ಉಂಗುರ ನುಂಗಿದ 8 ತಿಂಗಳ ಕಂದ – ಚಿಕಿತ್ಸೆ ಫಲಿಸದೇ ಬದುಕಲಿಲ್ಲ ಮಗು

ಉಂಗುರ ನುಂಗಿದ 8 ತಿಂಗಳ ಕಂದ – ಚಿಕಿತ್ಸೆ ಫಲಿಸದೇ ಬದುಕಲಿಲ್ಲ ಮಗು

ಪುಟ್ಟ ಪುಟ್ಟ ಮಕ್ಕಳ ಕೈಗೆ ಏನೇ ಸಿಕ್ಕಿದ್ರೂ ಅಪಾಯವೇ. ಯಾಕೆಂದ್ರೆ, ವರ್ಷದೊಳಗಿನ ಮಕ್ಕಳ ಕೈಗೆ ಏನೇ ಸಿಕ್ಕಿದರೂ ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ ವಿಚಾರವೇ. ಹೀಗಾಗಿ ಹೆತ್ತವರು ಇಂಥಾ ಸಮಯದಲ್ಲಿ ಎಷ್ಟು ಜಾಗೃತೆ ಇದ್ದರೂ ಸಾಕಾಗಲ್ಲ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಬೆಚ್ಚಿಬೀಳುವಂತೆ ಮಾಡಿದೆ. ಮನೆಯಲ್ಲಿ ಆಟವಾಡುತ್ತಿದ್ದಾಗ 8 ತಿಂಗಳ ಮಗುವೊಂದು ಉಂಗುರವನ್ನ ಬಾಯಿಗೆ ಹಾಕಿಕೊಂಡಿದೆ. ಪೋಷಕರು ಗಮನಿಸುವ ವೇಳೆಗೆ ಕಾಲವೇ ಮಿಂಚಿಹೋಗಿತ್ತು.

ಇದನ್ನೂ ಓದಿ:  ಮಹಿಳೆ ಪಕ್ಕ ರಾತ್ರಿಯಿಡೀ ಮಲಗಿದ ವಿಷಕಾರಿ ಹಾವು – ಆಮೇಲೆ ಏನಾಯ್ತು ಗೊತ್ತಾ?  

ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ 8 ತಿಂಗಳ ಮಗು ಮುನೀರ್, ಮನೆಯಲ್ಲಿ ಆಟವಾಡುತ್ತಿದ್ದ. ಆಗ ಮಗುವಿನ ಕೈಗೆ ಉಂಗುರ ಸಿಕ್ಕಿದೆ. ಮಗು ಉಂಗುರವನ್ನು ಬಾಯಿಗೆ ಹಾಕಿಕೊಂಡಿದೆ. ಮಗು ಉಸಿರಾಡಲು ಕಷ್ಟಪಡುವುದನ್ನ ನೋಡಿದ ಹೆತ್ತವರು ತಕ್ಷಣವೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ರಾತ್ರಿ 9 ಗಂಟೆಯಿಂದ ಸುಮಾರು 12 ಗಂಟೆಯವರೆಗೆ ನಿರಂತರವಾಗಿ ಶ್ರಮಪಟ್ಟು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ಹೊರತೆಗೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮಗು ಮೃತಪಟ್ಟಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಮಕ್ಕಳ ಕೈಗೆ ಉಂಗುರ ಮತ್ತು ನಾಣ್ಯಗಳನ್ನು ನೀಡದಂತೆ ಮನವಿ ಮಾಡಿದ್ದಾರೆ.

suddiyaana