ಬ್ಯಾಂಕಾಕ್‌ನಿಂದ ಬಂದವನ ಲಗೇಜ್‌ನಲ್ಲಿತ್ತು 20 ಜೀವಂತ ಕಾಳಿಂಗ ಸರ್ಪ, ಅಪರೂಪದ ವನ್ಯಜೀವಿಗಳು!

ಬ್ಯಾಂಕಾಕ್‌ನಿಂದ ಬಂದವನ ಲಗೇಜ್‌ನಲ್ಲಿತ್ತು 20 ಜೀವಂತ ಕಾಳಿಂಗ ಸರ್ಪ, ಅಪರೂಪದ ವನ್ಯಜೀವಿಗಳು!

ಬೆಂಗಳೂರು: ಕೆಲ ಅಂತರಾಷ್ಟ್ರೀಯ ಪ್ರಯಾಣಿಕರು ಅಪರೂಪದ ಕೆಲ ವನ್ಯ ಜೀವಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಇದೀಗ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮತ್ತೊಂದು ಮಾರಣಾಂತಿಕ ಕಾಯಿಲೆ ಪತ್ತೆ – ಐವರನ್ನು ಬಲಿ ಪಡೆದ ಸ್ಕ್ರಬ್ ಟೈಫಸ್!

ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ಲಗೇಜ್‌  ಅನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ  ಮಾಡಿದ್ದಾರೆ. ಈ ವೇಳೆ ಆತನ ಸೂಟ್‌ಕೇಸ್‌ನಲ್ಲಿ 20 ಕಾಳಿಂಗ ಸರ್ಪಗಳು,  55 ಬಾಲ್‌ ಹೆಬ್ಬಾವುಗಳು ಪತ್ತೆಯಾಗಿವೆ. 6 ಕಪುಚಿನ್‌ ಮಂಗಗಳು ಸತ್ತಿರುವುದು ಕಂಡು ಬಂದಿದೆ. ಒಟ್ಟು 78 ಪ್ರಾಣಿಗಳನ್ನು ಪ್ರಯಾಣಿಕ ಅಕ್ರಮವಾಗಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸಾಗಿಸುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಅಕ್ರಮವಾಗಿ ಪ್ರಾಣಿಗಳನ್ನು ಸಾಗಣೆ ಮಾಡುತ್ತಿದ್ದ ಆರೋಪದಡಿ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ರಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana