8 ಮ್ಯಾಚ್ನಲ್ಲಿ ಜಿತೇಶ್ ಫ್ಲಾಪ್ ಶೋ! – ಫಾರ್ಮ್ ಕಳ್ಕೊಂಡ್ರಾ ಮ್ಯಾಚ್ ಫಿನಿಷರ್?
ರನ್ಗಳಿಸದೇ RCBಗೆ ಹೊರೆಯಾದ್ರಾ?

ಈ ಸಲ ಐಪಿಎಲ್ನಲ್ಲಿ ಆರ್ಸಿಬಿ ಮಿಂಚುತ್ತಿದೆ. ಪ್ಲೇಯಿಂಗ್ 11ನಲ್ಲಿ ಎಲ್ಲರೂ ಚೆನ್ನಾಗಿಯೇ ಆಡುತ್ತಿದ್ದಾರೆ. ನಮ್ಗೆ ಎಲ್ಲರು ಚೆನ್ನಾಗಿ ಆಡ್ತಿದ್ದಾರೆ ಅಂತ ಅನ್ನೋಕೆ ಕಾರಣ ಆರ್ಸಿಬಿ ಎಲ್ಲಾ ಪಂದ್ಯವನ್ನ ಗೆಲ್ಲುತ್ತಾ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ನಲ್ಲಿದೆ. ಹೀಗಾಗಿ ನಾವು ಆರ್ಸಿಬಿಯ ಎಲ್ಲಾ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ ಅನ್ಸುತ್ತೆ.. ಆದ್ರೆ ಗುಂಪಲ್ಲಿ ಗೋವಿಂದ ಅನ್ನೋ ಹಾಗೇ ಆರ್ಸಿಬಿಯಲ್ಲಿ ಕೆಲ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ. ಮ್ಯಾಚ್ ಫಿನಿಷರ್ ಅನ್ನೋ ಖ್ಯಾತಿ ಪಡೆದಿರೋ ಜಿತೇಶ್ ಶರ್ಮಾ ಅವರ ಫಾರ್ಮ್ ಕಳಪೆಯಾಗಿದೆ. 8 ಪಂದ್ಯಗಳನ್ನ ನಾವು ನೋಡಿದ್ರೆ ಜಿತೇಶ್ ಬ್ಯಾಟಿಂಗ್ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದಾರೆ.
ಆರ್ಸಿಬಿ ಬೌಲಿಂಗ್ನಲ್ಲಿ ಬೊಂಬಾಟ್ ಇದೆ.. ಬ್ಯಾಟಿಂಗ್ ಲೈನಪ್ ಕೂಡ ಚೆನ್ನಾಗಿದೆ. ಹೀಗಾಗಿ ಆರ್ಸಿಬಿ ಫುಲ್ ಫಾರ್ಮ್ನಲ್ಲಿದೆ. ಉಳಿದ ತಂಡಗಳ ಎದೆಯಲ್ಲಿ ಆರ್ಸಿಬಿ ಭಯ ಹುಟ್ಟಿಸಿದೆ.. ಟಾಪ್ ಆರ್ಡರ್ ಬ್ಯಾಟ್ಸಮನ್ಗಳು ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ.. ಅದರಿಂದಲೇ ಸಾಕಷ್ಟು ಮ್ಯಾಚ್ಗಳನ್ನ ಆರ್ಸಿಬಿ ಗೆದ್ದಿದೆ. ಆದ್ರೆ ವಿಷ್ಯ ಏನಪ್ಪ ಅಂದ್ರೆ ಮಿಡಲ್ ಆರ್ಡರ್ ಬ್ಯಾಟ್ಸಮನ್ ಜಿತೇಶ್ ಶರ್ಮಾ ಬಗ್ಗೆ.. ಮ್ಯಾಚ್ ಫನಿಷರ್ ಅನ್ನೋ ಪಟ್ಟ ಪಡೆದಿರೋ ಜಿತೇಶ್ ಶರ್ಮಾ ಬ್ಯಾಟ್ನಿಂದ ಈ ಸೀಸನ್ನಲ್ಲಿ ರನ್ಗಳೇ ಬಂದಿಲ್ಲ.. ಆರ್ಸಿಬಿ ಗೆಲ್ತಾ ಇರೋದ್ರಿಂದ ಈ ಬಗ್ಗೆ ಯಾರು ಕೂಡ ಹೆಚ್ಚು ತಲೆಕೆಡಿಸಿಕೊಳ್ಳುವುದ್ದಕ್ಕೆ ಹೋಗ್ತಾ ಇಲ್ಲ. ಆದ್ರೆ ಮುಂದಿನ ಪಂದ್ಯದ ಮೇಲೆ ಇದು ಎಫೆಕ್ಟ್ ಬೀಳಬಹುದು ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.
