ದಾಖಲೆ ಬರೆದ ಶಾರುಖ್ಖಾನ್ ಸಿನಿಮಾ – ಭಾರತದಲ್ಲೇ 600 ಕೋಟಿ ರೂಪಾಯಿ ಗಳಿಕೆ ಕಂಡ ಜವಾನ್

ದಾಖಲೆ ಬರೆದ ಶಾರುಖ್ಖಾನ್ ಸಿನಿಮಾ – ಭಾರತದಲ್ಲೇ 600 ಕೋಟಿ ರೂಪಾಯಿ ಗಳಿಕೆ ಕಂಡ ಜವಾನ್

ಬಾಲಿವುಡ್ ಕಿಂಗ್‌ಖಾನ್ ಶಾರುಖ್‌ಖಾನ್ ತನ್ನ ಸಿನಿಮಾ ಮೂಲಕ ದಾಖಲೆ ಬರೆದಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ ಮಾಡಿದೆ. ಭಾರತದಲ್ಲೇ ಜವಾನ್ ಸಿನಿಮಾ ಅಂದಾಜು 600 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ.

ಇದನ್ನೂ ಓದಿ: ಜನರು ಬಟ್ಟೆ ಧರಿಸಲಿ ಎಂದು ಬಯಸಿದ್ದೆ, ಅದನ್ನು ತೆಗೆಯಲು ಅಲ್ಲ – ನಟಿ ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಜೋಕ್..!

ಭಾರತದಲ್ಲಿ ಜವಾನ್ ಸಿನಿಮಾ ದಾಖಲೆಯ ಮಟ್ಟದಲ್ಲಿ ಗಳಿಕೆ ಕಂಡಿದೆ. ಜವಾನ್ ಸಿನಿಮಾ ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿ ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಬಾಲಿವುಡ್ ಸಿನಿಮಾ ಎಂಬ ದಾಖಲೆ ಬರೆದಿದೆ.

ಇನ್ನು ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದರ ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ. ಜವಾನ್ 2 ಸಿನಿಮಾದಲ್ಲಿ ವಿಕ್ರಮ್ ರಾಥೋಡ್ ಪಾತ್ರದ ಮೇಲೆ ಹೆಚ್ಚು ಫೋಕಸ್ ಮಾಡಲಾಗುವುದು ಮತ್ತು ಈ ಸಿನಿಮಾ ಇನ್ನೂ ವಿಶೇಷವಾಗಿ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ ಅಟ್ಲಿ. ಜವಾನ್ ಸಿನಿಮಾ ಭಾರೀ ಗೆಲುವು ಸಾಧಿಸುತ್ತಿದ್ದಂತೆಯೇ ಬಾಲಿವುಡ್ ನಲ್ಲೂ ಅಟ್ಲಿ ಅವರಿಗೆ ಅಭಿಮಾನಿಗಳು ಜಾಸ್ತಿಯಾಗಿದ್ದಾರೆ.

Sulekha