ಶಸ್ತ್ರಚಿಕಿತ್ಸೆಗೆ ‌ಹೋದವರು ದೃಷ್ಠಿ ಕಳೆದುಕೊಂಡ್ರು! – ಅಯ್ಯೋ.. 9 ಮಂದಿ ಬಾಳಲ್ಲಿ ಕತ್ತಲು!

ಶಸ್ತ್ರಚಿಕಿತ್ಸೆಗೆ ‌ಹೋದವರು ದೃಷ್ಠಿ ಕಳೆದುಕೊಂಡ್ರು! – ಅಯ್ಯೋ.. 9 ಮಂದಿ ಬಾಳಲ್ಲಿ ಕತ್ತಲು!

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಹೋದವರು ದೃಷ್ಟಿಯನ್ನ ಕಳೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇದೀಗ ವೈದ್ಯರ ಎಡವಟ್ಟಿನಿಂದಾಗಿ 9 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ರಿಪ್‌ಗೆ ಹೋಗಲು ಬಿಟ್ಟಿಲ್ಲ ಎಂದು ಪ್ರಾಣ ಬಿಟ್ಟ ಮಹಿಳೆ! – ಫಾರಿನ್‌ನಿಂದ ಬಂದ ಮಗಳು ಆರೋಪ ಮಾಡಿದ್ದು ಅಪ್ಪ, ತಮ್ಮನ ಮೇಲೆ!

ಈ ಘಟನೆ ಉತ್ತರ ಪ್ರದೇಶದ ನ್ಯೂ ರಾಜೇಶ್ ಹೈಟೆಕ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನ್ಯೂ ರಾಜೇಶ್ ಹೈಟೆಕ್ ಆಸ್ಪತ್ರೆಯಲ್ಲಿ ಫೆಬ್ರವರಿ 1ರಂದು ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಗಿತ್ತು. ಈ ಶಿಬಿರದಲ್ಲಿ 30 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ 24 ಗಂಟೆಗಳ ಒಳಗೆ ಹಲವಾರು ರೋಗಿಗಳು ತೀವ್ರ ನೋವು ಮತ್ತು ಶಸ್ತ್ರಚಿಕಿತ್ಸೆಯ ಕಣ್ಣಿನಲ್ಲಿ ನೀರು ಸೋರಿಕೆ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಸುಮಾರು 18 ಮಂದಿಗೆ ಸೋಂಕು ತಗುಲಿದ್ದು ಅವರ ಸ್ಥಿತಿ ಹದಗೆಟ್ಟ ಬಳಿಕ ಅವರನ್ನು ದೆಹಲಿ, ಲಕ್ನೋ ಮತ್ತು ವಾರಣಾಸಿಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಒಬ್ಬ ರೋಗಿ ಮಾತ್ರ ಭಾಗಶಃ ದೃಷ್ಟಿಯನ್ನು ಮರಳಿ ಪಡೆದಿದ್ದಾನೆ. ಒಂಬತ್ತು ಮಂದಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇನ್ನು ಘಟನೆಯ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ಅವರು ಆಸ್ಪತ್ರೆಯನ್ನು ಸೀಲ್ ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಝಾ, ಇದೊಂದು ಗಂಭೀರ ಲೋಪ. ತನಿಖಾ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಬ್ಯಾಕ್ಟೀರಿಯಾ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಒಂಬತ್ತು ಜನರಲ್ಲಿ ಕೂಡ ಒಂದು ಕಣ್ಣಿಗೆ ತೊಂದರೆಯಾಗಿದೆ. ಹಲವು ಶಸ್ತ್ರಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆಯ ಅನಂತರ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕೆಲವರು ಮರುದಿನ ಬಂದು ತಮಗಾದ ತೊಂದರೆಗಳ ಬಗ್ಗೆ ದೂರು ನೀಡಿದ್ದಾರೆ.  ಹೆಚ್ಚು ಬಾಧಿತರಾದ ಕೆಲವು ರೋಗಿಗಳು ದೆಹಲಿಯ ಏಮ್ಸ್ , ವಾರಣಾಸಿ ಮತ್ತು ಲಕ್ನೋದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ವೈದ್ಯರು ಸೋಂಕಿತ ಕಣ್ಣನ್ನು ತೆಗೆದುಹಾಕಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರದೇಶಿ ಎಂಬವರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ. ಅವರು ಫೆಬ್ರವರಿ 17ರಂದು ದೆಹಲಿಯ ಏಮ್ಸ್‌ನಲ್ಲಿ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರ ವರದಿಗಳನ್ನು ಆಧರಿಸಿ ಕಣ್ಣನ್ನು ತೆಗೆದುಹಾಕಬೇಕಾಗಬಹುದು ಎಂದು ವೈದ್ಯರು ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ. ಇದರಿಂದ ಆಸ್ಪತ್ರೆಯನ್ನು ಮುಚ್ಚಿ ತನಿಖೆಗೆ ಆದೇಶಿಸಲಾಗಿದೆ.

Shwetha M

Leave a Reply

Your email address will not be published. Required fields are marked *