ಇದನ್ನೂ ಓದಿ: RCB ವಿರುದ್ಧ PBKS ಟ್ರೋಲ್ – LSG ತೊರೆದ ಅರ್ಜುನ್ ತೆಂಡೂಲ್ಕರ್ – ಅರ್ಶ್ದೀಪ್ಗೆ ಮೋಸ ಮಾಡಿದ್ರಾ ವೈಭವ್?
ಈ ಸೀಸನ್ನಲ್ಲಿ ಜಿತೇಶ್ ಶರ್ಮಾ ಅವರ ಅಂಕಿ-ಅಂಶಗಳನ್ನು ನೋಡಿದರೆ ಫ್ಯಾನ್ಸ್ಗೆ ಕೋಪ ಬರುವುದು ಪಕ್ಕಾ.. 8 ಪಂದ್ಯಗಳಿಂದ ಕೇವಲ 10.33ರ ಸರಾಸರಿಯಲ್ಲಿ ಜಿತೇಶ್ ಗಳಿಸಿದ್ದು ಜಸ್ಟ್ 62 ರನ್ ಮಾತ್ರ. ಇದ್ದನ್ನ ನೋಡಿದ್ರೆ ಯಾಕೆ ಜಿತೇಶ್ ಸ್ಲೋ ಬ್ಯಾಟಿಂಗ್ ಜೊತೆ ರನ್ಗಳಿಸೋಕೆೆೆೆೆೆ ಪರದಾಡುತ್ತಿದ್ದಾರ ಅನ್ನೋ ಪ್ರಶ್ನೆ ಎಳುತ್ತೆ.. ನಿಮ್ಗೆ ನಾನು ಈ ಸೀಸನ್ನ ಪ್ರತಿ ಪಂದ್ಯದಲ್ಲಿ ಜಿತೇಶ್ ಎಷ್ಟು ಸ್ಕೋರ್ ಮಾಡಿದ್ದಾರೆ ಅನ್ನೋದ್ದನ್ನ ತೋರಿಸುತ್ತಾ ಹೋಗ್ತಿನಿ..
ಜಿತೇಶ್ ಫ್ಲಾಪ್ ಶೋ!
ಪಂದ್ಯ 1 – SRH ವಿರುದ್ಧ, ಸೀಸನ್ನ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕೌಟ್ ಆಗುವ ಮೂಲಕ ಕೆಟ್ಟ ಆರಂಭ ಪಡೆದರು. ಪಂದ್ಯ 2 – CSK ವಿರುದ್ಧ, ಟಾಪ್ ಆರ್ಡರ್ ಬ್ಯಾಟರ್ಗಳ ಅಬ್ಬರದಿಂದಾಗಿ ಜಿತೇಶ್ಗೆ ಬ್ಯಾಟಿಂಗ್ ಅವಕಾಶವೇ ಸಿಗಲಿಲ್ಲ. ಪಂದ್ಯ 3 ರಲ್ಲಿ RR ವಿರುದ್ಧ ಮಿಂಚೋಕೆ ಒಳ್ಲೆ ಅವಕಾಶ ಇತ್ತು. ಆದ್ರೆ 8 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾಗ್ತಾರೆ. ಪಂದ್ಯ 4, MI ವಿರುದ್ಧ ವಾಂಖೆಡೆ ಮೈದಾನದಲ್ಲೂ ಕೈಕೊಟ್ಟ ಜಿತೇಶ್ 9 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್ ಸೇರ್ತಾರೆ. ಇಲ್ಲೂ ಕೂಡ ಒಳ್ಳೆಯ ಚಾನ್ಸ್ ಇತ್ತು. ಪಂದ್ಯ LSG ವಿರುದ್ಧ..