ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ.. – ಸ್ನೇಹಿತನಿಗೆ ಬೆದರಿಕೆ ಹಾಕಿ ಬರೋಬ್ಬರಿ 65 ಲಕ್ಷ ರೂ. ಪೀಕಿದ ಭೂಪ
ಇತ್ತೀಚಿನ ದಿನಗಳಲ್ಲಿ ಸ್ನೇಹಕ್ಕೆ ಬೆಲೆಯೇ ಇಲ್ಲ ಎಂಬಂತಾಗಿದೆ. ಸ್ನೇಹದ ಹೆಸರಿನಲ್ಲಿ ಮೋಸದಾಟವೇ ಜಾಸ್ತಿಯಾಗುತ್ತಿದೆ. ಜೀವಕ್ಕೆ ಜೀವ ಕೊಡೋ ಸ್ನೇಹಿತರ ಬಾಳಲ್ಲಿ ಚೆಲ್ಲಾಟ ಆಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಬೆತ್ತಲೆ ಫೋಟೋ ಲೀಕ್ ಮಾಡುತ್ತೇನೆ ಅಂತಾ ಸ್ನೇಹಿತನೊಬ್ಬ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾನೆ.
ಇದನ್ನೂ ಓದಿ: ಇಂಧನ ಖಾಲಿಯಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಂತ ಪೊಲೀಸ್ ವಾಹನ – ಕೋರ್ಟ್ವರೆಗೆ ಕಾರನ್ನು ತಳ್ಳಿದ ಆರೋಪಿಗಳು
ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಂಪನಿಯಲ್ಲಿ ಶಿವಮೊಗ್ಗ ಮೂಲದ ಯುವಕ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ 18 ವರ್ಷಗಳಿಂದ ಟೆಕ್ಕಿಗೆ ಸ್ನೇಹಿತನಾಗಿದ್ದ ಆರೋಪಿ ಅಕ್ಷಯ್‌ಕುಮಾರ್, ಒಂದು ವರ್ಷದ ಹಿಂದೆ ಟೆಕ್ಕಿ ಬಳಿ ಬಂದು, ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋ ವ್ಯಕ್ತಿಯೊಬ್ಬರಿಗೆ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇರೋಕೆ ಹನ್ನೆರಡು ಲಕ್ಷ ಹಣ ಕೇಳ್ತಿದ್ದಾನೆ ಅಂತಾ ಹೇಳಿದ್ದಾನೆ.
ಸ್ನೇಹಿತನ ಮಾತಯನ್ನು ಕೇಳಿ ಭಯಗೊಂಡ ಸಂತ್ರಸ್ತ ಟೆಕ್ಕಿ ಆತನಿಗೆ ಬರೋಬ್ಬರಿ 12 ಲಕ್ಷ ಹಣ ಕೊಟ್ಟಿದ್ದಾನೆ. ಇದಾದ ನಂತರವೂ ಕಳೆದ ಒಂದು ವರ್ಷದಿಂದ ಇದೇ ಫೋಟೋ, ವಿಡಿಯೋ ವಿಚಾರ ಸಂಬಂಧ ಪದೇ ಪದೇ ಹಣ ಪಡೆದುಕೊಂಡು, ಒಟ್ಟು 65 ಲಕ್ಷ ರೂ. ಪೀಕಿದ್ದಾನೆ. ಕೊನೆಗೆ ಎಂಜಿನಿಯರಿಂಗ್ ಸ್ನೇಹಿತ ಅಕ್ಷಯ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ವೇಳೆ ಸ್ನೇಹಿತನಾದ ಅಕ್ಷಯ್ ಕುಮಾರ್ ಮತ್ತು ಭರತ್ ಅನ್ನುವವರೇ ಪ್ಲ್ಯಾನ್ ಮಾಡಿ ಮಾಡಿ ಈ ರೀತಿ ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಇಬ್ಬರನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.