ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಕೋಟಿ ಗೆದ್ದ 8ನೇ ತರಗತಿ ವಿದ್ಯಾರ್ಥಿ – ಬಾಲಕನಿಗೆ ಹರಿಯಾಣ ಸಿಎಂ ಅಭಿನಂದನೆ

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಕೋಟಿ ಗೆದ್ದ 8ನೇ ತರಗತಿ ವಿದ್ಯಾರ್ಥಿ – ಬಾಲಕನಿಗೆ ಹರಿಯಾಣ ಸಿಎಂ ಅಭಿನಂದನೆ

8ನೇ ತರಗತಿಯ ವಿದ್ಯಾರ್ಥಿ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಕೋಟಿ ರೂಪಾಯಿ ಗೆದ್ದಿದ್ದಾನೆ. 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಒಂದು ಕೋಟಿ ರೂಪಾಯಿ ಪಡೆದಿದ್ದಾನೆ. ಈ ಮೂಲಕ, ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಇಷ್ಟು ಬೃಹತ್ ಮೊತ್ತ ಗೆದ್ದಿರುವ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಇದನ್ನೂ ಓದಿ: ಕಿಡ್ನ್ಯಾಪ್‌ ಆಗಿದ್ದ ಬಾಲಕನನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆಹಚ್ಚಿದ  ಪೊಲೀಸ್‌ ಶ್ವಾನ!

8ನೇ ಕ್ಲಾಸ್ ವಿದ್ಯಾರ್ಥಿ ಮಯಾಂಕ್. ಹರಿಯಾಣದ ಮಹೇಂದ್ರಗಢ್ ವಿದ್ಯಾರ್ಥಿ . ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋನಲ್ಲಿ ಒಂದು ಕೋಟಿ ರೂಪಾಯಿ ಪಡೆಯುವ ಮೂಲಕ ಮಯಾಂಕ್ ದಾಖಲೆ ಬರೆದಿದ್ದಾನೆ. ಒಂದು ಕೋಟಿ ರೂಪಾಯಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿಯಾಗಿ ಮಯಾಂಕ್ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. 15 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮಯಾಂಕ್ ಅಚ್ಚರಿ ಮೂಡಿಸಿದ್ದಾನೆ. ಕೇವಲ ಒಂದು ಕೋಟಿಗೆ ಮಾತ್ರವಲ್ಲ, ಏಳು ಕೋಟಿಗೂ ಗುರಿಯಿಟ್ಟು ಆಟವಾಡಲು ಮಯಾಂಕ್ ಮುಂದಾಗಿದ್ದ. ಆದರೆ, ಏಳು ಕೋಟಿ ರೂಪಾಯಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಇರುವುದರಿಂದ ಆಟದಿಂದ ವಾಪಸ್ಸಾಗಬೇಕಾಯಿತು. ಈ ಹುಡುಗನ ಸಾಧನೆಗೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ  ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಈಗಾಗಲೇ ಕೆಲವರು ಒಂದು ಕೋಟಿ ರೂಪಾಯಿ ಗೆದ್ದವರಿದ್ದಾರೆ. ಇನ್ನು ಹಲವರು ಕೋಟಿ ಗೆಲ್ಲುವಷ್ಟರಲ್ಲಿಯೇ ತಪ್ಪು ಉತ್ತರ ಕೊಟ್ಟು ಲಕ್ಷ ರೂಪಾಯಿಗಳನ್ನು ಗಳಿಸಿದವರೂ ಇದ್ದಾರೆ.

