ರಾಜ್ಯದಲ್ಲಿ ಕುರ್ಚಿ ಕದನ – ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ ಬಣದ 6 ಸಚಿವರು

ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನ ಜೋರಾಗಿ ಸದ್ದು ಮಾಡ್ತಿದೆ. ಪವರ್ ಶೇರಿಂಗ್ ವಿಚಾರ ಹೈಕಮಾಂಡ್ ಅಂಗಳದಲ್ಲಿದ್ದು, ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ನಿಂದ 6 ಸಚಿವರು ದೆಹಲಿಗೆ ಹೋಗಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಬುಲ್‌ಡಾಗ್ ದಾಳಿಗೆ ಪ್ರಾಣ ಕಳೆದುಕೊಂಡ 4 ವರ್ಷದ ಬಾಲಕಿ! – ಚರ್ಮ ಸಮೇತ ಕೂದಲು ಕಿತ್ತು ಕೊಂದ ನಾಯಿ!
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷದ ತುಂಬಿದ ಬೆನ್ನಲ್ಲೇ ಸಿಎಂ ಕುರ್ಚಿ ಕದನ ಏರ್ಪಟ್ಟಿದೆ. ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಕರೆದರೆ ನಾವು ಹೋಗ್ತೀವಿ ಅಂತ ಹೇಳಿಕೆ ಕೊಟ್ಟಿದ್ದರು. ಆದ್ರೆ ಕೆಲದಿನಗಳ ಹಿಂದೆಯಷ್ಟೇ ಡಿಕೆ ಶಿವಕುಮಾರ್ ಬಣದ ನಾಯಕರು ದೆಹಲಿಗೆ ಹೋಗಿ ಬಂದಿದ್ದರು. ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಅವರು ಸಭೆ ನಡೆಸಿದ್ದಾರೆ. ಈಗ ಡಿಸಿಎಂಗೆ ಟಕ್ಕರ್ ಕೊಡಲು ಸಿಎಂ ಕ್ಯಾಂಪ್‌ನಿಂದ ಹಿರಿಯ ನಾಯಕರು ದೆಹಲಿ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಚಿವರು ದೆಹಲಿ ದಂಡಯಾತ್ರೆ ಹೋಗಲಿದ್ದಾರೆ. ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಇನ್ನಿಬ್ಬರು ಸಚಿವರು ನಾಳೆಯೇ ದೆಹಲಿಗೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ನಮಗೆ ಸಾಕಷ್ಟು ಗೊಂದಲಗಳಿವೆ. ನಾಳೆಯೇ ದೆಹಲಿಗೆ ಹೋಗಿ ಕ್ಲಾರಿಟಿ ಪಡೆದುಕೊಳ್ಳುತ್ತೇವೆ ಎಂಬ ವಿಚಾರವನ್ನು ಪರಮೇಶ್ವರ್ ಅವರು ಸಿಎಂ ಮುಂದಿಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಆಯ್ತು ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನಲಾಗಿದೆ.

ನೋಡಿರಿ

