ಜಗತ್ತಿನ ಅತಿ ಶ್ರೀಮಂತ ಕುಟುಂಬ ಇವರದ್ದು!  – ಮಸ್ಕ್ ಅಲ್ಲ.. ಈ ದೊರೆಯ ಐಷಾರಾಮಿತನ ಹೇಗಿದೆ ಗೊತ್ತಾ?

ಜಗತ್ತಿನ ಅತಿ ಶ್ರೀಮಂತ ಕುಟುಂಬ ಇವರದ್ದು!  – ಮಸ್ಕ್ ಅಲ್ಲ.. ಈ ದೊರೆಯ ಐಷಾರಾಮಿತನ ಹೇಗಿದೆ ಗೊತ್ತಾ?

ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಅಂತ ಎಲ್ಲರಿಗೂ ಗೊತ್ತಿದೆ. ಆದ್ರೀಗ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬದ ಬಗ್ಗೆ ಹೇಳ್ತೇನೆ.. ಇವ್ರ ಲೈಫ್ ಸ್ಟೈಲ್ ಹೇಗಿರುತ್ತೆ ಅಂತ ಕಲ್ಪಿಸಿಕೊಳ್ಳೋದು ಕಷ್ಟವಿದೆ.. 4000 ಕೋಟಿ ಮೌಲ್ಯದ ಅರಮನೆ.. 700 ಕಾರುಗಳು.. 8 ವಿಮಾನಗಳು.. ಅಷ್ಟಕ್ಕೂ ಆ ಆಗರ್ಭ ಶ್ರೀಮಂತ ಕುಟುಂಬ ಯಾವ್ದು? ಎಲ್ಲಿ ನೆಲೆಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಉಪಕಾರ ಮಾಡಲು ಹೋಗಿ ಸಾಲದ ಶೂಲಕ್ಕೆ ಸಿಲುಕಿದ ದಂಪತಿ – ಸಾಯುವ ಮುನ್ನ ವಿಡಿಯೋದಲ್ಲಿ ಸೆರೆಯಾಯ್ತು ಕರುಣಾಜನಕ ಕಥೆ

2023ರಲ್ಲಿನ ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ರಿಲೀಸ್ ಆಗಿದೆ. UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಕುಟುಂಬ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇವರ ಬಳಿ 700 ಐಷಾರಾಮಿ ಕಾರುಗಳು, 8 ಖಾಸಗಿ ಜೆಟ್​ಗಳು ಸೇರಿದಂತೆ ಒಟ್ಟು 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮನೆಯನ್ನು ಇವರು ಹೊಂದಿದ್ದಾರೆ. ಶೇಖ್ ಮೊಹಮ್ಮದ್ ಅಬುದಾಬಿಯ 17ನೇ ಆಡಳಿತಗಾರ. ಬ್ಲೂಮ್ ಬರ್ಗ್​ ಮಾಡಿರುವ ವರದಿ ಪ್ರಕಾರ, ಈ ರಾಜ ಮನೆತನದ ಒಟ್ಟು ಸಂಪತ್ತು 305 ಶತಕೋಟಿ ಡಾಲರ್​​ಗಿಂತ ಹೆಚ್ಚು ಅಂದರೆ 25 ಲಕ್ಷ ಕೋಟಿ ರೂಪಾಯಿಯಷ್ಟಿದೆ. ನಹ್ಯಾನ್ ಅವರು ಫುಟ್ಬಾಲ್ ಕ್ಲಬ್ ಮತ್ತು ಆಟೋ ಮೊಬೈಲ್ ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ.

ಈ ರಾಯಲ್ ಫ್ಯಾಮಿಲಿ 4078 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅರಮನೆ ಹೊಂದಿದೆ. ಅದರ ಮುಖ್ಯಸ್ಥರೇ ಈ ಎಂಬಿಝೆಡ್​. ಈ ದೊರೆಗೆ 18 ಸಹೋದರರು ಮತ್ತು 11 ಸಹೋದರಿಯರು ಇದ್ದಾರೆ. ಯುಎಇ ಹೊರತುಪಡಿಸಿ ಈ ಕುಟುಂಬ ಲಂಡನ್ ಮತ್ತು ಪ್ಯಾರಿಸ್​ನಲ್ಲಿ ಆಸ್ತಿ ಹೊಂದಿದೆ.  ವಿಶ್ವದ ತೈಲ ನಿಕ್ಷೇಪಗಳಲ್ಲಿ ಪ್ರತಿಶತ 6ರಷ್ಟು ಪಾಲನ್ನು ಇವರ ಕುಟುಂಬ ಪಡೆಯುತ್ತಿದೆ. ಜೊತೆಗೆ ಮ್ಯಾಂಚೆಸ್ಟರ್​ ಸಿಟಿ ಫುಟ್ಬಾಲ್ ಕ್ಲಬ್ ಇವರಿಗೆ ಸೇರಿದೆ. ಇದನ್ನು ಅಬುಧಾಬಿ ಯುನೈಟೆಡ್ ಗ್ರೂಪ್ 2008ರಲ್ಲಿ 2122 ಕೋಟಿಗೆ ಖರೀದಿ ಮಾಡಿದೆ.

Shwetha M