ವೀಸಾ ಹಿಂದಿಕ್ಕಿದ ಯುಪಿಐ! – 65 ಕೋಟಿ ರೂ. ವಹಿವಾಟು.. ವಿಶ್ವದಲ್ಲೇ ನಂಬರ್‌ 1 ಡಿಜಿಟಲ್ ಪೇಮೆಂಟ್‌

ವೀಸಾ ಹಿಂದಿಕ್ಕಿದ ಯುಪಿಐ! – 65 ಕೋಟಿ ರೂ. ವಹಿವಾಟು.. ವಿಶ್ವದಲ್ಲೇ ನಂಬರ್‌ 1 ಡಿಜಿಟಲ್ ಪೇಮೆಂಟ್‌

ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ, ಹಣದ ವಹಿವಾಟಿನ ವಿಧಾನವು ಬಹಳಷ್ಟು ಬದಲಾಗಿದೆ. ಈಗ ಜನರು ಪ್ರತಿ ಸಣ್ಣ ಮತ್ತು ದೊಡ್ಡ ಪಾವತಿಗೆ ಡಿಜಿಟಲ್ ಪೇಮೆಂಟ್​ನತ್ತ ಮುಖ ಮಾಡಿದ್ದಾರೆ. ಬಹುತೇಕರು ಯುಪಿಐ ಪೇಮೆಂಟ್‌ ಮಾಡ್ತಿದ್ದಾರೆ. ಅದು ದಿನನಿತ್ಯದ ವಸ್ತುಗಳಾಗಿರಲಿ ಅಥವಾ ಯಾರಿಗಾದರೂ ಪಾವತಿ ಮಾಡುವುದಾಗಲಿ, UPI ಹೆಚ್ಚು ಬಳಕೆಯಲ್ಲಿದೆ. ಇದೀಗ 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಜನರಿಗೆ ಬಿಗ್‌ ಶಾಕ್‌ – ಆಗಸ್ಟ್‌ 1 ರಿಂದ ಆಟೋ ದರ ಏರಿಕೆ!

ಈ ಬಗ್ಗೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ ಎಂದು ತಿಳಿಸಿದ್ದಾರೆ.

2025ರ ಮೇ-ಜೂನ್‌ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು. ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

Shwetha M