ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ತಾಯಿ – 57 ವರ್ಷಗಳ ಸಂಸಾರ.. ಮನೆಗೆ ಮುದ್ದು ಮಕ್ಕಳ ಆಗಮನ

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ತಾಯಿ – 57 ವರ್ಷಗಳ ಸಂಸಾರ.. ಮನೆಗೆ ಮುದ್ದು ಮಕ್ಕಳ ಆಗಮನ

ಆ ದಂಪತಿಯದ್ದು 57 ವರ್ಷಗಳ ಸಂಸಾರ. ಮಕ್ಕಳ ಕಿಲ ಕಿಲ ದನಿಕೇಳಬೇಕು ಅನ್ನೋ ಹಂಬಲ ಅಷ್ಟಿಷ್ಟಲ್ಲ. ಪೂಜೆ ಮಾಡಿದ್ದೆಷ್ಟೋ.. ದೇವರಲ್ಲಿ ಪ್ರಾರ್ಥಿಸಿದ್ದೆಷ್ಟೋ.. ಆದರೆ, ಸಂಸಾರದ ಸಾರ್ಥಕತೆ ಸಿಕ್ಕಿರಲಿಲ್ಲ. ಕೊನೆಗೂ ಹೇಳುತ್ತಾರಲ್ಲ.. ಫಲಿಸಿತು ಪೂಜಾಫಲ ಅನ್ನೋ ಹಾಗೆ ಕೊನೆಗೂ ಆ ದಂಪತಿ ತಮ್ಮ ಇಳಿವಯಸ್ಸಿನಲ್ಲಿ ಮಕ್ಕಳ ಭಾಗ್ಯ ಕಂಡಿದ್ದಾರೆ.

ಇದನ್ನೂ ಓದಿ:ಸೆಪ್ಟೆಂಬರ್ 4ರಂದು ಮೀನು ಮಾಂಸ ಸಿಗಲ್ಲ – ನಾನ್‌ವೆಜ್‌ ಪ್ರಿಯರೇ ಈ ಸುದ್ದಿ ನೋಡಿ..!

