6 ರ ಪೋರನ ಕೈಯಲ್ಲಿ ʼಕಾಳಿಂಗʼ – ಹಗ್ಗದಂತೆ ಹಾವುಗಳನ್ನು ಹಿಡಿದುಕೊಳ್ಳುತ್ತಾನೆ ಬಾಲಕ!  

6 ರ ಪೋರನ ಕೈಯಲ್ಲಿ ʼಕಾಳಿಂಗʼ – ಹಗ್ಗದಂತೆ ಹಾವುಗಳನ್ನು ಹಿಡಿದುಕೊಳ್ಳುತ್ತಾನೆ ಬಾಲಕ!  

ಮಕ್ಕಳಿಗೆ ಆರು ವರ್ಷ ಆಯ್ತು ಅಂದ್ರೆ ಶಾಲೆಗಳತ್ತ ಮುಖ ಮಾಡುತ್ತಾರೆ. ಸ್ಲೇಟು, ಬಳಪ ಹಿಡಿದು ಅಕ್ಷರಾಭ್ಯಾಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆರರ ಪೋರ ಕಾಳಿಂಗ ಸರ್ಪದೊಂದಿಗೆ ಫ್ರೆಂಡ್‌ಶಿಪ್‌ ಬೆಳೆಸಿ ಅದರೊಂದಿಗೆ ಆಟವಾಡುತ್ತಿದ್ದಾನೆ. ಒಂಚೂರು ಭಯವಿಲ್ಲದೆ ಸರ್ಪವನ್ನು ಕೈಯಲ್ಲಿ ಹಿಡಿದು ಅದರೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾನೆ.

ಇದನ್ನೂ ಓದಿ: ಕೇವಲ 11 ನಿಮಿಷದಲ್ಲಿ ಈಜಿಕೊಂಡು ಯಮುನಾ ನದಿ ದಾಟಿದ 6 ವರ್ಷದ ಬಾಲಕಿ!

ವಿಷಕಾರಿಯಾಗಲಿ, ವಿಷವಿಲ್ಲದ ಹಾವೇ ಆಗಲಿ ಹಾವುಗಳೆಂದರೆ ಬಹುತೇಕರಿಗೆ ಭಯ ಇದ್ದೇ ಇರುತ್ತದೆ. ಸಣ್ಣ ಕೇರೆ ಹಾವು ನೋಡಿದ್ರೂ ಎಂತವರೇ ಆದ್ರೂ ಭಯಪಟ್ಟು ದೂರ ಓಡಿಹೋಗುತ್ತಾರೆ. ಆದರೆ ಇಲ್ಲೊಬ್ಬ ಆರು ವರ್ಷದ ಬಾಲಕ ಕಾರು, ಗೊಂಬೆಗಳ ಜೊತೆ ಆಟ ಆಡುವ ಬದಲು ಹಾವುಗಳೊಂದಿಗೆ ಆಟವಾಡುತ್ತಾ ಕಾಲಕಳೆಯುತ್ತಿದ್ದಾನೆ.

ಈ ಬಾಲಕನ ಹೆಸರು ವಿರಾಜ್‌. ಈತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆಎಚ್ ಬಿ ಕಾಲೋನಿಯ ನಿವಾಸಿ ಉರಗ ರಕ್ಷಕರಾದ ಪ್ರಶಾಂತ್ ಹುಲೇಕರ್ ರ ಮಗ. ಕೆಎಚ್ ಬಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ವಿದ್ಯಾಭ್ಯಾಸದ ಜೊತೆಗೆ ವಿರಾಜ್‌ ಕಳೆದ ಎರಡು ವರ್ಷದಿಂದ ಅಪ್ಪನೊಂದಿಗೆ ಹಾವಿನ ಬಗ್ಗೆ ಕಲಿಯಲು, ಬೆರೆಯಲು ಆರಂಭಿಸಿದ್ದಾನೆ. ಆತ ಹಾವು ಹಿಡಿಯುವುದನ್ನು ಕಲಿತು ಕರಗತ ಮಾಡಿಕೊಂಡಿದ್ದಾನೆ. ವಿರಾಜ್‌ ಅಪ್ಪನ ಸಹಕಾರ, ಮಾರ್ಗದರ್ಶನ ಪಡೆದೇ ವಿರಾಜ್‌ ಹಾವು ಪಳಗಿಸುತ್ತಿದ್ದಾನೆ.

ವಿರಾಜ್‌ ಹಾವುಗಳ ಜೊತೆಗೂ ಯಾವುದೇ ಭಯವಿಲ್ಲದೇ ಬೆರೆಯುತ್ತಾನೆ. ಬಾಲಕ ವಿರಾಜ್‌ ಅದೆಷ್ಟೇ ವಿಷಸರ್ಪಗಳಾದರೂ ಅವುಗಳನ್ನ ಪಳಗಿಸುವ ಕಲೆ ಹೊಂದಿದ್ದಾನೆ. ಹಾಗಾಗಿಯೇ ಇನ್ನೂ ಆರನೇ ವಯಸ್ಸಿನ ವಿರಾಜ್‌, ತನಗಿಂತ ಗಾತ್ರದಲ್ಲಿ ಉದ್ದವಾದ ಹಾವುಗಳನ್ನು ಹೂವುಗಳಂತೆ ಹಿಡಿದು ನಿಯಂತ್ರಿಸುತ್ತಾನೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

suddiyaana