‘7 ಸ್ಟಾರ್ ಸುಲ್ತಾನ’ನ ಕುರುಬಾನಿ ಬೇಡ – ಅಭಿಮಾನಿಗಳ ಒತ್ತಾಯಕ್ಕೆ ಕೊನೆಗೂ ಮಣಿದ ಮಾಲೀಕ..!
‘7 ಸ್ಟಾರ್ ಸುಲ್ತಾನ’. ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ಸಿನಿಮಾ ಟಗರು ಪಲ್ಯದ ಪ್ರಮುಖ ಆಕರ್ಷಣೆಯೇ ಈ ‘7 ಸ್ಟಾರ್ ಸುಲ್ತಾನ’. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ, ಟಗರು ಪಲ್ಯ ಚಿತ್ರದಲ್ಲಿ ನಟಿಸಿರುವ ಈ ಟಗರು ಬಗ್ಗೆ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಯಾಕೆಂದರೆ, ಈ ‘7 ಸ್ಟಾರ್ ಸುಲ್ತಾನ’ ನನ್ನು ಈ ಬಾರಿ ಬಕ್ರೀದ್‌ಗೆ ಕುರುಬಾನಿ ನೀಡಲು ಮಾಲೀಕ ನಿರ್ಧರಿಸಿದ್ದರು. ಆದರೆ, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು.
ಇದನ್ನೂ ಓದಿ: ‘ಮಗಳು ಚೆನ್ನಾಗಿ ಹಾಡಿದ್ದಾಳೆ ತುಂಬಾ ಹೆಮ್ಮೆ ಆಗ್ತಿದೆ ಸಾನ್ವಿ’ – ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್
ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದ್ದು, 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನಿಸಿದ್ದಾರೆ. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ್ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂಪಾಯಿಗೆ ಖರೀದಿಸಿದ್ದರು. ಆದ್ರೆ ಕುರುಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ ಇಲ್ಲಿಯವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ ಗಳನ್ನ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು. ಆದ್ರೆ ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರ್ಬಾನಿ ಮಾಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ.