8 ಪಂದ್ಯ.. 6 ಸೋಲು.. 2 ಗೆಲುವು! ಪಾಂಡ್ಯಗೆ ಲಾಸ್ಟ್ ಚಾನ್ಸ್ ! – ಮುಂಬೈ ಪ್ಲೇ ಆಫ್‌ ಲೆಕ್ಕಾಚಾರ

8 ಪಂದ್ಯ.. 6 ಸೋಲು.. 2 ಗೆಲುವು!  ಪಾಂಡ್ಯಗೆ ಲಾಸ್ಟ್ ಚಾನ್ಸ್ ! – ಮುಂಬೈ ಪ್ಲೇ ಆಫ್‌ ಲೆಕ್ಕಾಚಾರ

ಲಾಸ್ಟ್‌ ಚಾನ್ಸ್‌.. ಮುಂಬೈ ಇಂಡಿಯನ್ಸ್ ಇವತ್ತು ಲಾಸ್ಟ್‌ ಚಾನ್ಸ್‌.. ಪಾಂಡ್ಯ ಪಡೆ ಇವತ್ತು ಸಿಎಸ್‌ಕೆ ವಿರುದ್ಧ ಗೆದ್ರೆ ಮಾತ್ರ ಪ್ಲೇ ಆಪ್ ಕನಸು ನನಸಾಗಿ ಉಳಿಯುತ್ತೆ.. ಸೋತ್ರೆ ಬಹುತೇಕೆ ಇವತ್ತೇ ಪ್ಲೇ ಆಫ್ ರೇಸ್‌ನಿಂದ ಮುಂಬೈ ಇಂಡಿಯನ್ಸ್ ಔಟ್ ಆಗುತ್ತೆ. ಕೇವಲ ಮುಂಬೈಗೆ ಅಷ್ಟೇ ಅಲ್ಲ ಸಿಎಸ್‌ಕೆಗೂ ಕೂಡ ಈ ಪಂದ್ಯ ಗೆಲ್ಲಲೇ ಬೇಕು.  ಒಂದು ವೇಳೆ CSK ವಿರುದ್ಧ MI ಗೆಲ್ಲದಿದ್ದರೇ ಏನಾಗುತ್ತೆ?  ಅನ್ನೋದ್ದನ್ನ ನೋಡೋಣ.

ಐದು ಸಲ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ಈ ಸಲ ಪ್ಲೇ ಆಫ್ ಹತ್ತಿರ ಹೋಗುವುದ್ದಕ್ಕೂ ಹೆಣಗಾಡುತ್ತಿದೆ. ಈ ಸೀಸನ್‌ನಲ್ಲಿ ಪ್ಲೇ ಆಫ್ ರೇಸ್‌ನಿಂದ ಮೊದಲು ಔಟ್ ಆಗುವ ತಂಡ ಮುಂಬೈ ಅನ್ಸುತ್ತೆ.. ಇವತ್ತು ಮುಂಬೈಗೆ ಲಾಸ್ಟ್ ಚಾನ್ಸ್ ಇದೆ. ಒಂದು ವೇಳೆ ಇವತ್ತು ಸೋತ್ರೆ, ಅಧಿಕೃತವಾಗಿಯೇ ಮುಂಬೈ ಪ್ಲೇ ಆಫ್‌ನಿಂದ ಹೊರಹೊಗುತ್ತೆ..

ಮುಂಬೈ ಇಂಡಿಯನ್ಸ್ ಒಟ್ಟು ಇಲ್ಲಿ ತನಕ 8 ಪಂದ್ಯ ಆಡಿದೆ. ಗೆದಿದ್ದು 2 ಮ್ಯಾಚ್ ಮಾತ್ರ, ಉಳಿದ 6 ಮ್ಯಾಚ್ ಸೋತಿದೆ. 4 ಅಂಕ ಪಡೆದು ಮೈನೇಸ್ ರನ್‌ ರೇಟ್‌ನಲ್ಲಿ 9ನೇ ಸ್ಥಾನದಲ್ಲಿರೋ ಮುಂಬೈ ಮುಂದಿನ ಎಲ್ಲಾ ಪಂದ್ಯ ಕೂಡ ಒಳ್ಳೆಯ ರನ್‌ ರೇಟ್‌ನಲ್ಲಿ ಗೆದ್ರೆ, ಪ್ಲೇ ಆಫ್‌ಗೆ ಹೋಗುವುದ್ದಕ್ಕೆ ಚಾನ್ಸ್ ಇದೆ. ಆದ್ರೆ ಅದು ದೂರದ ಮಾತು. ಯಾಕೆ ಅಂತನೂ ಹೇಳ್ತಿನಿ.. ಹಾಗೇ ಇವತ್ತಿನ ಪಂದ್ಯ ಯಾಕೆ ಮುಂಬೈ ಮುಖ್ಯ ಅಂತಲೂ ಹೇಳ್ತಿನಿ ಬನ್ನಿ ನೋಡೋಣ.

