ಪ್ರವಾಸಕ್ಕೆ ಹೋಗಿದ್ದ ಭಾರತೀಯರಿಗೆ ಕಾದಿತ್ತು ಶಾಕ್ – ಯುವಕರನ್ನು ಸೆರೆ ಹಿಡಿದು ಉಕ್ರೇನ್ ಯುದ್ಧಕ್ಕೆ ಕಳುಹಿಸಿದ ರಷ್ಯಾ.!

ಪ್ರವಾಸಕ್ಕೆ ಹೋಗಿದ್ದ ಭಾರತೀಯರಿಗೆ ಕಾದಿತ್ತು ಶಾಕ್ – ಯುವಕರನ್ನು ಸೆರೆ ಹಿಡಿದು ಉಕ್ರೇನ್ ಯುದ್ಧಕ್ಕೆ ಕಳುಹಿಸಿದ ರಷ್ಯಾ.!

ಉಕ್ರೇನ್ ವಿರುದ್ಧ ಕಳೆದ 2 ವರ್ಷಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾ ಇದೀಗ ಭಾರತೀಯ ಪ್ರವಾಸಿಗರನ್ನೂ ಸೇನೆಗೆ ಬಳಸಿಕೊಳ್ಳುತ್ತಿದೆ. ಪಂಜಾಬ್ ಮತ್ತು ಹರಿಯಾಣದ ಯುವಕರ ಗುಂಪೊಂದನ್ನು ರಷ್ಯಾ ತನ್ನ ಸೇನೆಗೆ ಬಳಸಿಕೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕರ್ನಾಟಕದ ಎಲ್ಲ ಶಾಲೆಗಳ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು – ಹೈಕೋರ್ಟ್​

ಪಂಜಾಬ್ ಮತ್ತು ಹರಿಯಾಣದ ಯುವಕರ ಹೊಸ ವರ್ಷ ಆಚರಿಸಲು ರಷ್ಯಾಗೆ ತೆರಳಿತ್ತು. 90 ದಿನಗಳ ಪ್ರಯಾಣದ ವೀಸಾವನ್ನು ಹೊಂದಿದ್ದರು. ಆದ್ರೆ ಯುವಕರು ವೀಸಾ ಇಲ್ಲದೆ ಬೆಲಾರಸ್ ಪ್ರವಾಸ ಮಾಡಿದ್ದಾರೆ. ಇದ್ರಿಂದ ಪೊಲೀಸರು ಯುವಕರನ್ನು ಹಿಡಿದು ರಷ್ಯಾದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಳಿಕ ರಷ್ಯಾದ ಅಧಿಕಾರಿಗಳು ಯುವಕರನ್ನು ಮಿಲಿಟರಿ ಸೇವೆಗೆ ಬಳಸಿಕೊಂಡಿದ್ದಾರೆ ಎಂಬ  ಆರೋಪ ಕೇಳಿಬಂದಿದೆ.

ಸೇನೆಗೆ ಸೇರಿಸಿಕೊಂಡು ಉಕ್ರೇನ್ ವಿರುದ್ಧ ಹೋರಾಡಲು ಒತ್ತಾಯಿಸಿದ್ದಾರೆ. ಇದ್ರಿಂದ ನೊಂದ ಯುವಕರು ವಿಡಿಯೋ ಮಾಡಿ ಸಹಾಯಕ್ಕಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Shwetha M