ಕೇರಳ ಬಿಟ್ಟರೆ ಕರ್ನಾಟಕದಲ್ಲೇ ಅತ್ಯಧಿಕ ಕೊವಿಡ್‌ ಕೇಸ್! – ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ!

ಕೇರಳ ಬಿಟ್ಟರೆ ಕರ್ನಾಟಕದಲ್ಲೇ ಅತ್ಯಧಿಕ ಕೊವಿಡ್‌ ಕೇಸ್! – ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ!

ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೊವಿಡ್ ಮಹಾಮಾರಿಗೆ ಅಂತ್ಯವೇ  ಇಲ್ಲ ಎಂಬಂತಾಗಿದೆ. 2020ರಿಂದ ಪ್ರಪಂಚದಾದ್ಯಂತ ಕೋಲಾಹಲ ಸೃಷ್ಟಿಸಿರೋ ವೈರಸ್ ಈಗ ಮತ್ತೆ ಭಯ ಹುಟ್ಟಿಸುತ್ತಿದೆ. ಕೊರೊನಾದ ಉಪತಳಿಯಾದ ಜೆಎನ್‌.1 ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಭೀತಿ ಸೃಷ್ಟಿಸಿದೆ. ಇದೀಗ ಭಾರತಕ್ಕೂ ಕೂಡ ಮತ್ತೆ ವಕ್ಕರಿಸಿದೆ. ಇದರ ಜೊತೆಗೆ ಹೊಸ ಕೋವಿಡ್ ರೂಪಾಂತರಿ ತಳಿ JN.1 ಪ್ರಕರಣ ಕೂಡ ದಾಖಲಾಗುತ್ತಿದ್ದು, ದೇಶದಲ್ಲಿ 63 ಹೊಸ ತಳಿ JN.1 ಪತ್ತೆಯಾಗಿದೆ. ಇತ್ತ ಸಕ್ರೀಯ ಕೋವಿಡ್ ಸಂಖ್ಯೆ 4,054ಕ್ಕೆ ಏರಿಕೆಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿದ್ದು ಇರಾನ್! – ಸ್ಫೋಟಕ ಹೇಳಿಕೆ ನೀಡಿದ ಅಮೆರಿಕ!

ಹೌದು, ದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೊವಿಡ್‌ ರೂಪಾಂತರಿ ತಳಿಯ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಇದೀಗ ದೇಶದಲ್ಲಿ ಒಟ್ಟು 63 JN.1 ಪ್ರಕರಣ ಪತ್ತೆಯಾಗಿದೆ. ಈ ಪೈಕಿ 34 ಪ್ರಕರಣ ಗೋವಾದಲ್ಲಿ ಪತ್ತೆಯಾಗಿದ್ದರೆ, 9 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಇನ್ನು ಕರ್ನಾಟಕದಲ್ಲೂ ಹೊಸ ತಳಿ ಆತಂಕ ಸೃಷ್ಟಿಸಿದೆ. ಇದುವರೆಗೆ 8 ಹೊಸ ತಳಿ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಹಾಗೂ ತೆಲಂಗಾಣದಲ್ಲಿ 2 ಹೊಸ ತಳಿ JN.1 ಪ್ರಕರಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ  JN.1 ಪ್ರಕರಣ ಪೈಕಿ ಒಂಭತ್ತೂ ಪ್ರಕರಣಗಳು ಭಾನುವಾರವೇ ಪತ್ತೆಯಾಗಿದೆ. ಐವರು ಥಾಣೆ ನಿವಾಸಿಗಳಾಗಿದ್ದಾರೆ. ದೇಶದ ಮೊದಲ JN.1 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಆದರೆ ಕೇರಳದಲ್ಲಿ ಇದುವರೆಗೆ 6 ಪ್ರಕರಣ ಪತ್ತೆಯಾಗಿದೆ. ಆದರೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ JN.1 ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ.

JN.1 ಪ್ರಕರಣ ಒಂದೆಡೆಯಾದರೆ, ಭಾರತದಲ್ಲಿನ ಕೋವಿಡ್ ಪ್ರಕರಣ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಡೆಸೆಂಬರ 23 ಹಾಗೂ ಡಿಸೆಂಬರ್ 24ರ ಎರಡೂ ದಿನವೂ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಭಾನುವಾರ 106 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಸೋಂಕು ಪ್ರಕರಣ 344ಕ್ಕೆ ಏರಿಕೆಯಾಗಿತ್ತು.  ಭಾನುವಾರದ ಅಂತ್ಯಕ್ಕೆ   1,441 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು ಈ ಪೈಕಿ ಶೇ.7.35 ರಷ್ಟು ಪಾಸಿಟಿವಿಟಿ ದರದಂತೆ 106 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಪೈಕಿ ಬೆಂಗಳೂರು ನಗರದಲ್ಲೇ 95 ಪ್ರಕರಣ, ಮೈಸೂರು 6, ದಕ್ಷಿಣ ಕನ್ನಡ 2, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ದೇಶದ ಕೋವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗುತ್ತಿದೆ. ಮತ್ತೆ ಕೇರಳದಿಂದ ಭಾರತಕ್ಕೆ 4ನೇ ಅಲೆ ಬೀಸುತ್ತಾ ಅನ್ನೋ ಆತಂಕ ಎದುರಾಗಿದೆ. ಆದರೆ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಸದ್ಯ ಕಾಣಿಸಿಕೊಂಡಿರುವುದು ಮೈಲ್ಡ್ ಸಿಂಪ್ಟಮ್ಸ್  ಕೋವಿಡ್ ವೈರಸ್. ಹೀಗಾಗಿ ಆಸ್ಪತ್ರೆ ದಾಖಲಾಗುವ ಪ್ರಮೇಯ ಕಡಿಮೆ. ಯಾರೂ ಆತಂಕಪಡದೆ, ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

Shwetha M