ಅವಳಿ ಮಕ್ಕಳಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ – ಪ್ರಾಣದ ಹಂಗು ತೊರೆದು ಮಕ್ಕಳಿಗೆ ಜನ್ಮ!
ತಾಯ್ತನದ ಖುಷಿ ಜಗತ್ತಿನಲ್ಲಿ ಎಷ್ಟೇ ಕೋಟಿ ಕೊಟ್ಟರೂ ಸಿಗಲ್ಲ. ಒಂದು ಮುದ್ದಾದ ಮಗುವಿನ ಜನ್ಮ ನೀಡುವ ತಾಯಿ ತಾನೂ ಕೂಡ ಮರುಜನ್ಮ ಪಡೆಯುತ್ತಾಳೆ. ಆದರೆ 30 ವರ್ಷ ಮೇಲ್ಪಟ್ಟ ಅದೆಷ್ಟೋ ಮಹಿಳೆಯರು ಮಕ್ಕಳಾಗುತ್ತಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಮಾತ್ರ ಅಚ್ಚರಿ ಎಂಬಂತೆ 70 ವರ್ಷದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ : ರಾತ್ರಿ ವೇಳೆ ವಾಕಿಂಗ್ ಮಾಡ್ತೀರಾ? – ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ವ್ಯಾಯಾಮ ಬೇರೆ ಇಲ್ಲ!
ವಯಸ್ಸು 40 ದಾಟಿದ್ರೇನೇ ರಿಸ್ಕಿ ಪ್ರೆಗ್ನಿನ್ಸಿ ಅಂತಾ ವೈದ್ಯರು ಹೇಳ್ತಾರೆ. ಅಂಥಾದ್ರಲ್ಲಿ 70 ವರ್ಷದ ಮಹಿಳೆ ಅದೂ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡ್ತಾರೆ ಅಂದ್ರೆ ಸಾಮಾನ್ಯದ ಮಾತಲ್ಲ. ಉಗಾಂಡಾದ ಕಂಪಾಲಾ ಆಸ್ಪತ್ರೆಯಲ್ಲಿ ಇಂಥಾದ್ದೊಂದು ಅಚ್ಚರಿ ನಡೆದಿದೆ. 70 ವರ್ಷದ ಸಫಿನಾ ನಮುಕ್ವೆಯಾ ಎಂಬ ಮಹಿಳೆ ಒಂದು ಹೆಣ್ಣು ಮಗು ಹಾಗೂ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಇದಕ್ಕೂ ಮುನ್ನ 2020 ರಲ್ಲಿ ಸಫೀನಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆ ಮಗು ಬದುಕುಳಿಯಲಿಲ್ಲ. ಮಕ್ಕಳಿಲ್ಲದ ಕಾರಣ ಜನ ಗೇಲಿ ಮಾಡುತ್ತಿದ್ದಾರೆ ಎಂದು ಸಫಿನಾ ಮತ್ತೆ ಎರಡನೇ ಮಗುವನ್ನು ಹೊಂದಲು ನಿರ್ಧರಿಸಿದ್ದರು. ಅದ್ರಂತೆ ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿರುವ ಸಫೀನಾ ಗರ್ಭಾವಸ್ಥೆಯ ದಿನಗಳು ತುಂಬಾನೇ ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.