ಕೇವಲ 11 ನಿಮಿಷದಲ್ಲಿ ಈಜಿಕೊಂಡು ಯಮುನಾ ನದಿ ದಾಟಿದ 6 ವರ್ಷದ ಬಾಲಕಿ!
ಲಕ್ನೋ: ಸಾಧನೆಗೆ ವಯಸ್ಸಿನ ಹಂಗಿಲ್ಲ. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇಲ್ಲೊಬ್ಬಳು ಬಾಲಕಿ ಸಾಕ್ಷಿಯಾಗಿದ್ದಾಳೆ. 6 ವರ್ಷದ ಬಾಲಕಿಯೊಬ್ಬಳು ಕೇವಲ 11 ನಿಮಿಷಗಳಲ್ಲಿ ಯಮುನಾ ನದಿಯನ್ನು ದಾಟುವ ಮೂಲಕ ದಾಖಲೆ ಬರೆದಿದ್ದಾಳೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಪ್ರೀತಂ ನಗರದ ನಿವಾಸಿ ವೃತಿಕಾ ಶಾಂಡಿಲ್ಯ ಕೇವಲ 11 ನಿಮಿಷಗಳಲ್ಲಿ ಯಮುನಾ ನದಿ ಈಜಿ ದಡ ಸೇರಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾಳೆ. ಈಕೆಯ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಗತವೈಭವ ಸಾರುವ ಅರಮನೆ ಈಗ ಐಷಾರಾಮಿ ಹೋಟೆಲ್ – ಒಂದು ದಿನಕ್ಕೆ 10 ₹ಲಕ್ಷ.. ಏನೆಲ್ಲಾ ವಿಶೇಷತೆ?
ವೃತಿಕಾ ಸೈಂಟ್ ಅಂಥೋನಿ ಬಾಲಕಿಯರ ಕಾನ್ವೆಂಟ್ ಶಾಲೆಯಲ್ಲಿ 2ನೇ ತರಗತಿ ಓದಿತ್ತಿದ್ದಾಳೆ. ಆಕೆ ಬಾಲ್ಯದಿಂದಲೂ ಈಜಿನಲ್ಲಿ ಆಸಕ್ತಿ ಹೊಂದಿದ್ದಳು. ಹೀಗಾಗಿ ಪೊಷಕರು ಆಕೆಯನ್ನು ಈಜು ತರಗತಿಗೆ ಸೇರಿಸಿದ್ದರು. ಆರಂಭದಿಂದಲೂ ಆಕೆ ಕಠಿಣ ಸ್ಥಳಗಳಲ್ಲಿಯೂ ಸಲೀಸಾಗಿ ಈಜುತ್ತಿದ್ದಳು. ಮೊದಲ ಬಾರಿಗೆ ಈ ಬಾಲಕಿ ಮೀರಾಪುರ್ ಸಿಂಧು ಸಾಗರ್ ಘಾಟ್ ನಿಂದ ಬೆಳಗ್ಗೆ 6-10ಕ್ಕೆ ಈಜಲು ಪ್ರಾರಂಭಿಸಿದ್ದು, 6 ಗಂಟೆ 21ನಿಮಿಷಕ್ಕೆ ವಿದ್ಯಾಪೀಠ ಮಹೇವಾಘಾಟ್ ನಲ್ಲಿ ನದಿಯ ಇನ್ನೊಂದು ದಡವನ್ನು ತಲುಪಿದ್ದಳು. ಇದೀಗ ಕೇವಲ 11 ನಿಮಿಷದಲ್ಲಿ ಯಮುನಾ ನದಿ ಈಜಿ ದಾಟುವ ಮೂಲಕ ದಾಖಲೆ ಬರೆದಿದ್ದಾಳೆ.
ಈ ಕುರಿತು ತರಬೇತುದಾರ ತ್ರಿಭುವನ್ ನಿಶಾದ್ ಮಾತನಾಡಿದ್ದು, ವೃತಿಕಾ ಈಜು ಕಲಿಯಲು ಆರಂಭಿಸಿದ ಮೊದಲ ದಿನದಿಂದಲೇ ಕಠಿಣ ಪರಿಶ್ರಮದಿಂದ ನದಿಯನ್ನು ದಾಟಬೇಕೆಂಬ ಇಚ್ಛೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.