ಇದನ್ನೂ ಓದಿ : RRನಲ್ಲಿ ಮುಳುಗಿದ ‘ಸೂರ್ಯ’ – ಡೆಲ್ಲಿಯಲ್ಲಿ ಕನ್ನಡಿಗ K.L ದರ್ಬಾರ್

ಆಡಿದ 8 ಪಂದ್ಯಗಳಲ್ಲಿ ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈಗೆ, ಇನ್ನುಳಿದ ಎಲ್ಲಾ 6 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಒಂದೇ ಒಂದು ಸೋಲು ಕೂಡ ಇವರ ಪ್ಲೇಆಫ್ ಹಾದಿಯನ್ನು ಕಠಿಣವಾಗಿಸಬಹುದು.  ಸದ್ಯ ಮುಂಬೈ ತಂಡದ ನೆಟ್ ರನ್ ರೇಟ್ -0.784 ರಷ್ಟಿದೆ. ಕೇವಲ ಗೆಲುವು ಮಾತ್ರವಲ್ಲ, ದೊಡ್ಡ ಅಂತರದ ಗೆಲುವು ಬೇಕು.  ನೇರವಾಗಿ ಪ್ಲೇಆಫ್​ಗೇರಲು ಮುಂಬೈ ಇಂಡಿಯನ್ಸ್​ ಇನ್ನುಳಿದ 6 ಮ್ಯಾಚ್​ಗಳಲ್ಲೂ ಜಯ ಸಾಧಿಸಲಬೇಕು. ಹೀಗೆ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು.  ಮುಂಬೈ ಇಂಡಿಯನ್ಸ್ ತಂಡವು ಸಿಎಸ್​ಕೆ ವಿರುದ್ಧ ಸೋತರೆ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಉಳಿದ ಐದು ಮ್ಯಾಚ್​ಗಳನ್ನು ಗೆದ್ದರೂ 14 ಅಂಕಗಳನ್ನು ಮಾತ್ರ ಪಡೆಯಲಿದೆ. ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್​ ರೇಟ್ ಕೂಡ ಮತ್ತಷ್ಟು ಇಳಿಕೆಯಾಗಲಿದೆ. ಇದರಿಂದ 14 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಕಷ್ಟಸಾಧ್ಯ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 13 ಅಂಕಗಳನ್ನು ಹೊಂದಿದ್ದರೆ, ಆರ್​ಸಿಬಿ, ಆರ್​ಆರ್​, ಎಸ್​ಆರ್​ಹೆಚ್ 12 ಅಂಕಗಳನ್ನು ಹೊಂದಿದೆ. ಈ ತಂಡಗಳು ಮುಂದಿನ ಪಂದ್ಯದಲ್ಲಿ 2 ಅಥವಾ ಒಂದು ಮ್ಯಾಚ್ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಇದೇ ಸೀಸನ್‌ನ ಹಿಂದಿನ ಮುಖಾಮುಖಿಯಲ್ಲಿ CSK ತಂಡವು ಮುಂಬೈ ತಂಡವನ್ನು 103 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಅದು ಮುಂಬೈ ಪಾಲಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿತ್ತು. ಇಂದಿನ ಗೆಲುವು ಆ ಕಹಿ ನೆನಪನ್ನು ಅಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಲು ಅಗತ್ಯವಾಗಿದೆ. ಐಪಿಎಲ್‌ನ ಎರಡು ಬಲಿಷ್ಠ ತಂಡಗಳ ನಡುವಿನ ಈ ಪೈಪೋಟಿಯಲ್ಲಿ ಸೋಲುವುದರಿಂದ ತಂಡದ ನೈತಿಕ ಸ್ಥೈರ್ಯ ಕುಸಿಯಬಹುದು. ಪ್ಲೇಆಫ್ ರೇಸ್‌ನಲ್ಲಿ ಮುನ್ನಡೆಯಲು ಮುಂಬೈಗೆ ಈ ‘ಹೈ-ವೋಲ್ಟೇಜ್’ ಪಂದ್ಯದ ಗೆಲುವು ಸಂಜೀವಿನಿಯಾಗಲಿದೆ.

Kishor KV