ಹೆಂಡತಿ ಶೀಲದ ಮೇಲೆ ಡೌಟ್‌ – 6 ವರ್ಷದ ಮಗು ಮುಂದೆ ಪತ್ನಿ ಕೊ*ಲೆ ಮಾಡಿ ಜೈಲು ಸೇರಿದ ಗಂಡ

ಹೆಂಡತಿ ಶೀಲದ ಮೇಲೆ ಡೌಟ್‌ – 6 ವರ್ಷದ ಮಗು ಮುಂದೆ ಪತ್ನಿ ಕೊ*ಲೆ ಮಾಡಿ ಜೈಲು ಸೇರಿದ ಗಂಡ

6 ವರ್ಷದ ಮಗು ಮುಂದೆಯೇ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿದ ಘಟನೆ  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದಿದೆ. ತನ್ನ ಪತ್ನಿಯ ಶೀಲದ ಬಗ್ಗೆ ಶಂಕಿಸಿ  ಈ ನೀಚ ಕೃತ್ಯವನ್ನ ಪಾಪಿ ಪತಿ ಎಸೆಗಿದ್ದಾನೆ.

ಶೋಭಾ ಸಾರವಾಡ್ (35)  ಕೊಲೆಯಾದ ಪತ್ನಿ. ಆರೋಪಿ ಪರಗೊಂಡ ಸಾರವಾಡ್ (37)  ಹೆಂಡತಿಯನ್ನು ಕೊಂದು ತಾನೇ ಹೋಗಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಡಿ ಗ್ಯಾಂಗ್‌ಗೆ ಮತ್ತೆ ಶಾಕ್ – ಸಾಕ್ಷಿಗೆ ಧಮ್ಕಿ ಹಾಕಿದ ಮೂವರು ಅರೆಸ್ಟ್

ಆರೋಪಿ ಪರಗೊಂಡ ಸಾರವಾಡ್ ಅವಜೀಕರ ಮಠದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.  ಪೊಲೀಸರ ಪ್ರಕಾರ, ಪರಗೊಂಡ್ ನಾಲ್ಕು ವರ್ಷಗಳಿಂದ ಪತ್ನಿ ಶೋಭಾ ಅವರ ಶೀಲದ ಬಗ್ಗೆ ಶಂಕಿಸುತ್ತಿದ್ದ. ಇದರಿಂದಾಗಿ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಎರಡು ಬಾರಿ ಶೋಭಾ ತವರು ಮನೆಗೆ ಹೋಗಿದ್ದರು. ನಂತರ ಹಿರಿಯರ ಸಹಾಯದಿಂದ ಅವರನ್ನು ಮತ್ತೆ ಕರೆತಂದಿದ್ದರು. ಎರಡು ಮಕ್ಕಳಿಗಾಗಿ ಅನಿವಾರ್ಯವಾಗಿ ಗಂಡನೊಂದಿಗೆ ಇದ್ದಳು. ಆದರೆ ಇದೀಗ ದುರಂತ ಅಂತ್ಯ ಕಂಡಿದ್ದಾಳೆ.

ಜೂನ್ 28 ರಂದು ಪತ್ನಿಯೊಂದಿಗೆ ಜಗಳವಾಡಿದ್ದ ಗಂಡ ಪರಗೊಂಡ್, ಮಲಗಿದ್ದ ಸಮಯದಲ್ಲಿ ಆರು ವರ್ಷದ ಮಗುವಿನ ಮುಂದೆಯೇ ಕೊಡಲಿಯಿಂದ ಹೊಡೆದು ಕೊಂದಿದ್ದಾನೆ. ಕೊಲೆ ಮಾಡಿದ ನಂತರ ಸೀದಾ ಪೊಲೀಸ್​ ಠಾಣೆಗೆ ಬಂದು ತಾನೇ ಕೊಲೆ ಮಾಡಿದ್ದನ್ನು ತಿಳಿಸಿದ್ದಾನೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅಥಣಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

Kishor KV

Leave a Reply

Your email address will not be published. Required fields are marked *