80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ 57 ವರ್ಷದ ವ್ಯಕ್ತಿ! – ವಿವಾಹವಾದ ಮೇಲೆ ಕಾದಿತ್ತು ಬಿಗ್‌ ಶಾಕ್‌!

80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ 57 ವರ್ಷದ ವ್ಯಕ್ತಿ! – ವಿವಾಹವಾದ ಮೇಲೆ ಕಾದಿತ್ತು ಬಿಗ್‌ ಶಾಕ್‌!

ಇತ್ತೀಚೆಗೆ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ತಮಗಿಂತ 30, 40 ವರ್ಷ ದೊಡ್ಡವರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೂ ಇದ್ದಾರೆ. ಇನ್ನೂ ಕೆಲವರು ಆಸ್ತಿ, ಹಣಕ್ಕಾಗಿ ತಮಗಿಂತ 30, 40 ವರ್ಷ ದೊಡ್ಡವರನ್ನು ಪ್ರೀತಿಸಿ ಮದುವೆಯಾಗುವುದನ್ನು ನಾವು ಕೇಳಿದ್ದೇವೆ. ಇದೀಗ ಇಲ್ಲೊಂದು ಅಂತದ್ದೇ ವಿಚಿತ್ರ ಪ್ರೇಮ ಭಾರೀ ಚರ್ಚೆಗೆ ಗ್ರಾಸವಾಗಿದೆ. 57 ವರ್ಷದ ವ್ಯಕ್ತಿಯೊಬ್ಬ  ತನಗಿಂತ 23 ವರ್ಷ ಹಿರಿಯ ಅಂದರೆ 80 ವರ್ಷದ ಮುದುಕಿಯ ಪ್ರೀತಿಯ ಬಲೆಯನ್ನು ಬಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹಣದ ಆಸೆಗಾಗಿ ಮುದುಕಿಯನ್ನು ಮದುವೆಯಾದ ಈತ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ: ಯುವಕರೊಂದಿಗೆ ಡ್ಯಾನ್ಸ್‌ ಮಾಡಿದ್ದಕ್ಕೆ ಯುವತಿಯನ್ನು ಕೊಂದ ಗ್ರಾಮಸ್ಥರು!

ಕ್ಯಾಲಿಫೋರ್ನಿಯಾದ ಡೇವಿಡ್ ಫೌಟ್(57) ಮತ್ತು ಕ್ಯಾರೊಲಿನ್ ಹಾಲೆಂಡ್ (80) ಎಂಬುವವರು ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ನಿವಾಸಿ ಡೇವಿಡ್ ಸ್ವಂತ ಮನೆ ಹೊಂದಿಲ್ಲ. ಜೀವನ ಸಾಗಿಸಲು ಖಾಯಂ ಕೆಲಸ ಕೂಡ ಇಲ್ಲ. ಪ್ರತಿ ದಿನ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಕೊಂಡು ಜೀವನ ಕಳೆಯುತ್ತಿದ್ದಾನೆ. ಆದರೆ ಕೆಲವು ವಾರಗಳ ಹಿಂದೆ 80 ವರ್ಷದ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಪ್ರೀತಿ ಅರಳಿದೆ. ಕ್ಯಾರೋಲಿನ್ ಬಹಳ ಶ್ರೀಮಂತ ಮಹಿಳೆ. ಹೀಗಾಗಿ ಆಕೆಯನ್ನು ಮದುವೆಯಾದರೆ ಹಣ, ಆಸ್ತಿಯನ್ನು ಲಪಟಾಯಿಸಬಹುದು ಅಂತಾ ಪ್ಲಾನ್‌ ಮಾಡಿದ್ದ. ಇದೀಗ ಆತನ ಪ್ಲಾನ್‌ ಫುಲ್‌ ಉಲ್ಟಾ ಆಗಿದೆ.

ಇವರಿಬ್ಬರು ಮದುವೆಯಾಗುವ ಮುನ್ನ ಒಂದು ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಮಾಡಿಕೊಳ್ಳುವ ವೇಳೆ 5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಿ ಡೇವಿಡ್‌ಗೆ ಸಂಪೂರ್ಣ ಹಣವನ್ನು ನೀಡುವುದಾಗಿ ಕ್ಯಾರೊಲಿನ್ ಭರವಸೆ ನೀಡಿದ್ದರು. ಆದರೆ ಈ ನಡುವೆ ಕ್ಯಾರೋಲಿನ್ ಅವರ ಆರೋಗ್ಯವು ಹದಗೆಟ್ಟಿತು ಮತ್ತು ಸ್ವಲ್ಪ ಸಮಯದೊಳಗೆ ಅವರು ಸಾವನ್ನಪ್ಪಿದರು. ಆದರೆ ಕ್ಯಾರೊಲಿನ್ ಮರಣದ ನಂತರ ಆಕೆಯ ಎಲ್ಲಾ ಆಸ್ತಿಯನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳು ಪಡೆದುಕೊಂಡಿದ್ದು,ಡೇವಿಡ್​​​​ಗೆ ಒಂದು ಪೈಸೆಯನ್ನೂ ನೀಡಲಿಲ್ಲ. ಈಗ ಡೇವಿಡ್ ಮತ್ತೆ ನಿರಾಶ್ರಿತನಾಗಿ ತನ್ನ ಹಳೆಯ ಜೀವನವನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಕ್ಯಾರೊಲಿನ್ ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಡೇವಿಡ್ ತಮ್ಮ ತಾಯಿಯನ್ನು ಹಣಕ್ಕಾಗಿ ಪ್ರೀತಿಯ ಹೆಸರಿನಲ್ಲಿವಂಚಿಸಿದ್ದಾರೆ ಎಂದು ಕ್ಯಾರೋಲಿನ್ ಮಕ್ಕಳು ಆರೋಪಿಸಿದ್ದಾರೆ. ಆದರೆ ಮದುವೆಗೂ ಮುನ್ನ ತನ್ನ ಆಸ್ತಿಯನ್ನು ಮಾರಾಟ ಮಾಡಿ, ಅದರಲ್ಲಿ ಬಂದ ಹಣವನ್ನು ತನಗೆ ನೀಡುತ್ತೇನೆ ಅಂತಾ ಹೇಳಿಕೊಂಡಿದ್ದಳು ಅಂತಾ ಡೇವಿಡ್ ಹೇಳುತ್ತಿದ್ದಾನೆ. ಇದೀಗ ಕ್ಯಾರೊಲಿನ್ ಆಸ್ತಿ ಆಕೆಯ ಮಕ್ಕಳ ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಡೇವಿಡ್ ಸ್ಥಿತಿ.

Shwetha M