ಒಂದು ಕೋಟಿಯ ಪ್ರಶ್ನೆಗೆ ಬರಬೇಕಾದರೆ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು, 16ನೇ ಪ್ರಶ್ನೆಯವರೆಗೆ ಬರಬೇಕು. 16ನೇ ಪ್ರಶ್ನೆ ಒಂದು ಕೋಟಿ ರೂಪಾಯಿಯದ್ದಾಗಿರುತ್ತದೆ. ಮಯಾಂಕ್ 16ನೇ ಪ್ರಶ್ನೆಗೂ ಉತ್ತರ ಕೊಟ್ಟು ಬೃಹತ್ ಮೊತ್ತ ಗಳಿಸಿದ್ದರೂ ಅಲ್ಲದೇ ಇತಿಹಾಸ ನಿರ್ಮಿಸಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಬಾಲಕನನ್ನು ಬಿಗ್ ಬಿ ಹಾಡಿ ಕೊಂಡಾಡಿರುವುದನ್ನು ನೋಡಬಹುದು. ಈ ಷೋನಲ್ಲಿ ಸ್ಪರ್ಧಿಗಳಿಗೆ ಮೂರು ಲೈಫ್ ಲೈನ್ ನೀಡಲಾಗುತ್ತದೆ. ಆಟದುದ್ದಕ್ಕೂ ಮೂರು ಬಾರಿ ಲೈಫ್ಲೈನ್ ಬಳಸಬಹುದು. ಕುತೂಹಲದ ಸಂಗತಿ ಎಂದರೆ, ಮಯಾಂಜ್ 3.2 ಲಕ್ಷ ರೂಪಾಯಿವರೆಗೆ ಪ್ರಶ್ನೆಗೆ ಯಾವುದೇ ಲೈಫ್ಲೈನ್ ಬಳಕೆ ಮಾಡಲಿಲ್ಲ.  12.5 ಲಕ್ಷ ರೂಪಾಯಿಯ ಪ್ರಶ್ನೆಗೆ  ಮೊದಲ ಲೈಫ್ಲೈನ್ ಅನ್ನು ಬಳಸಿ ಆ ಮೊತ್ತ ಗಳಿಸಿ ಹಂತಹಂತವಾಗಿ ಮೇಲೇರಿ ಒಂದು ಕೋಟಿ ರೂಪಾಯಿ ಪ್ರಶ್ನೆಗೂ ಸರಿಯುತ್ತರ ಕೊಟ್ಟಿದ್ದಾನೆ. ಅಷ್ಟಕ್ಕೂ ಈತನಿಗೆ ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಯೇನೂ ಸುಲಭವಾಗಿರಲಿಲ್ಲ.  ಹೊಸದಾಗಿ ಪತ್ತೆಯಾದ ಖಂಡಕ್ಕೆ ಅಮೆರಿಕ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ರಚಿಸಿದ ಯುರೋಪಿನ ಕಾರ್ಟೋಗ್ರಾಫರ್ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ  ಅಬ್ರಹಾಂ ಒರ್ಟೆಲಿಯಸ್, ಗೆರಾಡಸ್ ಮರ್ಕೇಟರ್, ಜಿಯೋವಾನಿ ಬಟಿಸ್ಟಾ ಆಗ್ನೆಸ್ ಮತ್ತು ಮಾರ್ಟಿನ್ ವಾಲ್ಡ್ಸೀಮುಲ್ಲರ್ ಎಂಬ ಆಯ್ಕೆ ನೀಡಲಾಗಿತ್ತು. ಆಗ ಮಯಾಂಕ್ ಎರಡನೆಯ ಲೈಫ್ ಲೈನ್ ಬಳಸಿದ.   ‘ಆಸ್ಕ್ ದಿ ಎಕ್ಸ್ಪರ್ಟ್’  ಸಹಾಯ ಪಡೆದು ಸರಿಯುತ್ತರ ಕೊಟ್ಟ. ಈ ಪ್ರಶ್ನೆಗೆ ಸರಿಯಾದ ಉತ್ತರ  ಮಾರ್ಟಿನ್ ವಾಲ್ಡ್ಸೀಮುಲ್ಲರ್ ಎನ್ನುವುದು. ಈ ಉತ್ತರ ಸರಿಯಾಗಿದ್ದ ಕಾರಣ, ಕೋಟ್ಯಧಿಪತಿಯಾದ ಮಯಂಕ್. ಒಂದು ಕೋಟಿ ರೂಪಾಯಿ ಪ್ರಶ್ನೆಯ ಬಳಿಕ ಇದ್ದುದು ಏಳು ಕೋಟಿಯ ಪ್ರಶ್ನೆ. ಇಲ್ಲಿ ಆತನಿಗೆ  ಎರಡನೇ ಮಹಾಯುದ್ಧದ ಸಮಯದಲ್ಲಿ ಯಾವ ನಗರಕ್ಕೆ ಸರಬರಾಜುಗಳನ್ನು ರವಾನಿಸಿದ್ದಕ್ಕಾಗಿ ಸುಬೇದಾರ್ ಎನ್ಆರ್ ನಿಕ್ಕಮ್ ಮತ್ತು ಹವಾಲ್ದಾರ್ ಗಜೇಂದ್ರ ಅವರಿಗೆ ರಷ್ಯಾದಿಂದ ರೆಡ್ ಸ್ಟಾರ್ ಆರ್ಡರ್ ನೀಡಲಾಯಿತು ಎಂಬ ಪ್ರಶ್ನೆ ಕೇಳಲಾಯಿತು. ಆದರೆ ಬಾಲಕನಿಗೆ ಸರಿಯಾದ ಉತ್ತರ ಗೊತ್ತಿಲ್ಲದ ಕಾರಣ, ಆಟವನ್ನು ಬಿಟ್ಟಿದ್ದಾನೆ. ಕೋಟಿ ರೂಪಾಯಿ ಗೆದ್ದ ಬಳಿಕ ಬಾಲಕ ಆನಂದ ಬಾಷ್ಪ ಹರಿಸಿದ್ದಾನೆ.

Sulekha