ಏಕಾಏಕಿ ನಾಪತ್ತೆಯಾಗುತ್ತಾರೆ. ಹೀಗೆ ಏಕಾಏಕಿ ಮಕ್ಕಳು ನಾಪತ್ತೆಯಾಗುತ್ತಿರುವುದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: 66 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ! – ಮೇ ತಿಂಗಳಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ಈ ವಿಚಿತ್ರ ಘಟನೆ ನಡೆದಿದ್ದು, ಗದಗ ಜಿಲ್ಲೆಯ ಹೊಂಬಳ ನಾಕಾ ಗ್ರಾಮದ  ದಾವಲಖಾನವರ ಕುಟುಂಬದಲ್ಲಿ. ಈ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದರೆ ಹೆತ್ತವರಲ್ಲಿ ಆತಂಕ ಶುರುವಾಗುತ್ತದೆ. ಏಕೆಂದರೆ, ಒಂಬತ್ತು ವರ್ಷ ತುಂಬುತ್ತಿದ್ದಂತೆ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದಾರೆ. ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಕೂಡ ಪ್ರಯೋಜನ ಆಗುತ್ತಿಲ್ಲ. 13 ವರ್ಷಗಳ ಹಿಂದೆ ಅಂದರೆ, 2010ರ ಅಕ್ಟೋಬರ್ 10ರಂದು ಈ ಕುಟುಂಬದ ಒಂಬತ್ತು ವರ್ಷದ ಬಾಲಕ ಇಲಿಯಾಸ್ ದಾವಲಖಾನವರ ಹೆಸರಿನ ಬಾಲಕ ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದ. 13 ವರ್ಷದ ಹಿಂದೆ ನಾಪತ್ತೆಯಾಗಿರುವ ಬಾಲಕ ಈವರೆಗೂ ಪತ್ತೆಯಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದೀಗ ಅದೇ ಕುಟುಂಬದ ಒಂಬತ್ತು ವರ್ಷದ ಮತ್ತೋರ್ವ ಬಾಲಕ ಅಬ್ಜಲ್ ದಾವಲಖಾನವರ ಮೇ. 30 ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದಾನೆ. ಬಾಲಕ ದಿಢೀರ್ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಮನೆಯ ಮುದ್ದಿನ ಮಗನಿಗಾಗಿ ಕುಟುಂಬಸ್ಥರು ಫೋಟೋ ಹಿಡಿದು  ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಘಟನೆ ಸಂಬಂಧ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ಅಪಹರಣ ದೂರು ದಾಖಲಾಗಿದ್ದು, ಪೊಲೀಸರಿಂದಲೂ ಪತ್ತೆಕಾರ್ಯ ನಡೆಯುತ್ತಿದೆ. ಸದ್ಯ ಈ ಪ್ರಕರಣ ನಿಗೂಢವಾಗಿಯೇ ಉಳಿದಿದೆ.

suddiyaana