ಲಂಕೆಗೆ ಬೆಂಕಿ ಇಟ್ಟ DSP ಮೊಹಮ್ಮದ್ ಸಿರಾಜ್ – ಲಾಸ್ಟ್ ಓವರ್.. 4 ಸಿಕ್ಸರ್.. ಸಲ್ಯೂಟ್!
ಪ್ರಾಕ್ಟೀಸ್ ಆದ್ರೂ ಕ್ಲೈಮ್ಯಾಕ್ಸ್ ಸೂಪರ್

ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಭಾರತ ಗೆದ್ದಿದೆ. ಅದ್ರಲ್ಲೂ ಕೊನೇ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಆಟ ಅಂತೂ ಎಕ್ಸ್ಟ್ರಾರ್ಡಿನರಿ. ಮೂರು ದಿನಗಳ ಅಭ್ಯಾಸ ಪಂದ್ಯ ಈ ರೀತಿಯಾಗಿ ಕ್ಲೈಮ್ಯಾಕ್ಸ್ ಇರುತ್ತೆ ಅಂತಾ ಯಾರೂ ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ಕೊನೆಗೂ ವಾರ್ಮ್ ಅಪ್ ಪಂಧ್ಯವನ್ನ ಭಾರತ 6 ವಿಕೆಟ್ಗಳಿಂದ ಗೆದ್ದಿತು. ಅದ್ರಲ್ಲೂ ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್ ಅಂತೂ ಅದ್ಭುತವನ್ನೇ ಸೃಷ್ಟಿಸಿದ್ರು. ಅವ್ರ ಬ್ಯಾಟಿಂದ ಬಂದ ಹ್ಯಾಟ್ರಿಕ್ ಸಿಕ್ಸರ್ಸ್ ಬರೀ ಗೆಲುವಿನ ಗಿಫ್ಟ್ ಕೊಡಲಿಲ್ಲ. ಟೆಸ್ಟ್ಗಷ್ಟೇ ಸೀಮಿತ ಮಾಡಿರೋ ಗೌತಮ್ ಗಂಭೀರ್ ಮತ್ತು ಸೆಲೆಕ್ಟರ್ಗಳಿಗೂ ಕಪಾಳಮೋಕ್ಷದಂತಿತ್ತು.
ಇದನ್ನೂ ಓದಿ : ಲಂಕೆಯಲ್ಲಿ KL & ಪಡಿಕ್ಕಲ್ ಪರಾಕ್ರಮ – ಟೀಂ ಇಂಡಿಯಾಗೆ ಕೈಕೊಡುತ್ತಾ ಬ್ಯಾಟಿಂಗ್?
ಕ್ಲೈಮ್ಯಾಕ್ಸ್ ನಲ್ಲಿ ರೋಚಕವಾಗಿ ಗೆದ್ದ ಭಾರತ!
ಮೂರು ದಿನಗಳ ಪ್ರಾಕ್ಟೀಸ್ ಮ್ಯಾಚ್ನಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ಮೊದಲ ಇನ್ನಿಂಗ್ಸ್ ಅನ್ನು 8 ವಿಕೆಟ್ಗೆ 363 ರನ್ಗಳಿಗೆ ಡಿಕ್ಲೇರ್ ಮಾಡಿತು. ನಂತರ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 357 ರನ್ಗಳಿಗೆ ಡಿಕ್ಲೇರ್ ಮಾಡಿತು. ಹೀಗಾಗಿ ಶ್ರೀಲಂಕಾಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆ ಸಿಕ್ಕಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗೆ 200 ರನ್ ಗಳಿಸಿ ಭಾರತಕ್ಕೆ 207 ರನ್ಗಳ ಗುರಿ ನೀಡಿತು.ಈ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್ಗಳಿಗೆ 214 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಅದ್ರಲ್ಲೂ ಹೈಲೆಟ್ ಆಗಿದ್ದು ಸಿರಾಜ್.
ಸಿರಾಜ್ ಹ್ಯಾಟ್ರಿಕ್ ಸಿಕ್ಸ್ ನಿಂದ ಪಂದ್ಯ ಗೆದ್ದ ಭಾರತ!
ಕೊನೆ 3 ಓವರ್ ಬಾಕಿ ಇದ್ದಾಗ ಭಾರತಕ್ಕೆ ಗೆಲ್ಲಲು 28 ರನ್ ಬೇಕಿತ್ತು. ಮೊಹಮದ್ ಸಿರಾಜ್ 15 ಎಸೆತದಲ್ಲಿ 4 ಸಿಕ್ಸರ್, 1 ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಸಿರಾಜ್ 15 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು 1 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಹೊಡೆದರು. ಕೊನೆಯ ಓವರ್ನಲ್ಲಿ ಸಿರಾಜ್ ಸತತ ಮೂರು ಸಿಕ್ಸರ್ಗಳನ್ನು ಮತ್ತು ಒಂದು ಬೌಂಡರಿಯನ್ನು ಹೊಡೆದರು. ಆ ಓವರ್ನಲ್ಲಿ 23 ರನ್ ಗಳಿಸಿ ಭಾರತಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು. ಸಿರಾಜ್ ಅವರ ಬಿರುಗಾಳಿ ಇನ್ನಿಂಗ್ಸ್ ನಿಂದ ಶಾಕ್ ಆದ ಶ್ರೀಲಂಕಾ ಆಟಗಾರರು ಅವರ ಬ್ಯಾಟ್ ಅನ್ನು ಚೆಕ್ ಮಾಡಲು ಮುಂದಾಗಿದ್ದು ವಿಶೇಷವಾಗಿತ್ತು. ಬಟ್ ಬ್ಯಾಟಿಂಗ್ನಲ್ಲಿ ಸಿರಾಜ್ ಶೈನ್ ಆದ್ರೂ ಬೌಲಿಂಗ್ ಅಷ್ಟಕ್ಕಷ್ಟೇ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ 13 ಓವರ್ಗಳಲ್ಲಿ 44 ರನ್ ನೀಡಿದ್ರೂ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ 8 ಓವರ್ಗಳಲ್ಲಿ 25 ರನ್ ಕೊಟ್ಟು 1 ವಿಕೆಟ್ ಪಡೆದರು. ಒಟ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಗಸ್ಟ್ 15ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿವೆ. ಎರಡನೇ ಪಂದ್ಯ ಆಗಸ್ಟ್ 23ರಂದು ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಈ ಪಂದ್ಯಗಳು ಮುಖ್ಯವಾಗಿವೆ.

ನೋಡಿರಿ

