ಜೈಲು ಸೇರಿದ್ದ 9 ಮೇಕೆಗಳು ಒಂದು ವರ್ಷದ ಬಳಿಕ ರಿಲೀಸ್‌! – ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?

ಜೈಲು ಸೇರಿದ್ದ 9 ಮೇಕೆಗಳು ಒಂದು ವರ್ಷದ ಬಳಿಕ ರಿಲೀಸ್‌! – ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?

ತಪ್ಪು ಮಾಡಿದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅದು ಶ್ರೀಮಂತನೇ ಆಗಿರಲಿ, ಬಡವನೇ ಆಗಿರಲಿ.. ಆ ವ್ಯಕ್ತಿ ಮಾಡಿರುವುದು ತಪ್ಪು ಅಂತಾ ಸಾಬೀತು ಆದ ಕೂಡಲೇ ಶಿಕ್ಷೆ ನೀಡಲಾಗುತ್ತೆ. ಇನ್ನು ಸಾಕು ಪ್ರಾಣಿಗಳು ತಪ್ಪು ಮಾಡಿದ್ರೆ ಅದರ ಮಾಲೀಕರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕೆಲವೊಮ್ಮೆ ಸಾಕು ಪ್ರಾಣಿಗಳು ಮಾಡಿದ ಕಿತಾಪತಿಗೆ ಅವುಗಳ ಮಾಲೀಕ ದಂಡ ಪಾವತಿಸಬೇಕಾಗುತ್ತೆ. ಕೆಲವು ಸಂದರ್ಭಗಳಲ್ಲಿ ಮಾಲೀಕರು ಜೈಲಿಗೆ ಹೋದ ಉದಾಹರಣೆಗಳೂ ಇವೆ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಒಂಭತ್ತು ಮೇಕೆಗಳು ರಿಲೀಸ್​ ಆಗಿವೆ.

ಇದನ್ನೂ ಓದಿ: ಶಾಲೆಗೆ ರಜೆ ಸಿಗಲಿ ಅಂತಾ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ! – ವಿದ್ಯಾರ್ಥಿಯ ಕಿತಾಪತಿಗೆ ಮೂವರು ಅಸ್ವಸ್ಥ!

ಸಾಮಾನ್ಯವಾಗಿ ಸಾಕು ಪ್ರಾಣಿಗಳು ಇತರರಿಗೆ ಏನಾದರೂ ತೊಂದರೆ ಕೊಟ್ಟರೆ, ಅವುಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ದೂರು ದಾಖಲಾದ್ರೆ ಠಾಣೆಗೆ ಕರೆದು ಪೊಲೀಸರು ವಾರ್ನ್‌ ಮಾಡಿ ಕಳುಹಿಸುತ್ತಾರೆ. ಆದ್ರೆ ಬಾಂಗ್ಲಾದೇಶದ ಬಾರಿಸಾಲ್ 9 ಮೇಕೆಗಳನ್ನು ಒಂದು ವರ್ಷದ ಹಿಂದೆ ಪ್ರಕರಣವೊಂದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಇದೀಗ ಈ ಮೇಕೆಗಳನ್ನು ರಿಲೀಸ್‌ ಮಾಡಲಾಗಿದೆ. ರಿಲೀಸ್‌ ಆದ ಮೇಕೆಗಳು ಈಗ ಮಾಲೀಕನ ಕೈ ಸೇರಿವೆ.

ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು?

ಮೇಕೆಗಳು ಸಾಮಾನ್ಯವಾಗಿ ಹಸಿರು ಕಂಡ ತಕ್ಷಣ ಹೋಗಿ ಮೇಯುತ್ತವೆ. ಹುಲ್ಲು ಮೇಯುತ್ತಾ ಎಲ್ಲೆಂದರಲ್ಲಿ ಓಡಾಡುತ್ತವೆ. ಡಿಸೆಂಬರ್​ 6, 2022ರಲ್ಲಿ ಮೇಕೆಗಳು ಹುಲ್ಲು ಮೇಯುತ್ತಾ ಸ್ಥಳೀಯ ಸ್ಮಶಾನದ ಒಳ ಹೊಕ್ಕಿವೆ. ಬಳಿಕ ಅಲ್ಲಿದ್ದ ಹುಲ್ಲುಗಳನ್ನು ತಿಂದಿವೆ. ಇದೇ ಕಾರಣದಕ್ಕೆ ಸುಮಾರು 1 ವರ್ಷದ ಹಿಂದೆ 9 ಮೇಕೆಗಳು ಜೈಲು ಸೇರಿದ್ದವು. ಆದರೆ ಈ ಮೇಕೆಗಳನ್ನು ಜೈಲಿನಿಂದ ರಿಲೀಸ್​ ಮಾಡಲಾಗಿದೆ.

ಮೇಕೆಗಳ ಮಾಲೀಕ ಶಹರಿಯಾರ್​ ಸಚಿವ್​ ರಾಜೀಬ್​ 9 ಮೇಕೆಗಳನ್ನು ಹಿಂತಿರುಗಿ ಪಡೆದಿದ್ದಾರೆ. ಹೊಸದಾಗಿ ಚುನಾಯಿತಗೊಂಡಿರುವ ಸಿಟಿ ಕಾರ್ಪೋರೇಷನ್​ ಮೇಯರ್​ ಅಬುಲ್​ ಖೈರ್​ ಅಬ್ದುಲ್ಲಾ ಅವರಿಗೆ ಮನವಿ ಮಾಡುವ ಮೂಲಕ ಜೈಲು ಸೇರಿದ್ದ ಮೇಕೆಗಳನ್ನು ಮರಳಿ ಪಡೆದಿದ್ದಾರೆ.

ಪ್ರಾಣಿಗಳು ಜೈಲು ಸೇರಿದ್ದು ಇದೇ ಮೊದಲಲ್ಲ!

ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ಕತ್ತೆಗಳ ಹಿಂಡನ್ನು ಜೈಲಿಗೆ ಹಾಕಲಾಗಿತ್ತು. ಕಾರಣ ಉರೈ ಜೈಲಿನ ಹೊರಗೆ 5 ಲಕ್ಷ ಮೌಲ್ಯದ ಸಸ್ಯಗಳನ್ನು ತಿಂದು ನಾಶ ಪಡಿಸಿದ್ದಕ್ಕಾಗಿ ಬಂಧಿಸಲಾಯಿತು. 4 ದಿನಗಳ ಬಳಿಕ ಕತ್ತೆಗಳನ್ನು ರಿಲೀಸ್​ ಮಾಡಲಾಗಿತ್ತು.

Shwetha M