ನಟಿ ಶಿಲ್ಪಾ ಶೆಟ್ಟಿಗೆ ಶಾಕ್ ಮೇಲೆ ಶಾಕ್! – ಪೊಲೀಸರಿಂದ ನೋಟಿಸ್, ವಿಚಾರಣೆಗೆ ಹಾಜರಾಗಲು ಸೂಚನೆ!

ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಬ್ಯಾಡ್ ಟೈಮ್ ಶುರುವಾಗಿದೆ. ಒಂದಾದ ಮೇಲೊಂದು ವಿವಾದಗಳು ಈ ದಂಪತಿಯನ್ನ ಹುಡುಕಿಕೊಂಡು ಬರ್ತಿದೆ. ಬೆಟ್ಟಿಂಗ್ ಪ್ರಕರಣ, ಅದಾದ ಬಳಿಕ ವಂಚನೆ ಪ್ರಕರಣ, ಅದರ ಬಳಿಕ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಈಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾ ಮೇಲಿದೆ. ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಹೆಸರೂ ಸಹ ಕೇಳಿ ಬಂದಿದೆ. ಕೇಸ್ ನ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಈಗ ಶಿಲ್ಪಾ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ, ವಿಚಾರಣೆಗೆ ಹಾಜರಾಗುವಂತೆ ಸೂಚಿಸದ್ದಾರೆ.
ಇದನ್ನೂ ಓದಿ: ಮ್ಯಾಕ್ಸ್ ನಿರ್ದೇಶಕರಿಗೆ ಕಿಚ್ಚನ ಗಿಫ್ಟ್! – ದುಬಾರಿ ಉಡುಗೊರೆ ಕೊಟ್ಟ ಸುದೀಪ್!
60 ಕೋಟಿ ವಂಚನೆ ಪ್ರಕರಣದಲ್ಲಿ ರಾಜ್ ಕುಂದ್ರಾ ಆರೋಪಿಯಾಗಿದ್ದಾರೆ. ಈ ಪ್ರಕರಣದ ಸಂಬಂಧ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ರಾಜ್ ಕುಂದ್ರಾ ಅವರನ್ನು ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ರಾಜ್ ಕುಂದ್ರಾ ನಟಿಯರಾದ ನೇಹಾ ದೂಪಿಯಾ, ಬಿಪಾಷಾ ಬಸು ಹೆಸರನ್ನು ಹೇಳಿದ್ದಾರೆ. ಅವರಿಗೂ ಸಹ ರಾಜ್ ಕುಂದ್ರಾ ಖಾತೆಯಿಂದ ಹಣ ಹೋಗಿದೆ ಎನ್ನಲಾಗಿದೆ. ಇದ್ರ ಜೊತೆಗೆ 60 ಕೋಟಿ ಹಣದಲ್ಲಿ 15 ಕೋಟಿ ಹಣವನ್ನು ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿಯ ಮಾಲೀಕತ್ವದ ಕಂಪೆನಿಗೆ ವರ್ಗಾವಣೆ ಮಾಡಿರುವುದು ಪತ್ತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಆ ಹಣವನ್ನು ಕಂಪೆನಿಯ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ. ಈ ಬೆನ್ನಲ್ಲೇ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಶಿಲ್ಪಾ ಶೆಟ್ಟಿ ಕಂಪೆನಿಯ ಖರ್ಚು ವೆಚ್ಚ, ಜಾಹೀರಾತು ಖರ್ಚು ಇತ್ಯಾದಿಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ.
ಅಂದ್ಹಾಗೆ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಪೊಲೀಸರ ನೊಟೀಸ್ಗಳ ಹೊಸ ವಿಷಯವಲ್ಲ. ರಾಜಸ್ಥಾನ ರಾಯಲ್ಸ್ನ ಸಹ ಮಾಲೀಕತ್ವ ಹೊಂದಿದಾಗಿನಿಂದಲೂ ಈ ದಂಪತಿ ಬ್ಯುಸಿನೆಸ್ ಕಾರಣಕ್ಕೆ ವಿವಾದಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಇದ್ದಾಗ ಬೆಟ್ಟಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಕೇಳಿ ಬಂತು. ಅದಾದ ಬಳಿಕ ಚಿನ್ನದ ಮಳಿಗೆ ಹೆಸರಲ್ಲಿ ವಂಚನೆ ಪ್ರಕರಣ, ಸಾಲ ಪಡೆದು ವಂಚನೆ ಪ್ರಕರಣ ಅದಾದ ಬಳಿಕ ರಾಜ್ ಕುಂದ್ರಾ, ನೀಲಿ ಚಿತ್ರಗಳನ್ನು ನಿರ್ಮಿಸಿದ ಪ್ರಕರಣದಲ್ಲಿ ಜೈಲು ಸಹ ಸೇರಿದರು. ಈಗ ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುತ್ತಿರುವಾಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ಈ ದಂಪತಿಯ ಬೆನ್ನೇರಿದೆ.

ನೋಡಿರಿ