ಆಂಧ್ರಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮೂಲಕ ತಾಯಿಯಾಗುವ ತನ್ನ ಹಂಬಲವನ್ನು ಈಡೇರಿಸಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲೂ ಮಕ್ಕಳಾಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಅಂದಹಾಗೆ ಇವರು 2019ರಲ್ಲಿ ಐವಿಎಫ್  ಮೂಲಕ ಅವಳಿ ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ. ಮಂಗಯಮ್ಮ ಮತ್ತು ಅವರ ಪತಿ ರಾಜಾ ರಾವ್ 57 ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ. ಆದರೆ, ಈ ದಂಪತಿಗೆ ಮಕ್ಕಳಾಗಿರಲಿಲ್ಲ. ತಾಯಿಯಾಗಲು ದಶಕಗಳಿಂದ ಕಾಯುತ್ತಿದ್ದ ಅವರ ಆಸೆಗೆ ಅದೊಂದು ಘಟನೆಯಿಂದ ಜೀವ ಬಂದಿತ್ತು. ತಮ್ಮ ನೆರೆಮನೆಯ ಮಹಿಳೆಯೊಬ್ಬರು 55ನೇ ವಯಸ್ಸಿನಲ್ಲಿ ಕೃತಕ ಗರ್ಭಧಾರಣೆಯ ಮೂಲಕ ಮಗುವಿಗೆ ಜನ್ಮ ನೀಡಿದರು. ಅದನ್ನು ನೋಡಿ ಮಂಗಯಮ್ಮಗೆ ಆಸೆಯಾಯಿತು. ‘ಮಕ್ಕಳಿಲ್ಲದೆ ನಾವು ಕೊನೆಯುಸಿರೆಳೆಯುತ್ತೇವೆ ಎಂದು ನಾನು ಭಾವಿಸಿದ್ದೆ. ಆದರೆ ನಮ್ಮ ನೆರೆಹೊರೆಯ ಮಹಿಳೆಯೊಬ್ಬರು ತಮ್ಮ 55ನೇ ವಯಸ್ಸಿನಲ್ಲಿ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದರು. ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಲು ಸಾಧ್ಯವಿದೆ ಎಂದು ಅವರು ನನಗೆ ಹೇಳಿದರು. ನಾನು ಮತ್ತು ನನ್ನ ಪತಿ ಒಪ್ಪಿ ಮಕ್ಕಳು ಪಡೆದಿದ್ದೇವೆ’ ಎಂದು ಮಂಗಯಮ್ಮ ಹೇಳಿದ್ದಾರೆ. ಈ ದಂಪತಿ 2018ರಲ್ಲಿ ಗುಂಟೂರಿನಲ್ಲಿ ವೈದ್ಯರನ್ನು ಸಂಪರ್ಕಿಸಿದರು. ಮಂಗಯಮ್ಮ ದಾನಿ ಮೊಟ್ಟೆ ಮತ್ತು ಅವರ ಪತಿಯ ವೀರ್ಯವನ್ನು ಬಳಸಿಕೊಂಡು ಐವಿಎಫ್ ಪ್ರಕ್ರಿಯೆಗೆ ಒಳಗಾದರು. ಜನವರಿ 2019ರಲ್ಲಿ ಅವರು ಗರ್ಭಿಣಿಯಾದರು. ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಗರ್ಭಾವಸ್ಥೆಯಲ್ಲಿ ಅವರನ್ನು ನಿಕಟ ವೈದ್ಯಕೀಯ ಆರೈಕೆಯಲ್ಲಿರಿಸಿದ್ದರು. ವಿವಿಧ ತಜ್ಞರು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ಆಸ್ಪತ್ರೆಯಲ್ಲಿಯೇ ಇರಲು ಸಲಹೆ ನೀಡಿದರು. ಸೆಪ್ಟೆಂಬರ್ 5, 2019ರಂದು ಗುಂಟೂರಿನ ಖಾಸಗಿ ಆಸ್ಪತ್ರೆ ಅಹಲ್ಯಾದಲ್ಲಿ ಸಿ-ಸೆಕ್ಷನ್ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಗುಂಟೂರಿನ ಅಹಲ್ಯಾ ಆಸ್ಪತ್ರೆಯ ನಿರ್ದೇಶಕ ಡಾ. ಉಮಾಶಂಕರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ‘ಐವಿಎಫ್ ವಿಧಾನದ ಮೂಲಕ ಮಗುವನ್ನು ಪಡೆಯಲು ಅವರು ಕಳೆದ ವರ್ಷ ನಮ್ಮ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ದಾನಿಯಿಂದ ಪಡೆದ ಮೊಟ್ಟೆ ಮತ್ತು ಅವರ ಪತಿಯ ವೀರ್ಯವನ್ನು ಬಳಸಲಾಯಿತು. ಅವರು ಜನವರಿಯಲ್ಲಿ ಗರ್ಭಿಣಿಯಾದರು. ಅವರು ಇಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು, ಇಬ್ಬರೂ ಆರೋಗ್ಯವಾಗಿದ್ದಾರೆ. ತಾಯಿ ಐಸಿಯುನಲ್ಲಿದ್ದಾರೆ’ ಎಂದು ತಿಳಿಸಿದರು. ಹೆರಿಗೆಯ ನಂತರ ಮಂಗಯಮ್ಮ ಆರೋಗ್ಯವಾಗಿದ್ದರೂ ಶಿಶುಗಳಿಗೆ ಹಾಲುಣಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳಿದರು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಕರಣ ಸದ್ದು ಮಾಡುತ್ತಿದೆ. ಇಷ್ಟು ಇಳಿವಯಸ್ಸಿನಲ್ಲಿ ಮಕ್ಕಳಾದರೆ ಮುಂದೆ ಮಕ್ಕಳ ಭವಿಷ್ಯವೇನು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಇಂಥಾ ತಂತ್ರಜ್ಞಾನಕ್ಕೆ ವಯಸ್ಸಿನ ಮಿತಿ ಹೇರಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

Sulekha

Leave a Reply

Your email address will not be published. Required fields are marked *