50 ನಿಮಿಷದಲ್ಲಿ 5 ಕಿ.ಮೀ ಓಡಿದ 80ರ ಅಜ್ಜಿ – ಇವರ ಫಿಟ್ನೆಸ್ ರಹಸ್ಯ ಏನು ಗೊತ್ತಾ?

50 ನಿಮಿಷದಲ್ಲಿ 5 ಕಿ.ಮೀ ಓಡಿದ 80ರ ಅಜ್ಜಿ – ಇವರ ಫಿಟ್ನೆಸ್ ರಹಸ್ಯ ಏನು ಗೊತ್ತಾ?

ಆಯಾಸ ಅನ್ನೋದು ಎಲ್ಲರನ್ನು ಕಾಡುತ್ತದೆ. ಇದು ಯುವಕರಿಗೂ ಹೊರತಾಗಿಲ್ಲ. ಸ್ವಲ್ವ ದೂರ ನಡೆದು ಅಯ್ಯೋ ಸುಸ್ತಾಯ್ತು ಅಂತ ಕುಳಿತುಕೊಳ್ಳುತ್ತಾರೆ. ಇನ್ನು ವೃದ್ದರ ಬಗ್ಗೆ ಕೇಳಬೇಕೆ? ಸುಸ್ತಾಗುತ್ತಿದೆ. ಕಾಲು ನೋವು, ಕೈ ನೋವು ಇದೆ. ಆ ತೈಲ ತಾ.. ಈ ನೋವಿನ ಎಣ್ಣೆ ತಾ.. ಅಂತ ತಮ್ಮ ಮಕ್ಕಳ ಬಳಿ ತಂದು ಕೊಡುವಂತೆ ಕೇಳುತ್ತಾರೆ. ಆದರೆ ಈ ಅಜ್ಜಿ ಮಾತ್ರ ಫುಲ್ ಡಿಫರೆಂಟ್. ಈಕೆಯ  ಉತ್ಸಾಹ ಯುವಕರನ್ನೂ ನಾಚಿಸುವಂತಿದೆ.

ಇದನ್ನೂ ಓದಿ; ರೀಲ್ಸ್ ಮಾಡಿದ ಸುಂದರಿಗೆ ಶಾಕ್ – ₹17 ಸಾವಿರ ದಂಡ ಹಾಕಿದ್ದೇಕೆ ಪೊಲೀಸರು..?

ಮುಂಬೈನಲ್ಲಿ ಪ್ರತಿ ವರ್ಷ  ‘ಟಾಟಾ ಮುಂಬೈ ಮ್ಯಾರಾಥಾನ್’ ಏರ್ಪಡಿಸಲಾಗುತ್ತದೆ. ಇದರಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇಲ್ಲ. ಮಕ್ಕಳಿಂದ ವೃದ್ದರವರೆಗೂ ಎಲ್ಲರೂ ಭಾಗವಹಿಸಬಹುದಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ‘ಟಾಟಾ ಮುಂಬೈ ಮ್ಯಾರಾಥಾನ್’ ಆಯೋಜನೆಗೊಂಡಿತ್ತು. ಇದರಲ್ಲಿ 80 ವರ್ಷದ ಅಜ್ಜಿ ಭಾಗವಹಿಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಹಾರಾಷ್ಟ್ರದ 80 ವರ್ಷದ ಭಾರ್ತಿ ಎಂಬುವವರು ಈ ಸಾಧನೆ ಮಾಡಿದ  ಅಜ್ಜಿ. ಸೀರೆಯುಟ್ಟು ಮ್ಯಾರಾಥಾನ್ ಆಯೋಜನೆಗೊಂಡ ಸ್ಥಳಕ್ಕೆ ಬಂದಿದ್ದಾರೆ. ಎಲ್ಲರೂ ಅಜ್ಜಿ ಮ್ಯಾರಾಥಾನ್ ವೀಕ್ಷಿಸಲು ಬಂದಿದ್ದಾರೆ ಅಂದುಕೊಂಡಿದ್ದಾರೆ. ಆದರೆ ಈ ಅಜ್ಜಿ ಎಲ್ಲರಂತೆ ಮ್ಯಾರಾಥಾನ್ ನಲ್ಲಿ ಭಾಗವಹಿಸಿ ಶಾಕ್ ನೀಡಿದ್ದಾರೆ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಈ ಅಜ್ಜಿ ಕೇವಲ 50 ನಿಮಿಷದಲ್ಲಿ 5 ಕಿಲೋಮೀಟರ್ ಓಡಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

ತನ್ನ ಉತ್ಸಾಹದ ಗುಟ್ಟೇನು ಎಂಬುದರ ಕಾರಣವನ್ನು ಬಿಚ್ಚಿಟ್ಟಿರುವ ಭಾರ್ತಿ ಅಜ್ಜಿ, ‘ಇದು ನನ್ನ 5 ನೇ ಮ್ಯಾರಾಥಾನ್. ಓಟ ಹಾಗೂ ವಾಕಿಂಗ್ ಅಭ್ಯಾಸವನ್ನು ಇಂದಿಗೂ ನಾನು ರೂಢಿಸಿಕೊಂಡು ಬಂದಿದ್ದೇನೆ. ಇದೇ ನನ್ನನ್ನು ಇಷ್ಟು ಆರೋಗ್ಯದಿಂದ ಹಾಗೂ ಉತ್ಸಾಹದಿಂದ ಇರಲು ಸಹಾಯ ಮಾಡಿದೆ. ಬಹುತೇಕರು ತಮಗೆ ವಯಸ್ಸಾಯಿತು. ಆ ಕೆಲಸ ಮಾಡಬಾರದು. ಈ ಕೆಲಸ ಮಾಡಬಾರದು. ಹೆಚ್ಚು ಓಡಾಡಬಾರದು ಎಂದು ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ನಾನು ಆ ರೀತಿ ವರ್ತಿಸುವುದಿಲ್ಲ. ವಯಸ್ಸು ಎಂಬುದು ನೋಡುಗರಲ್ಲಿ ಕಾಣುವ ಸಂಖ್ಯೆಯಾಗಿದೆ. ವಯಸ್ಸು ಯಾವುದಕ್ಕೂ ಅಡ್ಡಿ ಬರುವುದಿಲ್ಲ ಎಂದು ಹೇಳಿದ್ದಾರೆ.

ಭಾರ್ತಿ ಅಜ್ಜಿ ಮ್ಯಾರಾಥಾನ್ ನಲ್ಲಿ ಓಡುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಜ್ಜಿಯ ಉತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದ್ದು, ವಯಸ್ಸೇ ನಾಚಿಸುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

80-Year-Old Woman Runs Mumbai Marathon In Saree, Sets Fitness Goals

suddiyaana