ಈ ಪಂದ್ಯದಲ್ಲಿ ಸ್ವಲ್ಪ ಫಾರ್ಮ್ಗೆ ಬಂದಂತೆ ಕಂಡ್ರೂ ದೊಡ್ಡ ಇನ್ನಿಂಗ್ಸ್ ಕಟ್ಟೋಕೆ ಆಗಿಲ್ಲ. 9 ಬಾಲ್ನಲ್ಲಿ 23 ರನ್ಗಳಿಸಿ ಔಟ್ ಆಗ್ತಾರೆ. DC ವಿರುದ್ಧದ ಪಂದ್ಯದಲ್ಲಿ ಬಾಲ್ಗಳನ್ನೇ ಜಿತೇಶ್ ಶರ್ಮಾ ಹೆಚ್ಚು ತಿಂದ್ರು. 20 ಎಸೆತಗಳನ್ನು ಎದುರಿಸಿ ಗಳಿಸಿದ್ದು, ಕೇವಲ 14 ರನ್ ಮಾತ್ರ. ಇದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. 7ನೇ ಪಂದ್ಯ ಗುಜರಾತ್ ವಿರುದ್ಧ, ಅದೇ ಹಳೇ ಕಥೆ ರಿಪೀಟ್ ಆಯ್ತು.. 6 ಎಸೆತಗಳಲ್ಲಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.. ಡಿಸಿ ವಿರುದ್ಧದ 8ನೇ ಪಂದ್ಯದಲ್ಲಿ ಬ್ಯಾಟಿಂಗ್ಗೆ ಅವಕಾಶ ಸಿಕ್ಕಿಲ್ಲ. ಯಾಕಂದ್ರೆ ಲೋ ಸ್ಕೋರ್ ಮ್ಯಾಚ್ ಆಗಿದ್ರಿಂದ ಟಾಪ್ ಆರ್ಡರ್ ಬ್ಯಾಟ್ಸಮನ್ಗಳು ಪಂದ್ಯವನ್ನ ಗೆಲ್ಲಿಸಿದ್ರು. ನೀವು ಇದ್ದನ್ನ ನೋಡಿದ್ರೆ ಜಿತೇಶ್ ಇಲ್ಲಿ ರನ್ ಹೊಡೆದಿದ್ದಕ್ಕಿಂತ ಬಾಲ್ ತಿಂದಿದ್ದೇ ಜಾಸ್ತಿ..
ಆರ್ಸಿಬಿ ಗೆಲ್ತಾ ಇದೆ, ಹೀಗಾಗಿ ಜಿತೇಶ್ ಶರ್ಮಾ ಬ್ಯಾಟಿಂಗ್ ಬಗ್ಗೆ ಯಾರು ಕೂಡ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.. ಆದ್ರೆ ಮುಂದೆ ಹೀಗೆ ಮುಂದುವರಿದ್ರೆ ಆಗಲ್ಲ.. ಯಾಕಂದ್ರೆ ಈ ಟೂರ್ನಿಯ ನಿರ್ಣಾಯಕ ಹಂತದಲ್ಲಿ ಮಿಡಲ್ ಆರ್ಡರ್ ಬ್ಯಾಟರ್ಗಳ ಫಾರ್ಮ್ ಅತೀ ಮುಖ್ಯವಾಗುತ್ತದೆ. ಹೀಗಾಗಿ ಜಿತೇಶ್ ಶರ್ಮಾ ರನ್ಗಳಿಸೋಕೆ ಪರದಾಡ್ತಾ ಇರೋದು, ಬಾಲ್ ತಿಂತ ಇರೋದ್, ಸ್ಲೋ ಬ್ಯಾಟಿಂಗ್ ಮಾಡ್ತಾ ಇರೋದು RCB ಮ್ಯಾನೇಜ್ಮೆಂಟ್ ಟೆನ್ನನ್ಗೆ ಕಾರಣವಾಗಿದೆ. ಜಿತೇಶ್ ಆದಷ್ಟು ಬೇಗ ಫಾರ್ಮ್ಗೆ ಮರಳದಿದ್ದರೆ, ಅವರ ಬದಲಿಗೆ ಮತ್ತೊಬ್ಬ ಆಟಗಾರನಿಗೆ ಅವಕಾಶ ಸಿಗುವುದು ಪಕ್ಕಾ..

ನೋಡಿರಿ

